ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

146 ವರ್ಷಗಳ ‘ದಿ ಗ್ರೇಟೆಸ್ಟ್‌ ಷೋ ಆನ್‌ ಅರ್ಥ್‌’ ಅಂತ್ಯ

Last Updated 16 ಜನವರಿ 2017, 12:52 IST
ಅಕ್ಷರ ಗಾತ್ರ

ಫ್ಲೋರಿಡಾ: ಅಮೆರಿಕದ ರಿಂಗ್ಲಿಂಗ್‌ ಬ್ರೋಸ್‌. ಮತ್ತು ಬರ್ನಮ್‌ ಆ್ಯಂಡ್‌ ಬೈಲೆ ಸರ್ಕಸ್‌ ಕಂಪನಿಯು 146 ವರ್ಷಗಳ ನಿರಂತರ ಪ್ರದರ್ಶವನ್ನು ಅಂತ್ಯಗೊಳಿಸಲಿದೆ.

ಪ್ರಾಣಿಗಳ ಹಕ್ಕುಗಳ ಗುಂಪಿನೊಂದಿಗೆ ನಿರಂತರ ಕಾನೂನು ಹೋರಾಟ, ಬದಲಾಗುತ್ತಿರುವ ಜನರ ಅಭಿರುಚಿ ಹಾಗೂ ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳ ಸೇರಿದಂತೆ ಅನೇಕ ಕಾರಣಗಳಿಂದ 146 ವರ್ಷಗಳಷ್ಟು ಹಳೆಯದಾದ ‘ದಿ ಗ್ರೇಟೆಸ್ಟ್‌ ಷೋ ಆನ್‌ ಅರ್ಥ್‌’ ಸ್ಥಗಿತಗೊಳ್ಳಲಿದೆ ಎಂದು ಸರ್ಕಸ್‌ ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ.

ಊರಿಂದ ಊರಿಗೆ ತಿರುಗಾಟ ನಡೆಸುತ್ತ ಪ್ರದರ್ಶನ ನೀಡುವ ಸರ್ಕಸ್‌ ಕಂಪನಿಯು ಇದೇ ವರ್ಷ ಮೇ ನಲ್ಲಿ ಎಲ್ಲ ಪ್ರದರ್ಶನಗಳಿಗೆ ಪೂರ್ಣ ವಿರಾಮ ಇಡಲು ಮುಂದಾಗಿದೆ.

ನ್ಯೂಯಾರ್ಕ್‌, ವಾಷಿಂಗ್ಟನ್‌, ಅಟ್ಲಾಂಟಾ ಸೇರಿದಂತೆ ಅಮೆರಿಕದ ವಿವಿಧ ಭಾಗಗಳಲ್ಲಿ ಮೇ ವರೆಗೂ 30 ಪ್ರದರ್ಶನಗಳನ್ನು ನೀಡಲಿದೆ.

1871ರಲ್ಲಿ ಸ್ಥಾಪನೆಯಾದ ಸರ್ಕಸ್‌ ಕಂಪನಿಯು 1919ರಲ್ಲಿ ಭಿನ್ನ ಪ್ರದರ್ಶನಗಳ ಮೂಲಕ ಅಮೆರಿಕದಲ್ಲಿ ಜನಪ್ರಿಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT