ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವಶಾಲಿ ಪಾಸ್‌ಪೋರ್ಟ್‌ ಭಾರತಕ್ಕೆ 78ನೇ ಸ್ಥಾನ

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ದುಬೈ : ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ 78ನೇ ಸ್ಥಾನ ಗಳಿಸಿದೆ, ಜರ್ಮನಿ ಮೊದಲ ಸ್ಥಾನದಲ್ಲಿದೆ. ಮುಕ್ತ ವೀಸಾಗಾಗಿ (ಆಗಮನ ವೀಸಾ) ಭಾರತ 46 ಅಂಕ ಗಳಿಸಿದ್ದರೆ, ಜರ್ಮನಿ 157 ಅಂಕ ಗಳಿಸಿದೆ. ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಆರ್ಟಾನ್‌ ಕ್ಯಾಪಿಟಲ್‌ ಈಚೆಗೆ ಬಿಡುಗಡೆಗೊಳಿಸಿರುವ ‘ಪಾಸ್‌ಪೋರ್ಟ್‌ ಇಂಡೆಕ್ಸ್‌’ ಪಟ್ಟಿಯಲ್ಲಿ ಈ ಮಾಹಿತಿಗಳಿವೆ. 

ಏಷ್ಯಾ ಖಂಡದಲ್ಲಿ ದಕ್ಷಿಣ ಕೊರಿಯಾವನ್ನು ಹಿಂದಿಕ್ಕಿರುವ ಸಿಂಗಪುರ ಮುಕ್ತ ವೀಸಾಗಾಗಿ 156 ಅಂಕ ಗಳಿಸಿದೆ. ಪಾಕಿಸ್ತಾನ ಪ್ರಭಾವಶಾಲಿ ಪಾಸ್‌ಪೋರ್ಟ್‌ಗಳ ಪೈಕಿ ಭಾರತಕ್ಕಿಂತ ಹಿಂದಿದ್ದು, 94ನೆ ಸ್ಥಾನ ಗಳಿಸಿವೆ. ಚೀನಾ  58ನೇ ಸ್ಥಾನದಲ್ಲಿದೆ. ಆಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ.

ಜಾಗತಿಕ ಮಟ್ಟದಲ್ಲಿ ಪಾಸ್‌ಪೋರ್ಟ್‌ಗಳ ಮಾಹಿತಿ ಸಂಗ್ರಹಿಸುವ ಆರ್ಟಾನ್‌ ಕ್ಯಾಪಿಟಲ್‌,  ಒಂದು ಪಾಸ್‌ಪೋರ್ಟ್‌ನೊಂದಿಗೆ ವೀಸಾಗೆ ಮನವಿ ಸಲ್ಲಿಸದೆಯೇ ವ್ಯಕ್ತಿ ಎಷ್ಟು ದೇಶಗಳಿಗೆ ಭೇಟಿ ನೀಡಬಹುದು ಅಥವಾ ಎಷ್ಟು ರಾಷ್ಟ್ರಗಳು ಆಗಮನ ವೀಸಾ ದೊರಕುತ್ತದೆ ಎಂಬುದನ್ನು ಆಧರಿಸಿ, ‘ಮುಕ್ತ ವೀಸಾ’ ಅಂಕಗಳನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT