ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣ ಮಾದರಿ ಶಾಲೆ

ಲಕಮಾಪುರ: ಪ್ರಾಥಮಿಕ ಶಾಲೆ ಸುಂದರ ಪರಿಸರ, ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ
Last Updated 18 ಜನವರಿ 2017, 5:33 IST
ಅಕ್ಷರ ಗಾತ್ರ

ಕುಕನೂರು:  ಲಕಮಾಪುರ ಗ್ರಾಮದ ಪ್ರಾಥಮಿಕ ಶಾಲೆ  ಸುಂದರ ಪರಿಸರ, ಆಟದ ಮೈದಾನ ಹೊಂದಿ, ಗುಣಮಟ್ಟದ ಶಿಕ್ಷಣ ನೀಡುವ  ಮಾದರಿ ಶಾಲೆಯಾಗಿದೆ.

ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನು ನೀಡಿದ ಕೀರ್ತಿ ಈ ಶಾಲೆಗೆ ಸಲ್ಲುತ್ತದೆ ಎಂದು ಮುಖ್ಯಶಿಕ್ಷಕ ಸತ್ಯಪ್ಪ ಸೊಂಪುರು ಹೇಳುತ್ತಾರೆ.  1 ರಿಂದ 7ನೇ ತರಗತಿವರೆಗೆ 210 ಮಕ್ಕಳ ದಾಖಲಾತಿ ಇದ್ದು,  ಒಂದರಿಂದ ನಾಲ್ಕನೇ ತರಗತಿಯ ನಲಿ ಕಲಿಯಲ್ಲಿ 140 ಮಕ್ಕಳ ದಾಖಲಾತಿ ಇದೆ.

ಪ್ರತಿಯೊಂದು ತರಗತಿಯಲ್ಲಿಯೂ ಪ್ರತಿ ದಿನ ಶೇ 90ರಷ್ಟು ಮಕ್ಕಳು ಹಾಜರಾತಿ ಇದ್ದು, ನಿತ್ಯ ಪಾಠ, ಆಟದಲ್ಲಿ ಪಾಲ್ಗೊಳ್ಳುತ್ತಾರೆ.  ವಾರಕ್ಕೆ ಎರಡು ದಿನ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕೂಡಾ ನೀಡಲಾಗುತ್ತದೆ. ಪ್ರತಿಯೊಬ್ಬ ಶಿಕ್ಷಕರೂ ಮಕ್ಕಳೊಂ­ದಿಗೆ ಮಕ್ಕಳಂತೆ ಕಲಿಸುವುದನ್ನು ಕಂಡು ಶಿಕ್ಷಕರ ಕುರಿತು ಇರುವ ಗೌರವ ಹೆಚ್ಚಾಗುವಂತೆ ಮಾಡುತ್ತದೆ. ಪ್ರತಿಯೊಬ್ಬ ಶಿಕ್ಷಕರೂ ಮಕ್ಕಳಿಗೆ ಮನನವಾಗುವಂತೆ ಪಠ್ಯ ವಿಷಯ  ಬೋಧಿಸುವುದು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮದಲ್ಲಿಯೇ ನೆಲೆಸಿರುವ ಶಿಕ್ಷಕರು ಸರಿಯಾಗಿ 9.30ರಿಂದ ತರಗತಿಗಳನ್ನು ಆರಂಭಿಸಿ ಮಕ್ಕಳಿಗೆ ಪಾಠ ಬೋಧನೆಯಲ್ಲಿ ತೊಡಗುತ್ತಾರೆ.

ಈ ಶಾಲೆಗೆ 2007–-08ನೇ ಸಾಲೀನಲ್ಲಿ ತಾಲ್ಲೂಕ ಉತ್ತಮ ಶಾಲೆ ಪ್ರಶಸ್ತಿ ಲಭಿಸಿದೆ. ಸ್ವಚ್ಛ ಭಾರತ ಅಭಿಯಾನದ ಯೋಜನಡಿ ಉತ್ತಮ ಶಾಲೆ ಎಂಬ ಪ್ರಶಸ್ತಿ ಲಭಿಸಿದೆ. ಶಾಲಾ ಮಕ್ಕಳ ಮತ್ತು ಶಿಕ್ಷಕರ ಆಸಕ್ತಿಯಿಂದಾಗಿ ಶಾಲೆಯ ಆವರಣ­ದಲ್ಲಿ ಸುಸಜ್ಜಿತವಾದ ಕೈತೋಟ, ಶೌಚಾಲಯ, ಬಿಸಿ ಊಟದ ಕೋಣೆ ಕೂಡಾ ಇದೆ. ಅಶೋಕ ಗಿಡ, ತೆಂಗು, ಬೇವಿನಮರ, ಅರಳಿಮರ, ತೇಗ,ಶೊ ಪ್ಲಾಂಟ್‌ಗಳನ್ನು ಬೆಳೆಸಲಾಗಿದೆ.  ಶಾಲೆಯಲ್ಲಿ ಶಿಸ್ತುಬದ್ಧ ಶಿಕ್ಷಣ ನೀಡಲಾಗುತ್ತಿದೆ.
*
–ಮಂಜುನಾಥ ಎಸ್‌.ಅಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT