ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡ್ಲಿಯ ಭಾವೈಕ್ಯತೆ ನಾಡಿಗೆ ಮಾದರಿ

ಹಿರೇಮಠದ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
Last Updated 17 ಜನವರಿ 2017, 6:26 IST
ಅಕ್ಷರ ಗಾತ್ರ

ಚಿಂಚೋಳಿ: ದೇಶದಲ್ಲಿ ಭಾವೈಕ್ಯತೆ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ತಾಲ್ಲೂಕಿನ ಕೋಡ್ಲಿ ಗ್ರಾಮದ ಹಿಂದೂ ಮುಸ್ಲಿಮರ ಮಧ್ಯೆ ಇರುವ ಸೌಹಾರ್ದತೆ ನಾಡಿಗೆ ಮಾದರಿಯಾಗಿದೆ ಎಂದು ಸ್ಥಳೀಯ ಹಿರೇಮಠದ ಬಸವಲಿಂಗ ಶಿವಾಚಾರ್ಯರು ತಿಳಿಸಿದರು.

ಅವರು ಭಾನುವಾರ ತಾಲ್ಲೂಕಿನ ಕೋಡ್ಲಿ ಗ್ರಾಮದ ಬನಶಂಕರಿ ದೇವಿಯ ಜಾತ್ರೆ ಅಂಗವಾಗಿ ನಡೆದ ಸಹಸ್ರ ದೀಪೋತ್ಸವಕ್ಕೆ ಚಾಲನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
 
ಹಿಂದೂ ಮುಸ್ಲಿಮರು ಸಹೋದ ರರಂತೆ ಪರಸ್ಪರ ಬೆರೆತು ಜೀವನ ನಡೆಸುವುದು ಕೋಡ್ಲಿಯಲ್ಲಿ ಕಾಣ ಬಹುದಾಗಿದೆ. ಹಿಂದೂಗಳ ಉತ್ಸವದಲ್ಲಿ ಮುಸ್ಲಿಮರು ಭಕ್ತಿಯಿಂದ ಪಾಲ್ಗೊಂಡರೆ, ಮುಸಲ್ಮಾನರ ಉತ್ಸವಗಳಲ್ಲಿ ಹಿಂದೂ ಗಳು ಶ್ರದ್ಧೆಯಿಂದ ಪಾಲ್ಗೊಂಡು ಪರಸ್ಪರರು ಎರಡೂ ಧರ್ಮಗಳನ್ನು ಗೌರ ವಿಸಿಕೊಂಡು ಬರುತ್ತಿರುವುದು ಶ್ಲಾಘ ನೀಯ ಎಂದರು.

ಬನಶಂಕರಿ, ರಾಮಲಿಂಗೇಶ್ವರ ಜಾತ್ರೆಯಲ್ಲಿ ಮುಸ್ಲಿಮರು ಭಾಗ ವಹಿಸಿದರೆ, ಈದ್‌ ಮತ್ತು ಮೊಹರಂ ಉತ್ಸವದಲ್ಲಿ ಹಿಂದೂಗಳು ಭಾಗ ವಹಿಸುವುದು ಕೋಡ್ಲಿಯಲ್ಲಿ ಇಂದಿಗೂ ನಡೆಯುತ್ತದೆ ಎಂದರು.

ಬನಶಂಕರಿ ದೇವಿಯ ನೂತನ ಮಂದಿರಕ್ಕೆ ಕಳಸಾರೋಹಣ ಮತ್ತು ಮೂರ್ತಿ ಪ್ರತಿಷ್ಠಾಪನೆ ಮೇ ತಿಂಗಳಲ್ಲಿ ನಡೆ ಸಲು ಭಕ್ತರು ನಿರ್ಧರಿಸಿದ್ದು ಸಾರ್ವ ಜನಿಕರು, ದೇವಿ ಭಕ್ತರು ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು.

ಸಾಹಿತಿ ಎಸ್‌.ಎನ್‌ ದಂಡಿ ನಕುಮಾರ ಮಾತನಾಡಿ, ವಚನಕಾರ ದೇವರ ದಾಸಿಮಯ್ಯನ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿ ಇರುಳೆಲ್ಲ ನಡೆದನಾ ಸುಂಕಕ್ಕಂಜಿ ಎಂಬ ವಚನ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ರದ್ದತಿಯೊಂದಿಗೆ ಹೋಲಿಸಿ ವಿವರಿಸಿದರು. ಕೋಡ್ಲಿಯ ತಾಯಿ ಬನಶಂಕರಿ ದೇವಿ ಬೇಡಿದ ವರ ನೀಡಿ ಭಕ್ತರನ್ನು ಸಲಹುವ ಮಹಾ ಮಾತೆಯಾಗಿದ್ದಾಳೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಶರಣಪ್ಪ ಸಜ್ಜನಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದಪ್ಪ ಮೋಘಾ, ಮುಖಂಡ ವಿಜಯ ಕುಮಾರ ಚೇಂಗಟಾ, ಎಪಿಎಂಸಿ ನೂತನ ಸದಸ್ಯ ಅಣ್ಣರಾವ್‌ ಪೆದ್ದಿ, ಗ್ರಾ.ಪಂ. ಸದಸ್ಯ ಆನಂದ ಜಾಧವ್‌, ಪತ್ರಕರ್ತ ಜಗನ್ನಾಥ ಶೇರಿಕಾರ ಮಾತನಾಡಿದರು.
ಬರ್ಕತ್‌ ಅಲಿ ಸಾಹೇಬ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಗೌರಮ್ಮ ಚೇಂಗಟಾ, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಕೆಳಗಿನ ದೊಡ್ಡಿ, ಉಪಾಧ್ಯಕ್ಷ ರಮೇಶ ಆಡಕಿ, ಬಸವರಾಜ ಚಿಮ್ಮಾಈ ದಲಾಯಿ, ಶಂಕರ ಸಿ. ಲಾಳಿ, ಬಂಡಪ್ಪ ಆರ್‌ ಕಿಟ್ಟದ್‌ ಸೇರಿದಂತೆ ಇತರರು ಇದ್ದರು.

ಕಾರ್ಯಕ್ರಮದಲ್ಲಿ ದೇವಾಲಯದ ಸೇವಕರಾದ ಶಂಕರ ಕಣ್ಣಿ, ಶರಣಪ್ಪ ಉಪ್ಪಾರ, ಕುಪ್ಪಣ್ಣ ಚಿಮ್ಮನಚೋಡ ಹಾಗೂ ಲಕ್ಷ್ಮಣ ಉಪ್ಪಾರ ದಂಪತಿಗಳಿಗೆ ದೇವಾಲಯದ ಸದ್ಭಕ್ತ ಮಂಡಳಿ ವತಿಯಿಮದ ಸತ್ಕರಿಸಲಾಯಿತು.

ಸಮಾರಂಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಕಲಾವಿದರಾದ ಸಿದ್ರಾಮಪ್ಪ ಪೋ. ಪಾಟೀಲ ಹಾಗೂ ಮಹಾಂತಪ್ಪ ಹಾರೂತಿ ಅವರಿಂದ ತತ್ವಪದ ಗಾಯನ ನಡೆಯಿತು.

ತುಕ್ಕಪ್ಪ ಕಣ್ಣಿ ಸ್ವಾಗತಿಸಿದರು ಶಿವಪ್ರಕಾಶ ಹಿರೇಮಠ ನಿರೂಪಿಸಿದರು. ಭೀಮರಾವ್‌ ಎನ್‌. ಪಾಟೀಲ ವಂದಿಸಿದರು. ಜನವರಿ 7ರಿಂದ ಜಾತ್ರೆ ಆರಂಭವಾದರೆ, ಜನವರಿ12ರಂದು ರಥೋತ್ಸವ ಜರುಗಿತು. ಸೋಮವಾರ ಸಂಪ್ರದಾಯದಂತೆ ತೇರಿನ ಕಳಸಾ ಅವರೋಹಣ ಹಾಗೂ ಪಲ್ಲಕ್ಕಿಯಲ್ಲಿ ಉತ್ಸವದ ಮೆರವಣಿಗೆಯೊಂದಿಗೆ ನಡೆಸಿ ಜಾತ್ರೆಗೆ ಸಂಭ್ರಮದ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT