ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಟ್‌ಕ್ಲಬ್‌ ದಾಳಿಕೋರನ ಬಂಧನ

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ಇಸ್ತಾಂಬುಲ್‌ : ಹೊಸ ವರ್ಷಾಚರಣೆಯಂದು ನೈಟ್‌ ಕ್ಲಬ್‌ ಒಂದರ ಮೇಲೆ ದಾಳಿ ನಡೆಸಿ 39 ಜನರನ್ನು ಗುಂಡಿಟ್ಟು ಕೊಂದಿದ್ದ ಶಂಕಿತ ಉಗ್ರನನ್ನು ಟರ್ಕಿ ಪೊಲೀಸರು ಬಂಧಿಸಿದ್ದಾರೆ.

ಹಲವು ದಿನಗಳ ಕಾಲ ಆರೋಪಿಗಾಗಿ ಶೋಧ ನಡೆಸಿದ್ದ ಪೊಲೀಸರು ಸೋಮವಾರ ಮಧ್ಯರಾತ್ರಿ ವೇಳೆಯಲ್ಲಿ ನಗರದ ವಸತಿ ಪ್ರದೇಶದ ಮನೆಯೊಂದರಿಂದ ಬಂಧಿಸಿದ್ದಾರೆ.

ಆತ ತನ್ನ ಎಂಟು ವರ್ಷದ ಮಗನೊಂದಿಗೆ ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ ಎಂದು ಇಲ್ಲಿನ ಟಿಆರ್‌ಟಿ ಟಿ.ವಿ. ವರದಿ ಮಾಡಿದೆ. ಆರೋಪಿ ಅಬುದುಲ್‌ಗಾದಿರ್‌ ಮಶಾರಿಪೂವ್‌ನನ್ನು ಪೊಲೀಸರು ಕಾಲರ್‌ ಹಿಡಿದು ಎಳೆದೊಯ್ಯುತ್ತಿರುವ ಚಿತ್ರವನ್ನು ಟರ್ಕಿ ಮಾಧ್ಯಮಗಳು ಪ್ರಕಟಿಸಿವೆ. ‘ನೈಟ್‌ ಕ್ಲಬ್‌ ಮೇಲೆ ದಾಳಿ ನಡೆಸಿದ್ದ ವ್ಯಕ್ತಿ ನಾನೇ’ ಎಂದು ಆರೋಪಿ ಅಬುದುಲ್‌ಗಾದಿರ್‌ ಮಶಾರಿಪೂವ್‌   ಒಪ್ಪಿಕೊಂಡಿದ್ದಾನೆ ಎಂದು ರಾಜ್ಯಪಾಲ ವಾಸಿಪ್‌ ಸಾಹಿನ್‌  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT