ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ಉತ್ತೇಜನಕ್ಕೆ ಡಿಜಿಎಫ್‌ಟಿಯಲ್ಲಿ ಹೊಸ ಕ್ರಮ

ಕೆಸಿಸಿಐ ಸಂವಾದದಲ್ಲಿ ಬೆಂಗಳೂರು ಎಡಿಜಿಎಫ್‌ಟಿ ವಿಜಯಕುಮಾರ್‌
Last Updated 17 ಜನವರಿ 2017, 8:36 IST
ಅಕ್ಷರ ಗಾತ್ರ

ಮಂಗಳೂರು: ರಫ್ತುದಾರರಿಗೆ ಪರವಾ ನಗಿ ಮತ್ತು ಇತರೆ ದಾಖಲೆಗಳನ್ನು ಒದಗಿಸುವುದರಲ್ಲಿ ಆಗುತ್ತಿದ್ದ ವಿಳಂಬ ತಪ್ಪಿಸಲು ವಿದೇಶ ವ್ಯಾಪಾರ ಮಹಾ ನಿರ್ದೇಶಕರ ಕಚೇರಿಯಲ್ಲಿ ಹಲವು ಹೊಸ ಕ್ರಮಗಳನ್ನು ಅಳವಡಿಸಿ ಕೊಳ್ಳಲಾಗಿದೆ. ಇದರಿಂದ ಇಲಾಖೆಯಲ್ಲಿ ಈಗ ವಿವಿಧ ಬಗೆಯ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬಕ್ಕೆ ಅವಕಾಶ ಇಲ್ಲದಂತಾಗಿದೆ ಎಂದು ಬೆಂಗಳೂರಿನ ವಿದೇಶ ವ್ಯಾಪಾರ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿಎಫ್‌ಟಿ) ವಿಜಯಕುಮಾರ್‌ ತಿಳಿಸಿದರು.

ನಿರಾಯಾತ ಬಂಧು ಯೋಜನೆ ಅಡಿಯಲ್ಲಿ ಗೋಡಂಬಿ ಮತ್ತು ಸಾಗರ ಉತ್ಪನ್ನಗಳ ರಫ್ತುದಾರರಿಗಾಗಿ ಇಲ್ಲಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ (ಕೆಸಿಸಿಐ) ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ದಲ್ಲಿ ಮಾತನಾಡಿದ ಅವರು, ‘ಎಕ್ಸ್‌ ಪೋರ್ಟ್‌ ಆಬ್ಲಿಗೇಷನ್‌ ಡಿಸ್‌ಚಾರ್ಜ್‌ ಪ್ರಮಾಣಪತ್ರ (ಇಒಡಿಸಿ) ಇಲ್ಲದೇ ರಫ್ತು ವಹಿವಾಟು ನಡೆಸಲು ಸಾಧ್ಯವಿಲ್ಲ. ಈ ಹಿಂದೆ ಇಒಡಿಸಿ ಪಡೆಯಲು ಸಲ್ಲಿಸಿದ್ದ ಅರ್ಜಿಗಳು ಒಂದು ವರ್ಷದವರೆಗೂ ವಿಲೇವಾರಿಯಾಗದೇ ಇದ್ದ ಉದಾಹ ರಣೆಗಳಿವೆ. ಇಒಡಿಸಿ ವಿತರಣೆಗೆ ಕಾಲ ಮಿತಿ ನಿಗದಿಪಡಿಸಲಾಗಿದೆ’ ಎಂದರು.

ಇಒಡಿಸಿಗಾಗಿ ಸಲ್ಲಿಸುವ ಅರ್ಜಿಗ ಳನ್ನು ಪ್ರಾಥಮಿಕವಾಗಿ ಪರಿಶೀಲಿಸುವ ಕ್ರಮ ಜಾರಿಗೆ ಬಂದಿದೆ. ನ್ಯೂನತೆಗಳಿದ್ದರೆ ತಕ್ಷಣವೇ ಅರ್ಜಿದಾರರಿಗೆ ತಿಳಿಸಲಾಗು ವುದು. ಅವರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಹತ್ತು ದಿನಗಳೊಳಗೆ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಇಒಡಿಸಿ ವಿತರಣೆಯ ಕಾರಣದಿಂದ ರಫ್ತು ವಹಿವಾಟಿನ ಪ್ರಮಾಣ ಕುಸಿಯುವು ದನ್ನು ತಪ್ಪಿಸುವುದಕ್ಕಾಗಿ ಈ ಕ್ರಮ ಜಾರಿಗೆ ತರಲಾಗಿದೆ ಎಂದು ಹೇಳಿದರು.

‘ಓಪನ್‌ ಹೌಸ್‌’: ರಫ್ತುದಾರರ ಸಮಸ್ಯೆ ಗಳು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಎಡಿಜಿ ಎಫ್‌ಟಿ ಕಚೇರಿಯಲ್ಲಿ ಪ್ರತಿ ಬುಧವಾರ ಮಧ್ಯಾಹ್ನದ ಬಳಿಕ ‘ಓಪನ್‌ ಹೌಸ್‌’ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ. ರಫ್ತುದಾರರು ನೇರವಾಗಿ ಈ ಕಾರ್ಯ ಕ್ರಮದಲ್ಲಿ ಭಾಗಿಯಾಗಿ ತಮ್ಮ ಸಮಸ್ಯೆ ಗಳನ್ನು ಹೇಳಿಕೊಳ್ಳಬಹುದು ಎಂದರು.

ತಮ್ಮ ಕಚೇರಿಯಿಂದ jdgft-bangalore.kar.nic.in ಎಂಬ ವೆಬ್‌ಸೈಟ್‌ ಆರಂಭಿಸಲಾಗಿದೆ. ಅದರಲ್ಲಿ ರಫ್ತುದಾರರು ಮತ್ತು ಇಲಾಖೆ ಅಧಿಕಾರಿಗಳ ನೇರ ಸಂವಹನಕ್ಕೆ ಅವ ಕಾಶ ಕಲ್ಪಿಸಲಾಗಿದೆ. ರಫ್ತು ಚಟುವಟಿಕೆ ಗಳಲ್ಲಿ ತೊಡಗಲು ಬಯಸುವವರ ಅನುಕೂಲಕ್ಕಾಗಿ 12 ವಿಡಿಯೊ ತುಣುಕು ಗಳನ್ನು ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸ ಲಾಗಿದೆ. ಈಗಾಗಲೇ ಉದ್ಯಮದಲ್ಲಿ ಸಕ್ರಿಯರಾಗಿರುವವರ ಪ್ರತಿಕ್ರಿಯೆಗಳನ್ನು ಆಧರಿಸಿ ಈ ವಿಡಿಯೊ ತುಣುಕುಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಉದ್ಯಮಿಗಳ ಸಮೀಕ್ಷೆ: ಬೆಂಗಳೂರು ಎಡಿಜಿಎಫ್‌ಟಿ ಕಚೇರಿಯ ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿರುವ ರಫ್ತುದಾರ ರಿಗೆ ತಮ್ಮ ಇಲಾಖೆಯಿಂದ ದೊರೆತ ಸೇವೆ ತೃಪ್ತಿದಾಯಕವಾಗಿತ್ತೇ? ಎಂಬು ದನ್ನು ತಿಳಿಯಲು ಸಮೀಕ್ಷೆಯೊಂದನ್ನು ನಡೆಸಲಾಗಿದೆ. 2016–17ರ ಅವಧಿ ಯಲ್ಲಿ ಕರ್ನಾಟಕದ 115 ರಫ್ತುದಾರ ರಿಂದ ಪ್ರತಿಕ್ರಿಯೆ ಪಡೆದಿದ್ದು, ಶೇಕಡ 95ರಷ್ಟು ಮಂದಿ ಇಲಾಖೆಯ ಸೇವೆಗಳು ತೃಪ್ತಿದಾಯಕ ಎಂಬ ಅಭಿಪ್ರಾಯ ನೀಡಿದ್ದಾರೆ ಎಂದು ಹೇಳಿದರು.

ಈ ಮೊದಲು ಕರ್ನಾಟಕ ರಾಜ್ಯ ಸಂಪೂರ್ಣವಾಗಿ ಬೆಂಗಳೂರು ಎಡಿಜಿ ಎಫ್‌ಟಿ ಕಚೇರಿಯ ವ್ಯಾಪ್ತಿಗೆ ಬರುತ್ತಿತ್ತು. ಇತ್ತೀಚೆಗೆ ಬೆಳಗಾವಿಯಲ್ಲಿ ಮತ್ತೊಂದು ಎಡಿಜಿಎಫ್‌ಟಿ ಕಚೇರಿ ತೆರೆಯಲಾಗಿದೆ. ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಈ ಕಚೇರಿಯ ವ್ಯಾಪ್ತಿಗೆ ಬರುತ್ತವೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಎಡಿಜಿಎಫ್‌ಟಿ ಕಚೇರಿ ಯ ಉಪ ಮಹಾನಿರ್ದೇಶಕ ಕೆ.ವಿ. ತಿರುಮಲ, ರಫ್ತುದಾರರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ವಾಲ್ಟರ್‌ ಡಿಸೋಜ, ಕೆಸಿಸಿಐ ಅಧ್ಯಕ್ಷ ಜೀವನ್‌ ಸಲ್ಡಾನ, ಉಪಾಧ್ಯಕ್ಷೆ ವತಿಕಾ ಪೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT