ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಚಟುವಟಿಕೆಯತ್ತ ಗಮನಹರಿಸಿ

ಸಂಗೀತ ಸೌರಭ–ತತ್ವಪದ ಗಾಯನ
Last Updated 18 ಜನವರಿ 2017, 4:35 IST
ಅಕ್ಷರ ಗಾತ್ರ

ಚಿಂತಾಮಣಿ: ‘ಮಕ್ಕಳಲ್ಲಿನ ಗಾಯನ ಪ್ರತಿಭೆ ಹೊರತರಲು ಸಂಗೀತ ಮತ್ತು ತತ್ವಪದಗಳ ಗಾಯನ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಮ್ಮ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೆಂಚಾರ್ಲಹಳ್ಳಿ ಗ್ರಾಮ ದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೋಮವಾರ ಆಯೋಜಿಸಿದ್ದ ‘ಸಂಗೀತ ಸೌರಭ–ತತ್ವಪದ ಗಾಯನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾದರು.

‘ವಿದ್ಯಾರ್ಥಿಗಳು ವ್ಯಾಸಂಗದ ಜತೆಗೆ ಕ್ರೀಡೆ, ಹಾಡು, ಸಂಗೀತ, ಅಭಿನಯ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳ ಕಡೆಗೂ ಗಮನಹರಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಗ್ರಾಮೀಣ ಭಾಗಗಳ ಶಾಲೆಗಳಲ್ಲಿ ಕಾರ್ಯಕ್ರಮ ಗಳನ್ನು ಆಯೋಜಿ ಸಿರುವುದು ಉತ್ತಮ ಬೆಳವಣಿಗೆ’ ಎಂದರು.

ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕೈವಾರ ರಾಮಣ್ಣ ಮಾತ ನಾಡಿ, ‘ನಾಡಿನ ತತ್ವಪದಕಾರರು ರಚಿಸಿರುವ ತತ್ವ ಪದಗಳನ್ನು ಹಾಡು ವುದು, ಕೇಳುವುದು ಪುಣ್ಯದ ಕೆಲಸ. ಜೀವನದ ಪರಮಾರ್ಥ ಸಾರ್ಥಕತೆಗೆ ದಾರಿ ದೀಪವಾಗಿರುವ ತತ್ವ, ಆದರ್ಶ ಗಳನ್ನು ರೂಢಿಸಿಕೊಳ್ಳಬೇಕು’ ಎಂದರು.

ಕವಿ ಮೂಡಲಗೊಲ್ಲಹಳ್ಳಿ ಕೆ. ನರಸಿಂಹಪ್ಪ ಮಾತನಾಡಿ, ‘ಜೀವನ ಮೌಲ್ಯಗಳನ್ನು ಬಾಲ್ಯದಿಂದಲೇ ಬೆಳೆಸಿ ಕೊಳ್ಳಬೇಕು. ತತ್ವಪದಕಾರರು, ವಚನಕಾ ರರು, ದಾಸರು, ಕವಿಗಳು ತಮ್ಮ ಹಾಡು ಗಳ ಮೂಲಕ ಮೌಲ್ಯಗಳನ್ನು ಪಸರಿಸಿ ದ್ದಾರೆ. ಅಕ್ಷರ ಬಾರದವರಿಗೂ ಗಾಯನ ಸಾಹಿತ್ಯವು ಆದರ್ಶ ಬದುಕನ್ನು ಕಲಿಸುತ್ತದೆ’ ಎಂದು ನುಡಿದರು.

ಎಚ್‌.ಎಂ.ರಾಮಾಂಜನಪ್ಪ, ಮುನಿಯಪ್ಪ, ವೆಂಕಟಮ್ಮ, ನರಸಮ್ಮ, ಹರೀಶ ತಂಡದಿಂದ ತತ್ವಪದಗಳ ಗಾಯನ ನಡೆಯಿತು.  ಮುನಿಶಾಮಿ ಮತ್ತು ವೆಂಕಟರಮಣಪ್ಪ ಹಾರ್ಮೋನಿ ಯಂ, ಶ್ರೀನಿವಾಸ್‌ ತಬಲ ನುಡಿಸಿದರು.

ಮುಖ್ಯ ಶಿಕ್ಷಕ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಸ್ವಾಮಿ, ಶಿಕ್ಷಕರಾದ ಗಂಗುಲಪ್ಪ, ಮಂಜುಳಾ, ಗಾಯತ್ರಿ, ವೆಂಕಟಸ್ವಾಮಿ, ನರಸಿಂಹಪ್ಪ, ವಿನುತಾ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT