ಆಸ್ಪತ್ರೆಯಿಂದ ಬಿಡುಗಡೆ

‘ಕ್ವಾಂಟಿಕೋ’ ಚಿತ್ರೀಕರಣಕ್ಕೆ ಶ್ರೀಘ್ರವೆ ಮರಳುವೆ: ಪ್ರಿಯಾಂಕ ಚೋಪ್ರಾ

‘ಕ್ವಾಂಟಿಕೋ’ ಟಿವಿ ಷೋ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಪ್ರಿಯಾಂಕ ಚೋಪ್ರಾ

ಲಾಸ್‌ ಏಂಜಲ್ಸ್: ‘ಕ್ವಾಂಟಿಕೋ’ ಟಿವಿ ಷೋ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

34 ವರ್ಷದ ನಟಿ ಪ್ರಿಯಾಂಕಾ ಸಾಹಸ  ದೃಶ್ಯದ ಚಿತ್ರೀಕರಣದ ವೇಳೆ ಕಾಲು ಜಾರಿ ಬಿದ್ದು ಅವರ ತಲೆಗೆ ಗಾಯವಾಗಿತ್ತು. ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಪ್ರಿಯಾಂಕಾ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.ಈಗ ಸಹಜ ಸ್ಥಿತಿಯಲ್ಲಿರುವ ನಾನು, ಶೀಘ್ರದಲ್ಲೆ ಚಿತ್ರೀಕರಣಕ್ಕೆ ಮರಳುವುದಾಗಿ ತಿಳಿಸಿರುವ ಪ್ರಿಯಾಂಕಾ, ‘ಚೇತರಿಸಿಕೊಳ್ಳುವಂತೆ ಶುಭ ಹಾರೈಸಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು’ ಎಂದು ಟ್ವೀಟ್‌ ಮಾಡಿದ್ದಾರೆ.

Comments