ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ಅಭಿರುಚಿ ಬೆಳೆಯಲಿ: ಸಚಿವ

ಬಹುರೂಪಿ ಅಂತರರಾಷ್ಟ್ರೀಯ ಬಹುಭಾಷಾ ನಾಟಕೋತ್ಸವಕ್ಕೆ ಚಾಲನೆ
Last Updated 18 ಜನವರಿ 2017, 6:03 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ವೀಕ್ಷಿಸಿ ಕಲೆಯನ್ನು ಪ್ರೋತ್ಸಾಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಕಲಬುರ್ಗಿ ರಂಗಾಯಣ ವತಿಯಿಂದ ನಗರದ ಡಾ.ಎಸ್‌.ಎಂ.­ಪಂಡಿತ ರಂಗಮಂದಿರದಲ್ಲಿ ಜ.21ರ ವರೆಗೆ ಹಮ್ಮಿಕೊಂಡಿರುವ ಬಹುರೂಪಿ ಅಂತರರಾಷ್ಟ್ರೀಯ ಬಹುಭಾಷಾ ನಾಟಕೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ರಂಗಾಯಣದ ವತಿಯಿಂದ ಅಂತರ­ರಾಷ್ಟ್ರೀಯ ನಾಟಕೋತ್ಸವ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಆದರೆ, ಸಾರ್ವಜನಿಕರು ಹೆಚ್ಚು ಪಾಲ್ಗೊ­ಳ್ಳದೆ ಇರುವುದರಿಂದ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ’ ಎಂದು ಹೇಳಿದರು.

ಹಿರಿಯ ನಾಟಕಕಾರ ಎಲ್‌.ಬಿ.ಕೆ.ಆಲ್ದಾಳ ಮಾತನಾಡಿ, ‘ಭೂಮಿ ಸೃಷ್ಟಿಯಾದ ದಿನವೇ ರಂಗ­ಭೂಮಿ ಸೃಷ್ಟಿಯಾಗಿದೆ. ‘ಆಡು ನಾಟಕ, ಬೆಳೆಸು ಮಸ್ತಕ’ ಎನ್ನುವಂತೆ ನಾಟಕ­ಗಳನ್ನು ಆಡಬೇಕು. ನೋಡಬೇಕು. ಕಲಿ ಯಬೇಕು’ ಎಂದು ಸಲಹೆ ನೀಡಿದರು.

ಶಾಸಕ ಬಿ.ಆರ್‌.ಪಾಟೀಲ ಮಾತ­ನಾಡಿ, ‘ಈ ಪ್ರದೇಶದ ರಂಗಾಸಕ್ತರು ಕಲಬುರ್ಗಿ ರಂಗಾಯಣವನ್ನು ಗಟ್ಟಿಗೊಳಿಸುವ ಕಾರ್ಯ ಮಾಡಬೇಕು. ಆ ಮೂಲಕ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಅವರು ಹೇಳಿದರು.

ರಂಗ ಸಮಾಜದ ಸದಸ್ಯೆ ಡಾ.ಸುಜಾತಾ ಜಂಗಮಶೆಟ್ಟಿ ಮಾತ­ನಾಡಿ, ‘ಸಂಬಂಧಗಳನ್ನು ಬೆಸೆಯುವ ಶಕ್ತಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕಗಳಿಗೆ ಇದೆ. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ವತಿಯಿಂದ ಜಿಲ್ಲೆಯಲ್ಲಿ 150 ಆಸನಗಳ ರಂಗ­ಮಂದಿರವನ್ನು ನಿರ್ಮಿಸಿಕೊಡಬೇಕು’ ಮಂಡಳಿ ಅಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ ಮನವಿ ಮಾಡಿದರು.

ಹಿರಿಯ ರಂಗಕರ್ಮಿ ಪ್ರಭಾಕರ ಸಾಥಖೇಡ ಮಾತನಾಡಿದರು. ರಂಗಾ­ಯಣ ಪ್ರಭಾರ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ, ಬಹುರೂಪಿ ನಾಟಕೋತ್ಸವ ಸಂಚಾಲಕ ಸಂದೀಪ ಬಿ., ಕಲಾವಿದ ಸಂತೋಷ ಕುಸನೂರು ಇದ್ದರು.

ರಂಗಾಯಣ ಪ್ರಭಾರ ನಿರ್ದೇಶಕ ಕೆ.ಎಚ್‌.ಚನ್ನೂರ ಸ್ವಾಗತಿಸಿದರು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT