ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಪಾವತಿ ನಿಯಮ ಉಲ್ಲಂಘನೆ: ಪ್ರತಿಭಟನೆ

ಜಿಲ್ಲಾ ಪಂಚಾಯಿತಿ ಎದುರು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಆರೋಪ
Last Updated 18 ಜನವರಿ 2017, 5:36 IST
ಅಕ್ಷರ ಗಾತ್ರ

ಯಾದಗಿರಿ: ಗ್ರಾಮ ಪಂಚಾಯ್ತಿಗಳಲ್ಲಿ ವಸೂಲಿ ಮಾಡುವ ತೆರಿಗೆಯಲ್ಲಿ ಶೇ 40ರಷ್ಟು ಹಣವನ್ನು ಸಿಬ್ಬಂದಿ ವೇತನ ಕ್ಕಾಗಿ ಪಾವತಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿ ಯು ನೇತೃತ್ವದಲ್ಲಿ ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಅನಿರ್ದಿಷ್ಟ ಕಾಲ ಧರಣಿ ಆರಂಭಿಸಿತು.

ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಂಚಾಲಕ ಗಾಲಿಬಸಾಬ ಎಂ.ಬೆಳಗೇರಿ ಮಾತನಾಡಿ,‘ ಬಿಲ್‌ ಕಲೆಕ್ಟರ್‌ ಹುದ್ದೆಯಿಂದ ಗ್ರೇಡ್‌–2 ಕಾರ್ಯದರ್ಶಿ ಹುದ್ದೆಗೆ ಬಡ್ತಿ, ಕನಿಷ್ಠ ವೇತನ ಪಾವತಿ ಸೇರಿದಂತೆ ಸರ್ಕಾರ ಈಚೆಗೆ ಪರಿಷ್ಕೃತ ಆದೇಶ ಹೊರ ಡಿಸಿದ್ದರೂ ಸ್ಥಳೀಯ ಆಡಳಿತ ಆದೇಶ ವನ್ನು ಉಲ್ಲಂಘಿಸಿವೆ’ ಎಂದು ಆರೋಪಿಸಿದರು.

‘ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಅನುಮೋದನೆ ಬಾಕಿ ಉಳಿದಿವೆ. 2013ರಿಂದ ಇಲ್ಲಿವರೆಗೂ ಬಿಲ್‌ಕಲೆಕ್ಟರ್‌ಗಳ ಜ್ಯೇಷ್ಠತಾ ಪಟ್ಟಿ ತಯಾರಿಸಿಲ್ಲ’ ಎಂದು ದೂರಿದರು.

ಪ್ರತಿ ತಿಂಗಳು ಮೂಲವೇತನ ಪಾವತಿ ಮಾಡಬೇಕು. ಹಿಂಬಾಕಿಯನ್ನು ಕೂಡಲೇ ವಿತರಿಸಬೇಕು. 2016ರ ಆದೇಶ ದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಅನುಮೋದನೆ ನೀಡಬೇಕು. ಸಿಬ್ಬಂದಿಗೆ ಸಮವಸ್ತ್ರ, ಬ್ಯಾಟರಿ ವಿತರಿಸಬೇಕು. ನಿವೃತ್ತಿ ಹೊಂದಿದ ಹಾಗೂ ಅಕಾಲಿಕ ಮರಣ ಹೊಂದಿದ ನೌಕರರಿಗೆ ಗ್ರ್ಯಾಚುಟಿ ನೀಡಬೇಕು. ಗ್ರೇಡ್‌–2ಕಾರ್ಯದರ್ಶಿ ಹುದ್ದೆಗೆ ನೀಡುವ ನೀಡುವ ಮೀಸಲಾತಿಯನ್ನು ಶೇ 70 ರಿಂದ ಶೇ 100ಕ್ಕೆ ಹೆಚ್ಚಿಸಬೇಕು. ನೌಕರರ ಸೇವಾ ಪುಸ್ತಕ ತೆರೆಯಬೇಕು ಎಂದು ಧರಣಿ ನಿರತರು ಒತ್ತಾ ಯಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಲಾಲ್‌ ತೋಟದಮನಿ, ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಕಾರ್ಯದರ್ಶಿ ಯಲ್ಲಪ್ಪ, ಜಿಲ್ಲಾ ಸಮಿತಿ ಸದಸ್ಯ ವೀರಣ್ಣ ಕೊಳ್ಳೂರ, ತಾಲ್ಲೂಕು ಅಧ್ಯಕ್ಷ ಬಸವರಾಜ ದೊರೆ, ಜಿಲ್ಲಾ ಸಮಿತಿ ಸದಸ್ಯ ನರಸರೆಡ್ಡಿ ಮಿನಸಪುರ, ಜಿಲ್ಲಾ ಮುಖಂಡ ನಾಗಣ್ಣಗೌಡ ತಳಕ, ಜಿಲ್ಲಾ ಸಮಿತಿ ಸದಸ್ಯರಾದ ವೀರಣ್ಣಗೌಡ ಕ್ಯಾತನಾಳ, ಮಹಾದೇವಪ್ಪ ಯಂಪಾಡ, ಶಹಾಪುರ ತಾಲ್ಲೂಕು ಅಧ್ಯಕ್ಷ ಮಲ್ಲಣ್ಣ ಬಿರಾದಾರ, ತಾಲ್ಲೂಕು ಕಾರ್ಯದರ್ಶಿ ಸಿದ್ದಣ್ಣ ಮುಡ ಬೂಳ, ಮಡಿವಾಳಪ್ಪ ಸುರಪುರ, ಸಂಜೀ ವಪ್ಪ ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT