ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಯಧಿಪತಿಗಳ ಬಳಿ ದೇಶದ ಶೇ 58 ರಷ್ಟು ಸಂಪತ್ತು

Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ದಾವೊಸ್‌ : ಭಾರತದ ಒಟ್ಟು ಸಂಪತ್ತಿನ ಶೇ 58ರಷ್ಟು ಭಾಗ ದೇಶದ ಶೇ 1ರಷ್ಟು ಶ್ರೀಮಂತರ ಬಳಿ ಇದೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ. ಭಾರತದಲ್ಲಿ ಆದಾಯ ಅಸಮಾನತೆ ಇದೆ ಎಂಬುದಕ್ಕೆ ಈ ವರದಿ ಸಾಕ್ಷಿಯಂತಿದೆ.

ದೇಶದ 57 ಕೋಟ್ಯಧಿಪತಿಗಳು ₹14.71 ಲಕ್ಷ ಕೋಟಿ ಸಂಪತ್ತು ಹೊಂದಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ವಾರ್ಷಿಕ ಸಭೆಗೂ ಮೊದಲು ಆಕ್ಸ್‌ಫ್ಯಾಮ್‌್್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಕಿ ಅಂಶ ಉಲ್ಲೇಖವಾಗಿದೆ.

ಭಾರತದಲ್ಲಿ 84 ಕೋಟ್ಯಧಿಪತಿಗಳು ಒಟ್ಟು ₹ 16.9 ಲಕ್ಷ ಕೋಟಿ ಸಂಪತ್ತು ಹೊಂದಿದ್ದು, ಮುಕೇಶ್‌ ಅಂಬಾನಿ (₹ 1314.37 ಕೋಟಿ ), ದಿಲೀಪ್‌ ಸಾಂಘ್ವಿ (₹1137.3 ಕೋಟಿ ಮತ್ತು ಅಜೀಂ ಪ್ರೇಮ್‌ಜಿ (₹ 1021.53 ಕೋಟಿ ) ಸಂಪತ್ತು ಹೊಂದಿದ್ದಾರೆ. ಸೌಕರ್ಯ ಉಳ್ಳ ಕೆಲವರಿಗೆ ಮಾತ್ರವಲ್ಲದೆ ಎಲ್ಲರಿಗೂ ಲಾಭವಾಗುವಂತಹ ಆರ್ಥಿಕತೆ ನಿರ್ಮಿಸಲು ಸಮಯವಾಗಿದೆ ಎಂದು ಆಕ್ಸ್‌ಫ್ಯಾಮ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT