ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್ ಸಾವು: ಆರೋಪಿಗಳ ಬಂಧನಕ್ಕೆ ಆಗ್ರಹ

ಯಾದಗಿರಿ: ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಮನವಿ
Last Updated 18 ಜನವರಿ 2017, 5:35 IST
ಅಕ್ಷರ ಗಾತ್ರ

ಯಾದಗಿರಿ: ಹೈದರಾಬಾದ್ ವಿಶ್ವವಿ ದ್ಯಾಲಯದ ದಲಿತ ಪ್ರತಿಭಾನ್ವಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಜಾತಿ ತಾರತಮ್ಯ ಮತ್ತು ದೌರ್ಜ ನ್ಯಕ್ಕೆ ಒಳಗಾಗಿ ಆತ್ಮ ಹತ್ಯೆಮಾಡಿಕೊಂಡು ವರ್ಷಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿ ಗಳನ್ನು ಕೂಡಲೇ ಬಂಧಿಸುವಂತೆ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾ ಧಿಕಾರಿಗಳು ಮಂಗಳವಾರ ತಾಲ್ಲೂಕು ಆಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

‘ದೇಶದಲ್ಲಿ ಇಂದು ದಲಿತರು ಅನು ಭವಿಸುತ್ತಿರುವ ಅವಮಾನ, ದೌರ್ಜ ನ್ಯಗಳಿಗೆ ವೇಮುಲ ಸಾವು ಒಂದು ಸಂಕೇತ ಹಾಗೂ ಸಾಕ್ಷಿಯಾಗಿದೆ. ಈ ದಿನ ವನ್ನು‘ಅಖಿಲ ಭಾರತ ದಲಿತರ ಹಕ್ಕುಗಳ ದಿನ’ ಎಂದು ಆಚರಿಸಲಾಗುತ್ತಿದೆ. ದಲಿ ತರ ಈ ಕೆಳಗಿನ ಹಕ್ಕೊತ್ತಾಯಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ರೋಹಿತ್ ವೇಮುಲರವರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು. ಮರಕುಂಬಿ ದಲಿತರ ಹಾಗೂ ಅವರ ಮುಖಂಡರು ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ದಾಖಲು ಮಾಡಲಾದ ಎಲ್ಲ ಸುಳ್ಳು ಪ್ರತಿ ದೂರುಗಳನ್ನು ರದ್ದುಮಾಡಬೇಕು.

ಮರಕುಂಬಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ಸಾಕ್ಷಿ ದಾರರಾಗಿರುವ ದಲಿತರಿಗೆ ಹಾಗೂ ಇತರ ಸಾಕ್ಷಿದಾರರಿಗೆ ರಕ್ಷಣೆ ಒದಗಿ ಸಬೇಕು. ದಲಿತರಿಗೆ ದೇವಸ್ಥಾನ, ಹೊಟೇಲ್, ಕ್ಷೌರದ ಅಂಗಡಿ, ಕುಡಿಯುವ ನೀರಿನ ನಲ್ಲಿಗಳಿಗೆ ಪ್ರವೇಶ ನಿರಾಕರಿಸುವ ಪ್ರಕರಣಗಳನ್ನು ಪೊಲೀಸರೇ ಪತ್ತೆಹಚ್ಚಿ ಪ್ರಕರಣಗಳನ್ನು ದಾಖಲು ಮಾಡುವಂತೆ ಆದೇಶ ನೀಡಬೇಕು. ದಲಿತ ಯುವಕ, -ಯುವತಿಯರಿಗೆ ಸ್ವಂತ ಉದ್ಯೋಗ ಹಮ್ಮಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯಿಂದ ಬಡ್ಡಿರಹಿತ ಸಾಲ ವಿತರಿಸಬೇಕು.

ದೇವದಾಸಿ ಪದ್ಧತಿಯನ್ನು ತೊರೆದು ಬಂದಿರುವ ಮಹಿಳೆಯರಿಗೆ ವಾಸಕ್ಕೆ ಮನೆ, ಬೇಸಾಯಕ್ಕೆ ಕನಿಷ್ಠ 2 ಎಕರೆ ಭೂಮಿ, ಮಾಸಿಕ ಪರಿಹಾರ ₹ 2,000 ನೀಡಬೇಕು ಎಂದು ಮನ ವಿಯಲ್ಲಿ ಹಕ್ಕೊತ್ತಾಯ ಮಂಡಿಸಲಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಕಲಾಲ್, ತಾಲ್ಲೂಕು ಅಧ್ಯಕ್ಷ ಮಾರೆಪ್ಪ ಬಾಲಛೇಡ, ಕಾರ್ಮಿಕ ಮುಖಂಡ ಸೈದಪ್ಪ ಗುತ್ತೇದಾರ, ರಾಜು ಪೊರ್ಲಾ ,  ಶಿವಪ್ಪ ಬದ್ದೇಪಲ್ಲಿ, ಕಾಶಪ್ಪ ರಾಮ ಸಮುದ್ರ, ರಾಮಯ್ಯ ಕಲಾಲ್, ಬಾಬು ಬಡಿಗೇರ, ಹಣಮಂತ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT