ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಣೆ ಕೇಂದ್ರವಾದ ಮಹಿಳಾ ಕುಸ್ತಿಪಟುಗಳು

ಕನಕೋತ್ಸವದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯ; ನೋಡುಗರಿಗೆ ರಸದೌತಣ
Last Updated 16 ಜನವರಿ 2017, 8:50 IST
ಅಕ್ಷರ ಗಾತ್ರ

ಕನಕಪುರ: ಕನಕೋತ್ಸವ 2017ರ ಕೊನೆಯ ದಿನವಾದ ಭಾನುವಾರ 32 ಜೋಡಿ ಜಿದ್ದಾ–ಜಿದ್ದಿನ ಕುಸ್ತಿ ಪಂದ್ಯಾವಳಿ  ನಡೆದು ಕುಸ್ತಿ ಪ್ರಿಯರಿಗೆ ರಸದೌತಣ ನೀಡಿದವು.
ಗ್ರಾಮೀಣ ಕ್ರೀಡೆಯಲ್ಲಿ ಅತಿ ಮುಖ್ಯವಾದ ಹಾಗೂ ಕಸರತ್ತಿನ ಕ್ರೀಡೆಯೆನಿಸಿರುವುದು ಕುಸ್ತಿ, ಪ್ರಾರಂಭದ ದಿನಗಳಲ್ಲಿ ಪುರುಷರಿಗೆ ಸೀಮಿತವಾಗಿದ್ದ ಕುಸ್ತಿ ಪಂದ್ಯಾವಳಿಗಳು ದಿನಕಳೆದಂತೆ ಮಹಿಳೆಯರನ್ನು ಆಕರ್ಷಿಸಿತು. ಅವರು ಸಹ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನದೊಂದಿಗೆ ತಾವು ಸಮರ್ಥರೆಂದು ತೋರುತ್ತಿದ್ದಾರೆ.

ಭಾನುವಾರ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟದಲ್ಲಿ ಪಂದ್ಯಗಳನ್ನು ನೀಡಿರುವ ನುರಿತ ಕುಸ್ತಿ ಪಟುಗಳು ಆಗಮಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 27 ಪುರುಷ ಜೋಡಿಗಳು, 5 ಮಹಿಳಾ ಜೋಡಿಗಳು ಪಾಲ್ಗೊಂಡು ಕುಸ್ತಿ ನಡೆಸಿಕೊಟ್ಟರು.

ಒಬ್ಬರಿಗಿಂತ ಒಬ್ಬರು ಉತ್ತಮ ಪಟುಗಳಾಗಿದ್ದು ಬಹುತೇಕ ಜೋಡಿಗಳು ಸಮಬಲದ ಹೋರಾಟ ನಡೆಸಿದರು. ಮತ್ತೆ ಕೆಲವರು ಉತ್ತಮ ಪ್ರದರ್ಶನ ನೀಡಿ ಚಿತ್ತ(ಔಟ್‌) ಆದರು. ಮಹಿಳಾ ಕುಸ್ತಿ ಪಟುಗಳಂತೂ ಪುರುಷರಿಗೆ ಸರಿಸಮಾನವಾಗಿ ಕುಸ್ತಿಪ್ರದರ್ಶಿಸಿ ನೋಡುಗರಿಂದ ಮೆಚ್ಚುಗೆ ಪಡೆದು ಚಪ್ಪಾಳೆ ಗಿಟ್ಟಿಸಿದರು.

ಪುರುಷ ವಿಭಾಗದಲ್ಲಿ ಗೆದ್ದವರಿಗೆ ₹ 6 ಸಾವಿರ, ಸೋತವರಿಗೆ ₹ 4 ಸಾವಿರ, ಸಮಬಲ ಪ್ರದರ್ಶನ ಮಾಡಿದರೆ ಇಬ್ಬರಿಗೂ ತಲಾ ₹ 5 ಸಾವಿರ ಮತ್ತು ಟ್ರೋಫಿ, ಪ್ರಶಸ್ತಿ ಪತ್ರ ನೀಡಲಾಯಿತು. ಮಹಿಳೆ ವಿಭಾಗದಲ್ಲಿ ತಲಾ ₹ 7500 ಮತ್ತು ಪ್ರಶಸ್ತಿ ಪತ್ರ ಹಾಗೂ ಗೆದ್ದವರಿಗೆ ಸೋತವರಿಗಿಂತ ಭಿನ್ನವಾದ ಟ್ರೋಫಿ ನೀಡಲಾಯಿತು.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕುಸ್ತಿ ಪಂದ್ಯಾವಳಿಗಳು ನಡೆದವು, ತಾಲ್ಲೂಕು ಸೇರಿದಂತೆ ಜಿಲ್ಲೆಯಿಂದ ಕುಸ್ತಿ ಪ್ರೇಮಿಗಳು ಹಾಗೂ ಕುಸ್ತಿಪಟುಗಳು, ಮಾಜಿ ಪೈಲ್ವಾನ್‌ ರು, ಮಹಿಳೆಯರು ಕಾರ್ಯಕ್ರಮಕ್ಕೆ ಬಂದು ಕುಸ್ತಿ ಪಂದ್ಯಾವಳಿ ವೀಕ್ಷಣೆ
ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT