ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲೇ ಹದಿಹರೆಯದವರ ನಿದ್ರೆ!

Last Updated 17 ಜನವರಿ 2017, 12:05 IST
ಅಕ್ಷರ ಗಾತ್ರ

ಲಂಡನ್‌: ವಿದ್ಯಾರ್ಥಿಗಳು ಹಗಲಿನ ಶಾಲೆಯಲ್ಲಿ ಬಹುಬೇಗ ಆಯಾಸಗೊಳ್ಳಲು  ತಡರಾತ್ರಿ ವರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಸಿಕೊಳ್ಳುವುದೇ ಕಾರಣ ಎಂದು ಹೊಸ ಅಧ್ಯಯನ ಎಚ್ಚರಿಸಿದೆ.

ವೇಲ್ಸ್‌ ಸಾಮಾಜಿಕ ಮತ್ತು ಆರ್ಥಿಕ ಸಂಶೋಧನಾ ಸಂಸ್ಥೆಯ ಸಂಶೋಧಕರ ಅಧ್ಯಯದ ಪ್ರಕಾರ, ಹುಡುಗರಿಗಿಂತಲೂ ಹುಡುಗಿಯರು ರಾತ್ರಿ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ.

ಐದು ವಿದ್ಯಾರ್ಥಿಗಳಲ್ಲಿ ಒಬ್ಬ ರಾತ್ರಿಯಲ್ಲಿ ಸಂದೇಶ ಕಳುಹಿಸಲು ಅಥವಾ ಗಮನಿಸುವುದರಲ್ಲಿ ಮುಳುಗಿರುತ್ತಾರೆ. ಹೀಗಾಗಿ, ರಾತ್ರಿ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿಯುವ ವಿದ್ಯಾರ್ಥಿಗಳಿಗಿಂತ ಈ ವಿದ್ಯಾರ್ಥಿಗಳು ಮೂರು ಪಟ್ಟು ಹೆಚ್ಚು ಆಯಾಸಗೊಳ್ಳುತ್ತಾರೆ.

ಇಂಥ ಅಭ್ಯಾಸದಿಂದ ಹುಡುಗ–ಹುಡುಗಿಯರಲ್ಲಿ ಸಂತಸ ಕುಂದುತ್ತಿದೆ ಎನ್ನಲಾಗಿದೆ. 12–15 ವರ್ಷದ ಒಟ್ಟು 900 ವಿದ್ಯಾರ್ಥಿಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT