ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಚ್‌ 370 ಶೋಧ ಕಾರ್ಯ ಸ್ಥಗಿತ

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ಸಿಡ್ನಿ : 2014ರಲ್ಲಿ ನಾಪತ್ತೆಯಾಗಿದ್ದ ಎಂಎಚ್‌ 370 ವಿಮಾನದ ಶೋಧ ಕಾರ್ಯವನ್ನು ಮಂಗಳವಾರ ಸ್ಥಗಿತಗೊಳಿಸಿರುವುದಾಗಿ ಮೂರು ವರ್ಷಗಳಿಂದ ಶೋಧ ನಡೆಸುತ್ತಿರುವ ಚೀನಾ, ಮಲೇಷ್ಯಾ ಹಾಗೂ ಆಸ್ಟ್ರೇಲಿಯಾ ದೇಶಗಳು ಹೇಳಿವೆ.

ಮೂರು ವರ್ಷಗಳ ಸುದೀರ್ಘ ಶೋಧ ನಡೆಸಿದ್ದರೂ ವಿಮಾನದ ಕುರಿತು ಯಾವುದೇ ಸುಳಿವು ದೊರಕಿಲ್ಲ ಎಂದು ಮೂರೂ ರಾಷ್ಟ್ರಗಳ ಸರ್ಕಾರಗಳು ತಿಳಿಸಿವೆ.
2014ರ ಮಾರ್ಚ್‌ 8ರಂದು 239 ಪ್ರಯಾಣಿಕರನ್ನು ಹೊತ್ತು ಕೌಲಾಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ ಮಲೇಷ್ಯಾದ ಎಂಎಚ್‌ 370 ವಿಮಾನ ಮಾರ್ಗಮಧ್ಯದಲ್ಲಿ ನಾಪತ್ತೆಯಾಗಿತ್ತು.

ದಕ್ಷಿಣದ ಹಿಂದೂ ಮಹಾಸಾಗರದ 1,20,000 ಚ.ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ನಡೆಸಿರುವುದಾಗಿ ಮೂರು ರಾಷ್ಟ್ರಗಳ ಜಂಟಿ ಹೇಳಿಕೆ ತಿಳಿಸಿದೆ. ‘ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನ ಹಾಗೂ ಶ್ರೇಷ್ಠ ತಜ್ಞರ ಸಹಾಯ ಪಡೆದು ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ  ವಿಮಾನ ಪತ್ತೆಯಾಗದಿರುವುದು ಬೇಸರ ತಂದಿದೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಮಲೇಷ್ಯಾ ಈ ತಿಂಗಳ ಆರಂಭದಲ್ಲಿ ಶೋಧನೆ ಸ್ಥಗಿತಗೊಳಿಸಿದೆ. ಆದರೆ ಶೋಧ ಕಾರ್ಯಾಚರಣೆಯನ್ನು ಹಗುರವಾಗಿ ಪರಿಗಣಿಸಿರಲಿಲ್ಲ. ವಿಮಾನ ಬಿದ್ದಿರುವ ನಿರ್ದಿಷ್ಟ ಸ್ಥಳ ಪತ್ತೆ ಮಾಡಲು ಈ ತನಕ ಸಾಧ್ಯವಾಗಿಲ್ಲ ಎಂದು ತಿಳಿಸಲಾಗಿದೆ.

ಸೋನಾರ್‌ಕ್ಯಾನ್‌ಬೆರ್ರಾ : ಮೂರು ವರ್ಷಗಳ ಶೋಧದಲ್ಲಿ ನಾಪತ್ತೆಯಾದ ವಿಮಾನದ ಮಾಹಿತಿ ದೊರಕದೆ ಇದ್ದರೂ, ಲಕ್ಷಾಂತರ ವರ್ಷಗಳಲ್ಲಿ ಸಾಗರದಾಳದಲ್ಲಿ ಏನೇನು ಬದಲಾವಣೆಗಳಾಗಿವೆ, ಎಲ್ಲೆಲ್ಲಿ ತೈಲ ನಿಕ್ಷೇಪಗಳು ಇರಬಹುದು ಎಂಬ ಅನೇಕ ಅನೇಕ ಆಸಕ್ತಿದಾಯಕ ಅಂಶಗಳು ಪತ್ತೆಯಾಗಿವೆ ಎಂದು ತಜ್ಞರು ಹೇಳಿದ್ದಾರೆ.

ಶೋಧ ಕಾರ್ಯಕ್ಕೆ ಸಂಬಂಧಿಸಿದಂತೆ ಸೋನಾರ್‌್ ನಕ್ಷೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.

ಆಸ್ಟ್ರೇಲಿಯದ ರಾಷ್ಟ್ರೀಯ ಭೂವಿಜ್ಞಾನ  ಶೀಘ್ರದಲ್ಲಿಯೆ ಬಿಡುಗಡೆ ಮಾಡಲಿರುವ   ನಕ್ಷೆಯಿಂದ ಶೋಧನೆ ನಡೆಸಿದ ರೀತಿ ಕುರಿತು ಮತ್ತಷ್ಟು ಮಾಹಿತಿ ದೊರಕಲಿದೆ. ನಕ್ಷೆ ಬಿಡುಗಡೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT