ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನದ ಕೊನೆಯ ಯಾತ್ರಿ ಸರ್ನನ್‌ ನಿಧನ

Last Updated 17 ಜನವರಿ 2017, 6:31 IST
ಅಕ್ಷರ ಗಾತ್ರ

ಹಾಸ್ಟನ್‌: ಚಂದ್ರನ ಅಂಗಳದಲ್ಲಿ ಕೊನೆಯದಾಗಿ ಓಡಾಟ ನಡೆಸಿದ ಗಗನಯಾತ್ರಿ ಜೀನ್‌ ಸರ್ನನ್‌(82 ವರ್ಷ) ಸೋಮವಾರ ನಿಧನರಾದರು.

ಭೂಮಿಯ ಉಪಗ್ರಹ ಚಂದ್ರನ  ಮೇಲೆ ಎರಡು ಬಾರಿ ನಡೆದಾಡಿರುವ ಮೂವರು ಗಗನಯಾತ್ರಿಗಳಲ್ಲಿ ಕ್ಯಾಪ್ಟನ್‌ ಸರ್ನನ್‌ ಕೂಡ ಒಬ್ಬರು. 1972ರಲ್ಲಿ ಚಂದ್ರನ ಅಂಗಳದಲ್ಲಿ ಕೊನೆಯ ಹೆಜ್ಜೆಯನ್ನಿಟ್ಟವರೂ ಇವರೇ.

‘ನಾವು ಬಂದಂತೆ ಮರಳುತ್ತಿದ್ದೇವೆ, ದೇವರ ಇಚ್ಛೆ, ಇಡೀ ಮನುಕುಲಕ್ಕೆ ಶಾಂತಿ ಮತ್ತು ವಿಶ್ವಾಸವನ್ನು ಹೊತ್ತು ಸಾಗುತ್ತಿರುವುದು’ ಎಂಬ ಸಂದೇಶವನ್ನು ಚಂದ್ರ ಲೋಕದಿಂದ ಸರ್ನನ್‌ ರವಾನಿಸಿದ್ದರು.

1966 ಮತ್ತು 1969ರ ಚಂದ್ರಯಾನದಲ್ಲಿ ಭಾಗಿಯಾಗಿದ್ದ ಇವರು ಅಪೋಲೋ 17 ಮಿಷನ್‌ನ ಕಮಾಂಡರ್‌ ಆಗಿದ್ದರು. ಚಂದ್ರನ ಅಂಗಳದಲ್ಲಿ ನಡೆದಾಡಿರುವ 12 ಗಗನಯಾತ್ರಿಗಳಲ್ಲಿ ಪ್ರಸ್ತುತ ಆರು ಗಗನಯಾತ್ರಿಗಳು ಬದುಕಿದ್ದಾರೆ.

1934ರ ಮಾರ್ಚ್‌ 14ರಂದು ಚಿಕಾಗೋದಲ್ಲಿ ಜನಿಸಿದ ಯುಜೀನ್‌ ಆ್ಯಂಡ್ರೂ ಸರ್ನನ್‌ ಆರೋಗ್ಯ ಸಂಬಂಧಿ ತೊಂದರೆಯಿಂದ ಹಾಸ್ಟನ್‌ ಆಸ್ಪತ್ರೆಯಲ್ಲಿ ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT