ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಗಾಗಿ ಶ್ರಮಿಸಿದ ಸಿದ್ಧರಾಮೇಶ್ವರ

ವೈಭವದ ಮೆರವಣಿಗೆ, ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ತಹಶೀಲ್ದಾರ್‌ ರಾಘವೇಂದ್ರರಾವ್‌ ಅಭಿಪ್ರಾಯ
Last Updated 16 ಜನವರಿ 2017, 8:37 IST
ಅಕ್ಷರ ಗಾತ್ರ

ಹೂವಿನಹಡಗಲಿ: ‘ವಚನಕಾರ ಶಿವಯೋಗಿ ಸಿದ್ಧರಾಮೇಶ್ವರರು ಜಾತಿ, ವರ್ಗ ರಹಿತ ಸಮ ಸಮಾಜ ನಿರ್ಮಿ­ಸುವುದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು’ ಎಂದು ತಹಶೀ­ಲ್ದಾರ್ ಕೆ.ರಾಘವೇಂದ್ರರಾವ್ ಹೇಳಿದರು.

ತಾಲ್ಲೂಕು ಪಂಚಾಯ್ತಿ ಮಲ್ಲಿಗೆ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಅವರು ಮಾತನಾಡಿದರು.

‘ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಸಿದ್ಧರಾಮೇಶ್ವರರು ಸಮಾಜ ತಿದ್ದುವ ವಚನ ರಚಿಸುವ ಮೂಲಕ ಅಸಾಮಾನ್ಯ ವಚನಕಾರರಾಗಿ ರೂಪುಗೊಂಡಿದ್ದರು. ಉತ್ತಮ ಸಮಾಜಕ್ಕಾಗಿ ದಾರ್ಶನಿಕರು, ದಾಸರು, ಸಂತರು, ಶಿವಯೋಗಿಗಳು ಮಹತ್ತರ ಕೊಡುಗೆ ನೀಡಿರುವ ಫಲವಾಗಿ ಇಂದು ನಾವೆಲ್ಲಾ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ’ ಎಂದರು.

‘ವೈಜ್ಞಾನಿಕವಾಗಿ ದೇಶ ಮುಂದುವರಿದಿದ್ದರೂ ಜಾತಿ, ಮತ ಭೇದಗಳು ಹೆಚ್ಚಾಗುತ್ತಲೇ ಇವೆ. ಎಲ್ಲ ಸಮಾಜಗಳು ಒಟ್ಟಾಗಿ ತಾರತಮ್ಯ ರಹಿತ ಜೀವನ ನಡೆಸಲಿ ಎಂಬ ಸದಾಶ­ಯದಿಂದ ಮಹಾತ್ಮರ ಜಯಂತಿಗಳನ್ನು ಸರ್ಕಾರವೇ ಆಚರಿಸುತ್ತಿದೆ. ದಾರ್ಶನಿಕರ ತತ್ವಾದರ್ಶ, ಚಿಂತನೆಗಳನ್ನು ಪ್ರತಿ­ಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಹೊನ್ನಪ್ಪ ಕಣವಿ ಕಾರ್ಯಕ್ರಮ ಉದ್ಘಾ­ಟಿ­ಸಿದರು. ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ವಿ.ದುರುಗಪ್ಪ, ಸಾಹಿತಿ ಡಾ. ಅಂಜನಾ ಕೃಷ್ಣಪ್ಪ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿ­ರ್ವಾಹಕ ಅಧಿಕಾರಿ ಕೆ.ಕೃಷ್ಣಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ, ಬಸವ ಕೇಂದ್ರದ ಅಧ್ಯಕ್ಷ ಪರಶೆಟ್ಟಿ ಮಲ್ಲಣ್ಣ, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಹೊಸಕೇರಿ ಬೀರಪ್ಪ, ಆರ್ಯ ಈಡಿಗರ ಸಮಾಜದ ಅಧ್ಯಕ್ಷ ಈಡಿಗರ ಕೃಷ್ಣಪ್ಪ, ಶ್ರೀನಿವಾಸ ಭೋವಿ, ಬಿ.ಕರಿಯಪ್ಪ, ಅಂಜಿನಪ್ಪ, ವಿ.ತಿಪ್ಪೇಶ, ಭೋವಿ ಯಲ್ಲಪ್ಪ, ತಳಕಲ್ಲು ವೆಂಕಟೇಶ ಇತರರು ಇದ್ದರು.

ಅಚ್ಯುತಾನಂದ ಪ್ರಾರ್ಥಿಸಿದರು. ಪ್ರಕಾಶ ಜೈನ್ ಸಂಗಡಿಗರು ಸಿದ್ಧರಾಮೇಶ್ವರರ ವಚನ ಹಾಡಿದರು. ಸಮಾಜ ಕಲ್ಯಾಣಾಧಿಕಾರಿ ಕೆ.ಎಂ.ಜಯದೇವಯ್ಯ ಸ್ವಾಗತಿಸಿದರು. ಎಂ. ಚಿದಾನಂದ ನಿರೂಪಿಸಿದರು. ಬೋವಿ ತಿಪ್ಪೇಶ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರ ಮೆರವಣಿಗೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT