ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗದುರಹಿತ ವಹಿವಾಟು ಕಾರ್ಯಾಗಾರ’

ಚಳ್ಳಕೆರೆ: ಡಿಜಿಟಲ್‌ ಇಂಡಿಯಾ ಕಾರ್ಯಾಗಾರಕ್ಕೆ ಮಾಲಿನಿ ಎಸ್. ಸುವರ್ಣ ಚಾಲನೆ
Last Updated 18 ಜನವರಿ 2017, 5:34 IST
ಅಕ್ಷರ ಗಾತ್ರ

ನಾಯಕನಹಟ್ಟಿ: ‘ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆ ಯೋಜನೆಯಾದ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು’ ಎಂದು ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಮಾಲಿನಿ ಎಸ್. ಸುವರ್ಣ ಹೇಳಿದರು.

ಯಾತ್ರಿನಿವಾಸ ಸಭಾಂಗಣದಲ್ಲಿ ಮಂಗಳವಾರ ನಬಾರ್ಡ್‌ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ನಗದು ರಹಿತ ವ್ಯವಹಾರ  ಕುರಿತ  ಆರ್ಥಿಕ ಸಾಕ್ಷರತಾ ಕಾರ್ಯಾಗಾರ’ ವನ್ನು ಕುರಿತು ಅವರು ಮಾತನಾಡಿದರು.

‘ನಗದುರಹಿತ ವ್ಯಾಪಾರ ವಹಿವಾಟು ನಡೆಸಲು ಸಾಮಾನ್ಯರಿಗೆ ತೊಂದರೆ ಆಗಬಹುದು. ಅಂಥ ತೊಂದರೆಗಳನ್ನು ನಿವಾರಿಸಲು ನಬಾರ್ಡ್‌ ಮೊದಲ ಹಂತದಲ್ಲಿ ಜಿಲ್ಲೆಯ 20 ಗ್ರಾಮಗಳಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.  ಸಾಮಾನ್ಯ ಜನರಿಗೆ, ಮಹಿಳೆಯರಿಗೆ, ಸ್ವಸಹಾಯ ಸಂಘ–ಸಂಸ್ಥೆಗಳ ಸದಸ್ಯರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ನಗದು ರಹಿತ ವಹಿವಾಟು ನಡೆಸಲು ಬೇಕಾದ   ಮಾಹಿತಿ’  ತಿಳಿಸಲಾಗುತ್ತಿದೆ.

‘ಡಿಜಿಟಲ್‌ ಇಂಡಿಯಾದ ಹಲವು ಪರಿಕಲ್ಪನೆಗಳಲ್ಲಿ ನಗದು ರಹಿತ ವ್ಯಾಪಾರ ವಹಿವಾಟು ಒಂದಾಗಿದ್ದು, ದೇಶದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರ ಬ್ಯಾಂಕ್‌ಗಳು ಬ್ಯಾಂಕ್‌ ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಎಟಿಎಂ ಕಾರ್ಡ್‌, ಡೆಬಿಟ್‌ಕಾರ್ಡ್, ಕ್ರೆಡಿಟ್‌ಕಾರ್ಡ್,  ಚೆಕ್‌ ಪುಸ್ತಕಗಳನ್ನು ವಿತರಣೆ ಮಾಡಲಿವೆ’ ಎಂದು ಹೇಳಿದ ಅವರು, ‘ಪ್ರತಿ ಗ್ರಾಮ ಮಟ್ಟದಲ್ಲಿ ಬ್ಯಾಂಕ್‌ ಮಿತ್ರರನ್ನು ನೇಮಿಸಿ ಅವರಿಗೆ ಹಣಪಾವತಿ, ಹಾಗೂ ಹಣ ಬಿಡುಗಡೆ ಮಾಡುವ ಮಿನಿ ಎಟಿಎಂ ಯಂತ್ರ ನೀಡಲಾಗಿದೆ’ ಎಂದರು.

ಕಾರ್ಯಾಗಾರದಲ್ಲಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್‌್ ಪ್ರಬಂಧಕ ಚಂದ್ರಶೇಖರ್, ಹಾಗೂ ಬ್ಯಾಂಕ್‌ಮಿತ್ರ ಎಂ.ಬಿ.ಮಹಾಸ್ವಾಮಿ   ಪ್ರಾತ್ಯಕ್ಷಿಕೆ ನೀಡಿದರು. ಇದೇ ವೇಳೆ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಸೈಯದ್‌ ಅನ್ವರ್, ಗ್ರಾಮಸ್ಥರಾದ ಪ.ಮ.ಗುರುಲಿಂಗಯ್ಯ, ಬಿ.ಎಂ. ತಿಪ್ಪೇರುದ್ರ ಸ್ವಾಮಿ, ಪ್ರಭುಸ್ವಾಮಿ, ಕೃಷಿ ಸಹಕಾರಿ ಬ್ಯಾಂಕ್‌ ಕಾರ್ಯನಿರ್ವಹಣಾ ಧಿಕಾರಿ ಪಿ.ವಿರೂಪಾಕ್ಷಪ್ಪ, ಬೋರಯ್ಯ, ಕೆ.ರಾಜಣ್ಣ, ಸತೀಶ್‌ನಾಯ್ಕ, ಹಾಗೂ ರೈತಸಂಘದ ಮುಖಂಡರು,ವಿವಿಧ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳು, ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT