ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅಧ್ಯಾತ್ಮ, ಸಂಸ್ಕೃತಿಯ ಚಿಂತನೆ ಜಗತ್ತಿಗೆ ಸಾರಿದ ಚೇತನ

ಜಿಲ್ಲೆಯ ವಿವಿಧೆಡೆ ವಿವೇಕಾನಂದರ ಜಯಂತ್ಯುತ್ಸವ
Last Updated 16 ಜನವರಿ 2017, 7:13 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಕಾಲೇಜಿನಲ್ಲಿ ಗುರುವಾರ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. 

ಪ್ರಾಚಾರ್ಯ ಸಂಜಯ ಪೂಜಾರಿ ಮಾತನಾಡಿ, ‘ಸ್ವಾಮಿ ವಿವೇಕಾನಂದರ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನವಾಗಿವೆ. ಜೀವನದಲ್ಲಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಅವರು ನೀಡಿದ ಧ್ಯೇಯ, ಆದರ್ಶ ಗುಣಗಳೊಂದಿಗೆ ಬದುಕು ಸಾಗಿಸಬೇಕು. ಸರಳತೆಯ ಧೃಡಸಂಕಲ್ಪ ಮಾಡಿ ದೇಶ ಸೇವೆ ಮಾಡಲು ಭಾರತೀಯ ಯುವಕರು ಮುಂದಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ರಾಜು ಜೋಶಿ, ‘ಸ್ವಾಮಿ ವಿವೇಕಾನಂದರು ನೀಡಿದ ಆದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಯುವಜನರು ಇವುಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಸೇವಾಯೋಜನೆ ಅಧಿಕಾರಿ ಪ್ರೊ. ಕಿರಣ ಪೋತದಾರ, ದೈಹಿಕ ಶಿಕ್ಷಣ ನಿರ್ದೇಶಕ ವಿಶಾಂತ ದಾಮೋಣೆ, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಮುಖ್ಯಸ್ಥ ಪ್ರೊ.ಎಂ.ವಿ. ಕಂಠಿ ಸ್ವಾಗತಿಸಿದರು.

ಈಶ್ವರೀಯ ವಿಶ್ವವಿದ್ಯಾಲಯ: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಯುವಪ್ರಭಾಗದ ವತಿಯಿಂದ ಭಾಗ್ಯನಗರಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸ್ವಾಮಿ ವಿವೇಕಾನಂದರ ಪರವಾಗಿ ತಾಸುಗಟ್ಟಲೆ ಭಾಷಣ ಮಾಡುವುದಕ್ಕಿಂತ ಅವರಂತೆ ನೈತಿಕತೆಯನ್ನು ಹಾಗೂ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ, ಸೌರಭ ಹೆಗಡೆ, ಪ್ರತಿಭಾ ಮಾತನಾಡಿದರು. ಅನುರಾಧಾ ಈಶ್ವರೀಯ ವಿಶ್ವವಿದ್ಯಾಲಯದ ಪರಿಚಯ ನೀಡಿದರು. ಬಿ.ಕೆ. ನಾಗರತ್ನಾ ಯುವಪ್ರಭಾಗದ ಚಟುವಟಿಕೆಗಳನ್ನು ತಿಳಿಸಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮೀನಾಕ್ಷಿ, ಮಹಾದೇವಿ, ಸುಲೋಚನಾ, ಪೂರ್ಣಿಮಾ, ತನುಜಾ, ಶಿವಲೀಲಾ, ಶಿವಾನಂದ, ಶಿವಪುತ್ರ, ದತ್ತಾತ್ರೇಯ, ಕಾಮತ, ಮೃತ್ಯುಂಜಯ ಭಾಗವಹಿಸಿದ್ದರು. ಶೋಭಾ ಸ್ವಾಗತಿಸಿದರು. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ರೂಪಾ ವಂದಿಸಿದರು.

ಇದಕ್ಕೂ ಮುನ್ನ ಗೋಮಟೇಶ ವಿದ್ಯಾಪೀಠದಿಂದ ಹೊರಟ ಶಾಂತಿಯಾತ್ರೆ ಗೋಗಟೆ ಕಾಲೇಜು, ಜಿ.ಎಸ್. ಎಸ್. ಕಾಲೇಜು, ಆರ್.ಪಿ.ಡಿ. ಕ್ರಾಸ್, ಅನಗೊಳ ಮಾರ್ಗವಾಗಿ ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ  ಮುಕ್ತಾಯಗೊಂಡಿತು. ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

‘ದೇಶಕ್ಕೆ ಯುವಕರೇ ಭರವಸೆಯ ಬೆಳಕು’
ಮೂಡಲಗಿ:
ದೇಶದ ಬಲಿಷ್ಠತೆ, ಅಭಿವೃದ್ಧಿಗೆ ಯುವಕರ ಮೇಲೆ ಬಹಳಷ್ಟು ಭರವಸೆಯನ್ನು ಸ್ವಾಮಿ ವಿವೇಕಾನಂದರು ಇಟ್ಟುಕೊಂಡಿದ್ದರು ಎಂದು ಪುರಸಭೆಯ ಉಪಾಧ್ಯಕ್ಷ ಆರ್.ಪಿ. ಸೋನವಾಲ್ಕರ್‌ ಹೇಳಿದರು.

ಇಲ್ಲಿಯ ಸ್ವಾಮಿ ವಿವೇಕಾನಂದ ನಗರ ಮತ್ತು ಗ್ರಾಮಾಭಿವೃದ್ಧಿ ಸಂಘದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 154ನೇ ಜಯಂತ್ಯುತ್ಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ದೇಶದ ಮುನ್ನಡೆಗೆ ಯುವಕರು ಸಿದ್ಧರಿರರಬೇಕು ಎಂದರು.

ಪುರಸಭೆ ಸದಸ್ಯ ರಾಮಣ್ಣ ಹಂದಿಗುಂದ, ಪ್ರಕಾಶ ಈರಪ್ಪನವರ, ಈರಣ್ಣಾ ಬನ್ನೂರ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಸಂತ್ರಾಮ ನಾಶಿ, ಕಾರ್ಯದರ್ಶಿ ಶಿವಾನಂದ ಮುಧೋಳ, ಸದಸ್ಯ ಮಹೇಶ ಹಿರೇಮಠ ಇದ್ದರು.

ಪ್ರಗತಿಪರ ಗ್ರಾಮೀಣಾಭಿವೃದ್ಧಿ ಸಂಸ್ಥೆ: ಭಾರತ ದೇಶದ ಕೀರ್ತಿ ಪರಿಮಳವನ್ನು ವಿಶ್ವದಾದ್ಯಂತ ಪಸರಿಸಿದ ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕ ಕಿರೀಟವಾಗಿದ್ದಾರೆ ಎಂದು ಪ್ರಗತಿಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಈರಣ್ಣಗೌಡ ಪಾಟೀಲ ಹೇಳಿದರು.

ಇಲ್ಲಿಯ ಪ್ರಗತಿಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀ ಎಂ.ಬಿ.ಪಾಟೀಲ ಪದವಿ ಪೂರ್ವ ಕಾಲೇಜು ಮತ್ತು ಬಿ.ಎಸ್.ಡಬ್ಲೂ. ಪದವಿ ಕಾಲೇಜಿನಲ್ಲಿ  ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿ.ಎಲ್.ಘಂಟಿ ಮಾತನಾಡಿ, ಹೆಣ್ಣು ಜಗನ್ಮಾತೆಯ ಪ್ರತಿಬಿಂಬ. ಹಕ್ಕಿ ಒಂದೇ ರೆಕ್ಕೆಯಿಂದ ಹಾರದು, ಮಹಿಳೆಯರ ಉದ್ಧಾರದಿಂದಲೇ ದೇಶದ ಘನತೆ–ಗೌರವ ಆಕಾಶದೆತ್ತರಕ್ಕೆ ಹೋಗುತ್ತಎಂದು ವಿವೇಕಾನಂದರು ಹೇಳಿರುವ ವಿಚಾರದ ಚಿಂತನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಟಿ.ಎಸ್.ವಂಟಗೂಡಿ. ಸುಖದೇವ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಮಾನಶೆಟ್ಟಿ, ಪುರಸಭೆ ಸದಸ್ಯ ಸಂತೋಷ ಸಿಂಗಾಡಿ, ರವೀಂದ್ರ ಪಾಟೀಲ, ಎಸ್.ಎಂ. ಪಾಟೀಲ, ಭರತೇಶ ಆಲಗೂರ, ಆರ್.ಜೆ. ಪಾಟೀಲ, ಪಿ.ಎಸ್. ಪೂಜಾರ, ಎಂ.ವೈ. ದೊಡಮನಿ, ಎಂ.ಜೆ. ಸದಲಗಿ, ರಾಕೇಶ ಕಾಂಬಳೆ, ಆನಂದ ಮ್ಯಾಗಿಮನಿ, ಪಿ.ಎಸ್. ಪಡನಾಡ, ಯು.ಎಂ. ಪಕಾಲೆ, ಹಣಮಂತ ಅಥಣಿ ಉಪಸ್ಥಿತರಿದ್ದರು. ಎಸ್.ಎಂ. ಪಾಟೀಲ ಸ್ವಾಗತಿಸಿದರು. ಪ್ರಿಯಾ ದರೂರ ನಿರೂಪಿಸಿದರು. ಪಿ.ಎಸ್. ಪೂಜಾರ ವಂದಿಸಿದರು.

‘ಆಧ್ಯಾತ್ಮಿಕ ಕಿರೀಟ’
ಹಾರೂಗೇರಿ:
ಭಾರತ ದೇಶದ ಕೀರ್ತಿ ಪರಿಮಳವನ್ನು ವಿಶ್ವದಾದ್ಯಂತ ಪಸರಿಸಿದ ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕ ಕಿರೀಟವಾಗಿದ್ದಾರೆ ಎಂದು ಪ್ರಗತಿಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಈರಣ್ಣಗೌಡ ಪಾಟೀಲ ಹೇಳಿದರು.

ಇಲ್ಲಿಯ ಪ್ರಗತಿಪರ  ಗ್ರಾಮೀಣಾ ಭಿವೃದ್ಧಿ ಸಂಸ್ಥೆಯ ಶ್ರೀ ಎಂ.ಬಿ.ಪಾಟೀಲ ಪದವಿ ಪೂರ್ವ ಕಾಲೇಜು ಮತ್ತು ಬಿ.ಎಸ್.ಡಬ್ಲೂ. ಪದವಿ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಿಕಾಗೊದ ವಿಶ್ವಧರ್ಮ ಸಮ್ಮೇಳನದಲ್ಲಿ ತಮ್ಮ ಅಂತರಂಗದ ಮಾತುಗಳಿಂದ ವಿಶ್ವ ಮಾನವ ಸಂದೇಶ ಸಾರಿ ಎಲ್ಲರ ಮನಗೆದ್ದ ವಾಗ್ಮಿ ಸ್ವಾಮಿ ವಿವೇಕಾನಂದರು  ಎಂದು ತಿಳಿಸಿದರು.

ಬಿ.ಎಲ್.ಘಂಟಿ ಮಾತನಾಡಿ, ಹೆಣ್ಣು ಜಗನ್ಮಾತೆಯ ಪ್ರತಿಬಿಂಬ. ಹಕ್ಕಿ ಒಂದೇ ರೆಕ್ಕೆಯಿಂದ ಹಾರದು, ಮಹಿಳೆಯರ ಉದ್ಧಾರದಿಂದಲೇ ದೇಶದ ಘನತೆ–ಗೌರವ ಆಕಾಶದೆತ್ತರಕ್ಕೆ ಹೋಗುತ್ತದೆ ಎಂದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಹೇಳಿದ ಚಿರಂಜೀವಿ ವಾಣಿ ಸ್ತ್ರೀಯರನ್ನು ನೋಡುವ ದೃಷ್ಟಿಗೆ ದಾರಿದೀಪ. ವಿವೇಕಾನಂದರು ಜಗತ್ತಿನ ಸಾರ್ವಭೌಮ ಶಕ್ತಿಗಳನ್ನೆಲ್ಲ ಕೈವಶ ಮಾಡಿಕೊಂಡಿದ್ದ ಪರಿ ಯುವಕರ ಅರ್ಥಪೂರ್ಣ ಬದುಕಿಗೆ ಚಿರಸ್ಫೂರ್ತಿಯೆಂದು ಅಭಿಮತ ವ್ಯಕ್ತಪಡಿಸಿದರು.

ಪ್ರಾಚಾರ್ಯ ಟಿ.ಎಸ್.ವಂಟಗೂಡಿ. ಸುಖದೇವ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಂಕರ ಮಾನಶೆಟ್ಟಿ, ಪುರಸಭೆ ಸದಸ್ಯ ಸಂತೋಷ ಸಿಂಗಾಡಿ, ರವೀಂದ್ರ ಪಾಟೀಲ, ಎಸ್.ಎಂ. ಪಾಟೀಲ, ಭರತೇಶ ಆಲಗೂರ, ಆರ್.ಜೆ. ಪಾಟೀಲ, ಪಿ.ಎಸ್. ಪೂಜಾರ, ಎಂ.ವೈ. ದೊಡಮನಿ, ಎಂ.ಜೆ. ಸದಲಗಿ, ರಾಕೇಶ ಕಾಂಬಳೆ, ಆನಂದ ಮ್ಯಾಗಿಮನಿ, ಪಿ.ಎಸ್. ಪಡನಾಡ, ಯು.ಎಂ. ಪಕಾಲೆ, ಹಣಮಂತ ಅಥಣಿ ಉಪಸ್ಥಿತರಿದ್ದರು. ಎಸ್.ಎಂ. ಪಾಟೀಲ ಸ್ವಾಗತಿಸಿದರು. ಪ್ರಿಯಾ ದರೂರ ನಿರೂಪಿಸಿದರು. ಪಿ.ಎಸ್. ಪೂಜಾರ ವಂದಿಸಿದರು.

‘ಸಂಸ್ಕೃತಿ ಕಾಪಾಡಿ’
ಗೋಕಾಕ
: ದೇಶದ ಸಂಸ್ಕೃತಿಯ ಭಾಗವಾಗಿರುವ ಶಾಸ್ತ್ರೀಯ ಸಂಗೀತವನ್ನು ಮಕ್ಕಳಿಗೆ ಕಲಿಸಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಿರೆಂದು ನಗರ ಸಭೆ ಸದಸ್ಯೆ ವಾಣಿಶ್ರೀ ಸಾಯನ್ನವರ ಹೇಳಿದರು.

ಶುಕ್ರವಾರ ಸಂಜೆ ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಇಲ್ಲಿಯ ರಾಜ ರಾಜೇಶ್ವರಿ ಸಂಗೀತ ವಿದ್ಯಾಲಯದವರು ಹಮ್ಮಿಕೊಂಡ 154ನೇ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ವಿದ್ಯಾಲಯದ 14ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಶಾಸ್ತ್ರೀಯ ಸಂಗೀತದ ಆಸಕ್ತಿ ಮೂಡಿಸಿ ಸಂಸ್ಕೃತಿಯನ್ನು ಬೆಳೆಸಿ, ಸಂಗೀತದಿಂದ ಮಾನಸಿಕವಾಗಿ ಸದೃಢರಾಗಿ ಶಿಕ್ಷಣ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ನೀಡಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವಂತೆ ವಿನಂತಿಸಿದರು.

ಕೆಎಲ್ಇ ಶಾಲೆಯ ಮುಖ್ಯ ಶಿಕ್ಷಕಿ ಅನುಪಾ ಕೌಶಿಕ ಮಾತನಾಡಿ, ನೆಮ್ಮದಿಯ ಜೀವನಕ್ಕೆ ಹವ್ಯಾಸಗಳು ಅತಿ ಅವಶ್ಯ, ಸಂಗೀತದಂತಹ ಹವ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡರೇ ಬದುಕು ಸುಂದರವಾಗಿರುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಗಣ್ಯರು ವಿತರಿಸಿದರು. ಹಿರಿಯ ಸಂಗೀತ ಕಲಾವಿದೆ ಶಶಿ ಉದ್ಯಾವರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಲಯ ಮಕ್ಕಳಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ, ವಾದನ, ಜಾನಪದ, ಭಕ್ತಿ ಸಂಗೀತ, ಭಾವಗೀತೆ, ದೇಶ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆಯನ್ನು ಗಣ್ಯ ವ್ಯಾಪಾರಸ್ಥರ ಮಂಜುನಾಥ ಹೆಗಡೆ ವಹಿಸಿದ್ದರು.

ಪ್ರಾಚಾರ್ಯೆ ಚಂದ್ರಕಲಾ ಹೆಗಡೆ, ಕಲಾವಿದರಾದ ವಿಜಯ ದೊಡ್ಡನ್ನವರ, ಆನಂದ ಸಂಗಮ, ಡಾ. ರಶ್ಮಿ ಬೂದಿಹಾಳ ಉಪಸ್ಥಿತರಿದ್ದರು.
ರಾಜೇಶ್ವರಿ ಪಾಟೀಲ ನಿರೂಪಿಸಿದರು. ವೇದಾ ಸಂಗಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT