ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 17–1–1967

50 ವರ್ಷಗಳ ಹಿಂದೆ
Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ಗೋವೆಯಲ್ಲಿ ಅತ್ಯುತ್ಸಾಹದ ಮತದಾನ
ಪಣಜಿ, ಜ. 16–
ಗೋವೆ, ದಮನ್‌ ಮತ್ತು ದೀವ್‌ಗಳ ರಾಜಕೀಯ ಸ್ಥಾನಮಾನದ ಭವಿಷ್ಯವನ್ನು ನಿರ್ಧರಿಸಲು ಇಂದು ನಡೆದ ಜನಮತ ಸಂಗ್ರಹದಲ್ಲಿ ಗೋವನರು ಅಧಿಕ ಸಂಖ್ಯೆಯಲ್ಲಿ, ಶಿಸ್ತಿನಿಂದ ಹಾಗೂ ಶಾಂತಿಯುತವಾದ ರೀತಿಯಲ್ಲಿ ಮತದಾನ ಮಾಡಿದರು.

ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದಿರುವ ಈ ಜನಮತ ಸಂಗ್ರಹದಲ್ಲಿ, ಈ ಪ್ರದೇಶವು ಮಹಾರಾಷ್ಟ್ರದಲ್ಲಿ ವಿಲೀನವಾಗಬೇಕೇ ಅಥವಾ ಕೇಂದ್ರದ ಆಡಳಿತದ ಪ್ರದೇಶವಾಗಿ ಮುಂದುವರಿಯಬೇಕೇ ಎಂಬುದು ನಿರ್ಧಾರವಾಗುವುದು.

***
ಕಾಮರಾಜ್‌ ಮುರಾರಜಿ ನಡುವೆ ರಾಜಿಗೆ ಯತ್ನ
ನನದೆಹಲಿ, ಜ. 16–
ಭಾರತದ ಮುಂದಿನ ಪ್ರಧಾನಿ ಯಾರು ಎಂಬುದನ್ನು ಮುಂದಿನ ತಿಂಗಳು ನಡೆಯುವ ಘಟನೆಗಳು ನಿರ್ಧರಿಸಲಿವೆ. ನಿರ್ಣಾಯಕವಾಗಿ ಮಾರ್ಪಡಬಹುದಾದ ಎರಡು ಅಪರೂಪದ ಕಾರ್ಯಕ್ರಮಗಳಿಗೆ ಮಹತ್ವವಿದೆ. ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಕಾಮರಾಜರು ಈ ಮಾಸಾಂತ್ಯದಲ್ಲಿ ಗುಜರಾತಿಗೆ ಭೇಟಿ ಕೊಡಲಿದ್ದಾರೆ ಮತ್ತು ಫೆಬ್ರವರಿ 3ನೇ ತಾರೀಕಿನ ವೇಳೆಗೆ ಮುರಾರಜಿ ದೇಸಾಯಿಯವರು ಮದ್ರಾಸಿಗೆ ಹೋಗಲಿದ್ದಾರೆ.

***
ಪುರಿ ಶ್ರೀಗಳಿಗೆ ತೀರಾ ನಿಶ್ಶಕ್ತಿ
ಪುರಿ, ಜ. 16–
ಗೋಹತ್ಯೆಯನ್ನು ನಿಷೇಧಿಸಬೇಕೆಂಬ ಬೇಡಿಕೆ ಬಗ್ಗೆ ಆಮರಣಾಂತ ನಿರಶನ ಹೂಡಿರುವ ಪುರಿ ಜಗದ್ಗುರು ಶ್ರೀ ಶಂಕರಾಚಾರ್ಯ ಅವರು ಇಂದು ತೀರಾ ಬಳಲಿದಂತೆ ಹಾಗೂ ನಿಶ್ಶಕ್ತರಾದಂತೆ ಕಂಡುಬಂದರು. ಜಗದ್ಗುರುಗಳು ಉಪವಾಸ ಹೂಡಿ 58 ದಿನವಾಗಿದೆ.

***
ತಷ್ಕೆಂಟ್‌ನಲ್ಲಿ ಶಾಸ್ತ್ರಿ ಪ್ರತಿಮೆ ಸ್ಥಾಪನೆ
ದೆಹಲಿ, ಜ. 16–
ದಿವಂಗತ ಪ್ರಧಾನ ಮಂತ್ರಿ ಲಾಲ್‌ ಬಹದೂರ್‌ ಶಾಸ್ತ್ರಿಯವರ ಪ್ರತಿಮೆಯೊಂದನ್ನು ತಷ್ಕೆಂಟಿನಲ್ಲಿ ಸ್ಥಾಪಿಸಲಾಗುವುದೆಂದು ಉಜ್‌ಬೆಕಿಸ್ತಾನದ ಅಧ್ಯಕ್ಷ ಪ್ರಡಿಕಾಫ್‌ರವರು ಇಂದು ಕಲ್ಕತ್ತೆಯಲ್ಲಿ ಭಾರತ–ರಷ್ಯಾ ಮೈತ್ರಿ ಕೂಟದ ಆಶ್ರಯದಲ್ಲಿ ನಡೆದ ತಷ್ಕೆಂಟ್‌ ಘೋಷಣೆಯ ಪ್ರಥಮ ವಾರ್ಷಿಕೋತ್ಸವದಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT