ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಿನ ಮಹತ್ವ ಅರಿತು ಹಿತಮಿತವಾಗಿ ಬಳಸಿ’

Last Updated 16 ಜನವರಿ 2017, 7:14 IST
ಅಕ್ಷರ ಗಾತ್ರ

ಹುಕ್ಕೇರಿ: ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆ ಅನುಷ್ಠಾನಗೊಳಿಸುತ್ತದೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ತಾಲ್ಲೂಕಿನ ಶಿರಗಾಂವದಲ್ಲಿ  ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ  ₹ 10 ಲಕ್ಷ  ವೆಚ್ಚದಲ್ಲಿ ನಿರ್ಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಭವನಕ್ಕಾಗಿ ಭೂದಾನ ಮಾಡಿದ ಕೆ.ಎಸ್.ಆರ್.ಟಿ.ಸಿ ನಿವೃತ್ತ ಉದ್ಯೋಗಿ ಪರಪ್ಪ ಶಿರಗಾಂವಕರ ಅವರನ್ನು ಸತ್ಕರಿಸಿದರು.

ಉದ್ಘಾಟನೆ:  ಇದೇ ಸಂದರ್ಭದಲ್ಲಿ ಶಿರಗಾಂವ -ರಕ್ಷಿ ಹಳ್ಳದ ಕರಬಟ್ ರಸ್ತೆಗೆ ₹ 1.20 ಕೋಟಿ  ವೆಚ್ಚದಲ್ಲಿ ನಿರ್ಮಿಸಿದ ಬಾಂದಾರು ಸೇತುವೆ, ನೂತನ ರಸ್ತೆ ಉದ್ಘಾಟನೆ ಹಾಗೂ ಬಾಂದಾರಿನಲ್ಲಿ ಬಾಗಿನ ಅರ್ಪಿಸಲಾಯಿತು.

ಬಾಂದಾರ ನಿರ್ಮಾಣದಿಂದ ಅಂತರ್ಜಲ ಹೆಚ್ಚಾಗಿ ನೀರಾವರಿ ಸೌಲಭ್ಯಕ್ಕೆ ಅನುಕೂಲವಾಗಿದೆ. ಜನರು ನೀರಿನ ಮಹತ್ವ ಅರಿತು ಹಿತ ಮಿತವಾಗಿ ನೀರು ಬಳಕೆ ಮಾಡಿಕೊಳ್ಳಬೇಕು.

ತಾಲ್ಲೂಕಿನ ಹೊನ್ನಿಹಳ್ಳಿ, ಶೇಕಿನ ಹೊಸೂರ,ಹೊನ್ನಿಹಳ್ಳಿ ಸೈಟ್ 2, ಹರಗಾಪುರ, ಎಲಿಮುನ್ನೋಳಿ, ಬೆಳವಿ ಮತ್ತು ರಕ್ಷಿ ಗ್ರಾಮಗಳ ಕೆರೆ ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದರು.

ಪ್ರಮುಖರಾದ ಅಜ್ಜಪ್ಪಾ ಕಲ್ಲಟ್ಟಿ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಪಿ.ಶಿರಗಾಂವಕರ, ಜಿಲ್ಲಾ ಪಂಚಾಯ್ತಿ ಸದಸ್ಯ ಅರ್ಜುನ ಪಾಟೀಲ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಬಸವರಾಜ ಕಲ್ಲಟ್ಟಿ, ಆನಂದ ನಾಡಗೌಡ, ಬಾಳಪ್ಪ ಗಸ್ತಿ, ಮದಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕೆಂಪವ್ವ ಮಾದರ, ಎಂಜಿನಿಯರ್ ಎಸ್.ಡಿ. ಕಾಂಬಳೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಚನ್ನಯ್ಯನವರ, ಪಿ.ಕೆ.ಪಿ.ಎಸ್ ಅಧ್ಯಕ್ಷ ಮಲ್ಲು ತೇರಣಿ, ಗ್ರಾಮದ ಗಣ್ಯರಾದ ರಾಜು ಬಿರಾದಾರ ಪಾಟೀಲ, ಸುರೇಶ ತೇರಣಿ,ರಕ್ಷೆಪ್ಪ ರಾಮನಕಟ್ಟಿ, ಬಸವರಾಜ ಗಂಗನ್ನವರ ಮತ್ತಿತರರು ಉಪಸ್ಥಿತರಿದ್ದರು. ರವಿ ಹಿಡಕಲ್ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT