ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹರು ಇಲ್ಲವೇ?

Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ಒಂದು ವರ್ಷದಿಂದ ಖಾಲಿ ಬಿದ್ದಿರುವ ಲೋಕಾಯುಕ್ತರ ಹುದ್ದೆಯನ್ನು ತುಂಬಲು  ಸರ್ಕಾರ ಹಲವರ ಹೆಸರುಗಳನ್ನು ಶಿಫಾರಸು ಮಾಡುತ್ತಲೇ ಬಂದಿದೆ. ಅವರ ವಿರುದ್ಧದ ಆರೋಪಗಳ ಕಾರಣಕ್ಕಾಗಿ ರಾಜ್ಯಪಾಲರು ಆ ಹೆಸರುಗಳನ್ನು ಅನುಮೋದಿಸಿರಲಿಕ್ಕಿಲ್ಲ.

ಈಗ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರ ಹೆಸರು ಶಿಫಾರಸಾಗಿದೆ. ಅವರು  ಗೋಮಾಳವನ್ನು ತಮ್ಮ ಪತ್ನಿಯ ಹೆಸರಲ್ಲಿ ಖರೀದಿಸಿದ ಆರೋಪ ಎದುರಿಸುತ್ತಿದ್ದಾರೆ.  ಗೋಮಾಳವನ್ನು ಯಾರೂ ಖರೀದಿಸುವಂತಿಲ್ಲ ಹಾಗೂ ಮಾರುವಂತಿಲ್ಲ ಎಂಬ ಕಾನೂನಿದೆ.

ಕಾನೂನನ್ನು ಉಲ್ಲಂಘಿಸದ ಅರ್ಹ ನ್ಯಾಯಮೂರ್ತಿಗಳೇ ಸರ್ಕಾರಕ್ಕೆ ದೊರೆಯುತ್ತಿಲ್ಲವೋ ಅಥವಾ ತಾವು ಮಾಡುವ ಶಿಫಾರಸು ಅನುಮೋದನೆ ಪಡೆಯದಿರಲಿ ಎಂಬ ಉದ್ದೇಶದಿಂದ ಹೆಸರುಗಳನ್ನು ಶಿಫಾರಸು ಮಾಡುತ್ತಿದೆಯೋ ಎಂಬ ಅನುಮಾನ ಮೂಡುತ್ತದೆ. ಲೋಕಾಯುಕ್ತ ಹುದ್ದೆ ಖಾಲಿಯಾಗೇ ಉಳಿಯಲಿ, ಇದರಿಂದ ಭ್ರಷ್ಟಾಚಾರಿಗಳು ಇನ್ನೊಂದಿಷ್ಟು ಕಾಲ ಹಾಯಾಗಿರಲಿ ಎಂಬ ಆಲೋಚನೆ ಸರ್ಕಾರಕ್ಕೆ ಇರಬಹುದು ಎನಿಸುತ್ತದೆ.
-ಸುಭಾಸ ಯಾದವಾಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT