ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ಧರಾಮರ ಸಾಮಾಜಿಕ ಸೇವೆ ಮಾರ್ಗದರ್ಶಿ’

‘ಸೊನ್ನಲಿಗೆ ಸಿದ್ಧರಾಮ ವಿಲಾಸ’ ಮಹಾಕಾವ್ಯ ಲೋಕಾರ್ಪಣೆಯಲ್ಲಿ ಮಹೇಶ್‌
Last Updated 17 ಜನವರಿ 2017, 8:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘800 ವರ್ಷಗಳಿಗೂ ಹಿಂದೆ ಸೊನ್ನಲಿಗೆ ಸಿದ್ಧರಾಮರು ಕೈಗೊಂ ಡಿದ್ದ ಸಾಮಾಜಿಕ ಕಾರ್ಯಗಳು ಇಂದಿನ ಸರ್ಕಾರಗಳಿಗೆ ಮಾರ್ಗದರ್ಶಿಯಾಗಿವೆ’ ಎಂದು ಐಡಿಎಸ್‌ಜಿ ಕಾಲೇಜು ಸಹ ಪ್ರಾಧ್ಯಾಪಕ ಪ್ರೊ.ಎಚ್.ಎಂ.ಮಹೇಶ್ ತಿಳಿಸಿದರು.

ನಗರದ ಎಸ್‌ಟಿಜೆ ಮಹಿಳಾ ಪದವಿ ಕಾಲೇಜಿನಲ್ಲಿ ಉದ್ಭವ ಪ್ರಕಾಶನ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಎಸ್‌ಟಿಜೆ ಮಹಿಳಾ ಪದವಿ ಕಾಲೇಜು ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸತ್ಯವಿಠಲ ಅವರ ‘ಸೊನ್ನಲಿಗೆ ಸಿದ್ಧರಾಮ ವಿಲಾಸ’  ಮಹಾಕಾವ್ಯ ಲೋಕಾರ್ಪಣೆ ಸಮಾರಂಭ ದಲ್ಲಿ ಅವರು ಮಾತನಾಡಿದರು.

ಸೊನ್ನಲಿಗೆ ಸಿದ್ಧರಾಮ ಪವಾಡ ಸೃಷ್ಟಿಸುವವನಲ್ಲ. ಕೈಲಾಸ ಸಿದ್ಧರಾಮ ನಲ್ಲ. ನಮ್ಮ ನಡುವಿನ ಸಿದ್ಧರಾಮರಾಗಿ ಅವರು ಸಮಾಜದ ಮೌಢ್ಯಗಳನ್ನು ತೊಲಗಿಸುವ ಸೇವೆ ಮಾಡಿದರು. ತಮ್ಮ ದೂರದೃಷ್ಟಿಯಿಂದ ಸಿದ್ಧರಾಮ ಕೆರೆ, ಕಟ್ಟೆ, ಬಾವಿಗಳನ್ನು ಕಟ್ಟಿಸಿದರು. ದೇವದಾಸಿಯರಿಗೆ ಪುನರ್ವಸತಿ ಜತೆಗೆ ಹಸುಗಳನ್ನು ನೀಡಿದರು. ಅವರ ಸಾಮಾಜಿಕ ಸೇವೆ ಗಮನಿಸಿದಾಗ ಯಾವ ಕಾರ್ಯಗಳಿಗೆ ಆದ್ಯತೆ ನೀಡಬೇಕೆಂದು ಅರಿವಾಗುತ್ತದೆ. ಸಿದ್ಧರಾಮ ಅವರು ಕೈಗೊಳ್ಳುತ್ತಿದ್ದ ಸಾಮಾಜಿಕ ಕಾರ್ಯಗಳು, ಜನಹಿತ ಕಾರ್ಯಗಳು ಇಂದಿನ ಸರ್ಕಾರಗಳಿಗೆ ಮಾರ್ಗದರ್ಶಿ ಎಂದರು.

ಉದ್ಭವ ಪ್ರಕಾಶನ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಸೊನ್ನಲಿಗೆ ಸಿದ್ಧರಾಮ ವಿಲಾಸ ಮಹಾಕಾವ್ಯ ಈ ನಮ್ಮ ಕಾಲೇಜಿನಲ್ಲಿ ಬಿಡುಗಡೆಯಾಗುತ್ತಿರುವುದು ಎಲ್ಲರೂ ಹೆಮ್ಮೆಪಡುವ ಸಂಗತಿ. ಕೃತಿಯ ಕರ್ತೃ ಸತ್ಯವಿಠಲ ಅವರು ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಸುತ್ತಾಡಿ ಹಲವು ಗ್ರಂಥ ಗಳನ್ನು ರಚಿಸಿದ್ದಾರೆ. ಈ ಕೃತಿ ಅಪ ರೂಪದ್ದಾಗಿದೆ. ಸಾಹಿತಿ ಬೆಳವಾಡಿ ಮಂಜುನಾಥ್ ಅವರ ಸಂಪಾದಕತ್ವದಲ್ಲಿ ಮೂಡಿ ಬಂದಿರುವ ಈ ಗ್ರಂಥ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿ ಸಲಿದೆ. ಬೆಳವಾಡಿ ಮಂಜುನಾಥ್ ಅವರ ಪ್ರಸ್ತಾವನೆ ನುಡಿ ಒಂದು ಗ್ರಂಥದಂತಿದೆ ಎಂದರು. 

ಉದ್ಭವ ಪ್ರಕಾಶನದ ಮ್ಯಾನೇಜಿಂಗ್ ಟ್ರಸ್ಟಿ ಡಿ.ಎಚ್.ನಟರಾಜ್ ಮಾತನಾಡಿ, ಮಹಾಕಾವ್ಯದಲ್ಲಿ ಸತ್ಯವಿಠಲ ಅವರು ಬಳಸಿರುವ ಭಾಷೆ ಶುದ್ಧವಾಗಿದೆ. ಅತ್ಯಂತ ಸುಂದರವಾಗಿ ಮೂಡಿರುವ ಮಹಾ ಕಾವ್ಯವನ್ನು  ಸುಲಭವಾಗಿ ಓದಬಹುದು. ಮಹಾಕಾವ್ಯ ಎಂದರೆ ಕಬ್ಬಿಣದ ಕಡಲೆ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ, ಈ ಗ್ರಂಥವನ್ನು ವಿದ್ಯಾರ್ಥಿಗಳು ಸುಲಭವಾಗಿ ಅರ್ಥೈಸಬಹುದು ಎಂದರು.

ಕಾಲೇಜು ಪ್ರಾಂಶುಪಾಲರಾದ ಪ್ರೊ.ಜಿ.ಕೆ.ಭಾರತಿ ಮಾತನಾಡಿ, ಸಿದ್ಧರಾಮರು ಸಮಸ್ಯೆ ಸವಾಲು ಸಂಕಷ್ಟಗಳನ್ನು ಎದುರಿಸುವ ಮೂಲಕ ತಮ್ಮ ಜನಪರ ಕಾರ್ಯಗಳಿಂದ ಜನಮಾನಸದಲ್ಲಿ ಉಳಿದಿದ್ದಾರೆ. ಮಹಾ ಕಾವ್ಯದ ಮೂಲಕ ಸತ್ಯವಿಠಲ ಅವರು ಸಿದ್ಧರಾಮರ ಸಾಧನೆ ತೆರೆದಿಟ್ಟಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ, 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಸತ್ಯವಿಠಲ ಅವರ ಬದುಕು ಬರಹ ಕುರಿತು ಪರಿಷತ್ ವತಿಯಿಂದ ವಿಚಾರ ಸಂಕಿರಣ  ಆಯೋಜಿಸ ಲಾಗುತ್ತಿದೆ ಎಂದರು. 

ಸಾಹಿತಿ ಬೆಳವಾಡಿ ಮಂಜುನಾಥ್ ಮಾತನಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಸಿಂದೂ. ಉಪನ್ಯಾಸಕ ಚಂದ್ರಶೇಖರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಪ್ರಕಾಶ್ ಇರರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT