ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.2ರಿಂದ ಪಟ್ಟಾಧಿಕಾರ ಮಹೋತ್ಸವ

Last Updated 18 ಜನವರಿ 2017, 5:29 IST
ಅಕ್ಷರ ಗಾತ್ರ

ಮಸ್ಕಿ: ಇಲ್ಲಿನ ಗಚ್ಚಿನಮಠದ ರುದ್ರಮುನಿದೇವರ ಗುರು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಫೆಬ್ರುವರಿ 2ರಿಂದ 4ರವರೆಗೆ ನಡೆಯಲಿದ್ದು, ಸಿದ್ಧತಾ ಕಾರ್ಯಕ್ರಮ ಬರದಿಂದ ಸಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಮಠದ ಸಭಾಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾರ್ಯಕ್ರಮದ ಯಶಸ್ವಿಗೆ 15ಕ್ಕೂ ಹೆಚ್ಚು ಉಪ ಸಮಿತಿ ರಚಿಸಲಾಗಿದೆ. ಒಂದು ಗ್ರಂಥ ಹಾಗೂ ಸ್ಮರಣ ಸಂಚಿಕೆ ಹೊರ ಬರಲಿದೆ ಎಂದು ತಿಳಿಸಿದರು.

ಫೆ. 2ರಂದು ಉಜ್ಜಯಿನಿ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. 3ರಂದು ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ನಡೆಯಲಿದೆ. 4ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಗಚ್ಚಿನಮಠದ ನೂತನ ಪೀಠಾಧ್ಯಕ್ಷರಾಗಲಿರುವ ರುದ್ರಮುನಿದೇವರು ಜ.22 ರಿಂದ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನ ವಾಸಿಸುವ ಸ್ಥಳಗಳಲ್ಲಿ ಪಾದಯಾತ್ರೆ ನಡೆಸಿ ಸಮಾರಂಭದ ಆಮಂತ್ರಣ ನೀಡಲಿದ್ದಾರೆ. ಪಟ್ಟಾಧಿಕಾರ ನಿಮಿತ್ತ 22ರಿಂದ ಪ್ರತಿದಿನ ಸಂಜೆ ಗಚ್ಚಿನ ಮಠದಲ್ಲಿ ಸಿದ್ದಲಿಂಗಶ್ವರರ ಪ್ರವಚನ ನಡೆಯಲಿದೆ. ಮೂರು ದಿನ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಶೇಠ್‌ ಭಾಗವಹಿಸುವರು.

ಸಿದ್ದಲಿಂಗಯ್ಯ ಗಚ್ಚಿನಮಠ, ಆದಯ್ಯ ಸ್ವಾಮಿ ಕ್ಯಾತನಟ್ಟಿ, ಮಹಾಂತೇಶ ಮಸ್ಕಿ, ವೀರೇಶ ಸೌದ್ರಿ, ಘನಮಠದಯ್ಯ ಸಾಲಿಮಠ, ಮಂಜುನಾಥ ಸಾಲಿಮಠ ಮಾತನಾಡಿದರು.

ರುದ್ರಮುನಿದೇವರು, ಸ್ವಾಗತ ಸಮಿತಿ ಕಾರ್ಯಾದ್ಯಕ್ಷ ಕೆ.ವೀರನಗೌಡ, ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ, ತಿಮ್ಮನಗೌಡ ಗುಡದೂರು, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್‌. ದಿವಟರ್‌, ಡಾ.ಪಂಚಾಕ್ಷರಯ್ಯ ಕಂಬಾಳಿಮಠ, ಶ್ರೀಶೈಲಪ್ಪ ಬ್ಯಾಳಿ, ಸಿದ್ದಣ್ಣ ಹೂವಿನಭಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT