ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾರೆಟ್ ಹಲ್ವ ಸವಿಯಲು ರೆಡಿ

Last Updated 20 ಜನವರಿ 2017, 13:06 IST
ಅಕ್ಷರ ಗಾತ್ರ
ADVERTISEMENT

ಕ್ಯಾರೆಟ್ ಹಲ್ವಾ ಅಂದರೆ ಯಾರ ಬಾಯಲ್ಲಿ ತಾನೇ ನೀರು ಬರುವುದಿಲ್ಲ! ಬಾಯಲ್ಲಿ ಕರಗುವಂತಹ ರುಚಿಯಾದ ಕ್ಯಾರೆಟ್ ಹಲ್ವಾವನ್ನು ಮನೆಯಲ್ಲಿ  ನೀವು ಮಾಡಬಹುದು. ಇದರ ರೆಸಿಪಿ ಮತ್ತು ಮಾಡುವ ವಿಧಾನಕ್ಕೆ ಈ ವಿಡಿಯೊ ನೋಡಿ.

ಬೇಕಾಗುವ ಸಾಮಾಗ್ರಿಗಳು

ತುರಿದ ಕ್ಯಾರೆಟ್ -1 ಕಪ್
ಹಾಲು    - ೧ ಕಪ್
ಸಕ್ಕರೆ- ೧/೪ ಕಪ್
ಏಲಕ್ಕಿ ಪುಡಿ- ಸ್ವಲ್ಪ
ತುಪ್ಪ -  ೨ ಸ್ಪೂನ್
ಗೋಡಂಬಿ, ದ್ರಾಕ್ಷಿ  - ೫೦ ಗ್ರಾಂ
ಕೋವಾ   -  ೫೦ ಗ್ರಾಂ

ಮಾಡುವ ವಿಧಾನ
ಬಾಣಲೆ ಸ್ವಲ್ಪ ಬಿಸಿ ಮಾಡಿ ಅದಕ್ಕೆ ಎರಡು ಸ್ಫೂನ್ ತುಪ್ಪ ಸುರಿದು, ಅದರಲ್ಲಿ ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನು ಹದವಾಗಿ ಹುರಿಯಿರಿ. ಗೋಡಂಬಿ ಮತ್ತು ದ್ರಾಕ್ಷಿ ತೆಳು ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿದು ಅದನ್ನು ಬೇರೊಂದು ಪಾತ್ರೆಯಲ್ಲಿ ತೆಗೆದಿಡಿ.

ಇನ್ನೊಂದು ಪಾತ್ರೆಯಲ್ಲಿ 1 ಕಪ್ ಹಾಲನ್ನು ಚೆನ್ನಾಗಿ ಕುದಿಸಿ. ಅದಕ್ಕೆ 1 ಕಪ್ ತುರಿದ  ಕ್ಯಾರೆಟ್ ಸೇರಿಸಿ, ಕುದಿಯಲು ಬಿಡಿ.  ಕ್ಯಾರೆಟ್  ತುರಿ ಹಾಲಿನಲ್ಲಿ ಬೇಯುತ್ತಿದ್ದಂತೆ ಸಕ್ಕರೆ ಸೇರಿಸಿ ಮಿಶ್ರಮಾಡಿ. ಹಾಲು ಇಂಗುವವರೆಗೆ ಕುದಿಸುತ್ತಾ ಇರಿ. ತಳ ಹಿಡಿಯದಂತೆ ಸೌಟಿನಿಂದ ಕೈಯಾಡಿಸುತ್ತಾ ಇರಬೇಕು. ಮಿಶ್ರಣ  ಸ್ವಲ್ಪ ಗಟ್ಟಿಯಾಗುತ್ತಾ ಬರುತ್ತಿದ್ದಂತೆ ಕೋವಾ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕುದಿಸಿ,

ಗಮನಿಸಿ ಹದವಾದ ಉರಿಯಲ್ಲಿ ಇದು ಬೇಯಬೇಕು, ನಂತರ 2 ಸ್ಪೂನ್ ತುಪ್ಪ ಸೇರಿಸಿ ಸ್ವಲ್ಪ ಏಲಕ್ಕಿ ಪುಡಿ ಉದುರಿಸಿ ಮಿಶ್ರ ಮಾಡಿ. ಆಮೇಲೆ ಹುರಿದ ಗೋಡಂಬಿ ಮತ್ತು  ದ್ರಾಕ್ಷಿ ಸೇರಿಸಿ. ಈಗ  ಕ್ಯಾರೆಟ್ ಹಲ್ವ ಸವಿಯಲು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT