ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏತ ನೀರಾವರಿ ಯೋಜನೆ ಜಾರಿ ಮಾಡಿ

ಶಾಸಕ ಸಿ.ಎಸ್. ನಾಡಗೌಡ, ತಹಶೀಲ್ದಾರ್ ಬಾಗವಾನಗೆ ರೈತರ ಆಗ್ರಹ– ಮನವಿ ಸಲ್ಲಿಕೆ
Last Updated 18 ಜನವರಿ 2017, 5:04 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ನೀರಾವರಿ ವಂಚಿತ ವಾಗಿರುವ ನಾಗರಬೆಟ್ಟ ಸೇರಿದಂತೆ ಸುತ್ತಮುತ್ತಲಿನ 10 ಗ್ರಾಮಗಳ ರೈತರು ನಾಗರಬೆಟ್ಟ ಏತ ನೀರಾವರಿ ಹೋರಾಟ ಸಮಿತಿ ನೇತೃತ್ವ ದಲ್ಲಿ  ಪ್ರತಿಭಟನಾ ರ್‍ಯಾಲಿ ನಡೆಸಿದರು. ನಂತರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.

ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ, ನಂತರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿ.ಎಸ್‌.ನಾಡಗೌಡ ಅವರಿಗೂ ಮನವಿ ಸಲ್ಲಿಸಿದರು
ತಾಲ್ಲೂಕಿನ ನಾಗರಬೆಟ್ಟ ಗ್ರಾಮವು ಸಂಪೂರ್ಣ ನೀರಾವರಿ ವಂಚಿತವಾಗಿದೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಅರಸನಾಳ, ಬೂದಿಹಾಳ, ಮಾವಿನ ಭಾವಿ, ಕಿಲ್ಲಾರಟ್ಟಿ, ಜೈನಾಪುರ, ಹಿರೇ ಮುರಾಳ, ಜಂಗಮುರಾಳ, ಅರೇ ಮುರಾಳ, ಕವಡಿಮಟ್ಟಿ, ಹಾಗೂ ಸರೂರ  ಗ್ರಾಮಗಳು ನೀರಾವರಿ ವಂಚಿತವಾಗಿವೆ. ಸತತ ಬರದಿಂದ ಈ ಭಾಗದ ರೈತರ ಪರಿಸ್ಥಿತಿ ದುಸ್ತರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ,

ಪಟ್ಟಣದ ಇಂದಿರಾವೃತ್ತದಿಂದ ಹೊರಟು, ಬಸವೇಶ್ವರ ವೃತ್ತದ ಮೂಲಕ ಹಾಯ್ದು ತಹಶೀಲ್ದಾರ್ ಕಚೇರಿಗೆ ಬಂದ ಪ್ರತಿಭಟನಾಕಾರರು  ಗ್ರಾಮಗಳ ರೈತರ ಪರಿಸ್ಥಿಯನ್ನು ತಹಶೀಲ್ದಾರರು ಅಧ್ಯಯನ ಮಾಡಿ ಸರ್ಕಾರಕ್ಕೆ  ವರದಿ ಸಲ್ಲಿಸಬೇಕು  ಎಂದು ಮನವಿ ಮಾಡಿದರು.

ರೈತ ಪ್ರಮುಖರಾದ ಮಲ್ಲಿಕಾರ್ಜುನ ಸಿದರೆಡ್ಡಿ, ಗ್ರಾಮ ಪಂಚಾಯ್ತಿ ಸದಸ್ಯ ವೀರೇಶ ಪಾಟೀಲ, ಪರಶುರಾಮ ಮುರಾಳ, ಬಿ.ಜಿ.ಮಠ, ಎಂ.ಎಸ್. ಪಾಟೀಲ, ಬಾಲಪ್ಪ ವಾಲಿಕಾರ, ಬಸನಗೌಡ ಪಾಟೀಲ, ಶರಣಗೌಡ ಪಾಟೀಲ್, ಚಂದ್ರಶೆೇಖರ ಸಿದರೆಡ್ಡಿ, ಬಸವರಾಜ ಸಿದರೆಡ್ಡಿ, ಸಂಗನಗೌಡ ಸಿದರೆಡ್ಡಿ, ಸಿದ್ದಪ್ಪ ಗುರಿಕಾರ, ಮಲ್ಲಪ್ಪ ಹಗರಗುಂಡ, ಲಕ್ಷ್ಮಣ ಬಡಿಗೇರ, ಮುತ್ತಪ್ಪ ವಾಲಿಕಾರ, ಪರಮಣ್ಣ ವಳಕಲದಿನ್ನಿ, ಮುನ್ನಾ ನದಾಫ್, ಶಿವಪ್ಪ ಚಲವಾದಿ, ಶರಣಪ್ಪ ವಳಕಲ್ದಿನ್ನಿ, ಸಿದ್ದಪ್ಪ ವಳಕಲ್ದಿನ್ನಿ, ಶಿವಪ್ಪ ಗಡ್ಡಿ, ಅಮರಪ್ಪ ಗಡ್ಡಿ, ಮುದಕಪ್ಪ ಗುರಿಕಾರ ಸೇರಿದಂತೆ ವಿವಿಧ ಗ್ರಾಮಗಳ ಅಸಂಖ್ಯಾತ ರೈತರು ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಶಾಸಕರ ಭೇಟಿ:  ಮಿನಿವಿಧಾನಸೌಧದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮರಳುತ್ತಿದ್ದ ಸಂದರ್ಭದಲ್ಲಿ ಶಾಸಕ ಸಿ.ಎಸ್. ನಾಡಗೌಡ  ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿ, ‘ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಗೆ ಅಧಿಕಾರಿಗಳೊಂದಿಗೆ ಮಾತ ನಾಡಿ, ಈ ಯೋಜನೆ ಕಾರ್ಯಗತಗೊಳಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT