ನೋಕಿಯಾ 5800 ವ್ಯವಸ್ಥಿತ ಟಚ್‌ಸ್ಕ್ರೀನ್ ಸೌಲಭ್ಯ ಹೊಂದಿದ್ದ ಫೋನ್ ಆಗಿತ್ತು. ‘ಸಿಂಬಿಯನ್’ ಕಾರ್ಯಾಚರಣಾ ವ್ಯವಸ್ಥೆ ಹೊಂದಿದ್ದ 5ನೇ ಆವೃತ್ತಿಯ ಫೋನ್ ಇದಾಗಿತ್ತು. ‘ಕ್ರಿಸ್ಟೋಫರ್ ನೋಲನ್’ ಡಾರ್ಕ್ ನೈಟ್ ಸಿನಿಮಾದಲ್ಲಿ ಇದನ್ನು ಬಳಸುವ ಮೂಲಕ ಹೆಚ್ಚು ಪ್ರಸಿದ್ಧಿ ಪಡೆಯಿತು.
**
ನೋಕಿಯಾ ಎನ್ –ಗೇಜ್ (2002)
ಫೋನಿನಲ್ಲಿ ಸಂಭಾಷಣೆ ವೇಳೆ ಹಿಡಿದಿಡಲು ಅವಕಾಶವಿತ್ತು. ಹೀಗಾಗಿಯೇ ‘ಟಾಕೋ ಫೋನ್’ ಎಂಬ ಹೆಸರಿನಿಂದ ಖ್ಯಾತಿ ಪಡೆದುಕೊಂಡಿತು. ಗೇಮಿಂಗ್ ಉಪಕರಣ ಹೊಂದಿದ್ದರಿಂದ ಗೇಮ್‌ಬಾಯ್ ಬಳಕೆದಾರರನ್ನು ಆಕರ್ಷಿಸುವಲ್ಲಿ
ಯಶಸ್ವಿಯಾಯಿತು.
**
ನೋಕಿಯಾ 8110 ( 1996)
‘ಮ್ಯಾಟ್ರಿಕ್ಸ್’ ಸಿನಿಮಾದಲ್ಲಿ ಕೆನಡಿಯನ್ ನಟ ಕೀಯಾನು ರೀವಸ್ ಬಳಸುವ ಮೂಲಕ ‘ಬನಾನಾ ಫೋನ್ ’ ಎಂದೇ ಖ್ಯಾತಿ ಪಡೆಯಿತು. ಆಗಿನ ಕಾಲಕ್ಕೆ ಭಿನ್ನ ವಿನ್ಯಾಸದಿಂದ ಆಕರ್ಷಣೆ ಸೃಷ್ಟಿಸಿತ್ತು.
**
ನೋಕಿಯಾ 1100 (2003)
ನೋಕಿಯಾ ಮೊಬೈಲ್ ಸರಣಿಯಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಖ್ಯಾತಿ ಈ ಮೊಬೈಲ್‌ನದ್ದು. 2011ರಲ್ಲಿ ನೋಕಿಯಾ ತಿಳಿಸಿದಂತೆ, ಜಗತ್ತಿನದ್ಯಾಂತ ಈ ಮೊಬೈಲ್‌ನ್ನು 25 ಕೋಟಿ ಮಂದಿ ಬಳಸಿದ್ದರು. ಇದಲ್ಲದೇ ಬೇರೆಯದ್ದೇ ಕಾರಣಗಳಿಂದ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿದೆ.
**
ನೋಕಿಯಾ 5100 ( 1998)
2002ರಲ್ಲಿ ಬಿಡುಗಡೆಯಾಗಿ 2003ರಲ್ಲಿ ಮತ್ತೊಮ್ಮೆ ಮಾರುಕಟ್ಟೆಗೆ ಪ್ರವೇಶಿಸಿತು. ಸ್ಟಿರಿಯೋ ಎಫ್‌ಎಂ ರೇಡಿಯೋ ಹಾಗೂ ಜಿಎಸ್‌ಎಂ ತರಾಂಗತಾಂತರಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿತ್ತು. ಈ ಮೊಬೈಲ್‌ನಲ್ಲಿ ಮೊದಲ ಬಾರಿಗೆ ‘ಹಾವಿನ’ ಆಟವನ್ನು ಪರಿಚಯಿಸಲಾಗಿತ್ತು.
**
ನೋಕಿಯಾ ಎನ್95 (2007)
ನೋಕಿಯಾ ಸರಣಿಯಲ್ಲಿ ಸಂಚಲನ ಸೃಷ್ಟಿಸಿದ ಸ್ಮಾರ್ಟ್‌ಫೋನ್. ಮಾರುಕಟ್ಟೆಗೆ ಬಿಡುಗಡೆಯಾದ ವೇಳೆ ವಿಶ್ವದ ಪ್ರಬಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯೂ ಇದಕ್ಕಿತ್ತು. ಅಲ್ಲದೇ 5ಎಂಪಿ ಕ್ಯಾಮೆರಾ ಈ ಸೌಲಭ್ಯ ಇದರಲ್ಲಿತ್ತು.
**
ನೋಕಿಯಾ ಫ್ಯೂರ್ ವ್ಯೂವ್ (2012)
40 ಎಂಪಿ ಫ್ಯೂರ್‌ವ್ಯೂವ್ ಕ್ಯಾಮೆರಾ ಹೊಂದಿದ್ದ ಸಿಂಬಿಯನ್’ ಕಾರ್ಯಾಚರಣಾ ವ್ಯವಸ್ಥೆ ಹೊಂದಿದ್ದ ಕೊನೆಯ ಫೋನ್ ಇದಾಗಿತ್ತು. ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ಕ್ರಾಂತಿ ಸೃಷ್ಟಿಸಿದ್ದು ಇದರ ವಿಶೇಷತೆ.