ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಿನಿಮಾವೇ ಅಮೀರ್‌ ಆದ್ಯತೆ

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ವಿಶಿಷ್ಟ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅಮೀರ್‌ ಖಾನ್‌ ಅವರಿಗೆ ಹಾಲಿವುಡ್‌ಗೆ ತೆರಳಿ ಸಿನಿಮಾ ಮಾಡುವ ಯಾವುದೇ ಯೋಚನೆ ಇಲ್ಲವಂತೆ.

ಏನೇ ಮಾಡಿದರೂ ಭಾರತದಲ್ಲಿದ್ದುಕೊಂಡು, ಭಾರತೀಯ ಸಿನಿಮಾಗಳಲ್ಲೇ ಕೆಲಸ ಮಾಡಬೇಕು ಎಂದು ಆಶಿಸುತ್ತಿರುವ ಅವರು ಅಂತರರಾಷ್ಟ್ರೀಯ ಮಟ್ಟದ ಉತ್ತಮ ಪ್ರಾಜೆಕ್ಟ್‌ಗಳು ಬಂದರೆ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮೀರ್‌ ‘ಅಮೆರಿಕಕ್ಕೆ ಹೋಗಿ ಅಲ್ಲಿಯ ಸಿನಿಮಾಗಳಲ್ಲಿ ಕೆಲಸ ಮಾಡುವ ಯಾವುದೇ ಆಸಕ್ತಿ ನನಗಿಲ್ಲ. ನನ್ನ ಆದ್ಯತೆ ಏನಿದ್ದರೂ ಭಾರತೀಯ ಸಿನಿಮಾವೇ. ಕಲಾವಿದನಾಗಿ ಇಲ್ಲಿಯ ಪ್ರೇಕ್ಷಕ ವರ್ಗದೊಂದಿಗೆ 25–26 ವರ್ಷದ ಸಂಬಂಧವಿದೆ. ಹೀಗಾಗಿ ಇದೇ ನನ್ನ ಆದ್ಯತಾ ಕ್ಷೇತ್ರ’ ಎಂದಿದ್ದಾರೆ ಅಮೀರ್‌.

‘ಸೃಜನಶೀಲ ಕೆಲಸಕ್ಕೆ ಯಾವುದೇ ಚೌಕಟ್ಟಿಲ್ಲ. ಭಾಷೆಯ ಹಂಗೂ ಇಲ್ಲ. ಒಂದೊಮ್ಮೆ ಜಪಾನ್‌ ಸಿನಿಮಾ ಅವಕಾಶ ಸಿಕ್ಕಿ ಅದು ನನಗೆ ಇಷ್ಟವಾದರೆ ಖಂಡಿತ ಮಾಡುತ್ತೇನೆ. ಅಂತರರಾಷ್ಟ್ರೀಯ ಮಟ್ಟದ ಯಾವುದೇ ಕೆಲಸ ನನ್ನ ಬಳಿ ಬಂದರೂ ಮಾಡುತ್ತೇನೆ. ಆದರೆ ಅದು ನನ್ನ ಮನಸ್ಸಿಗೆ ಹಿಡಿಸಬೇಕಷ್ಟೆ’ ಎಂದೂ ಅವರು ಹೇಳಿದ್ದಾರೆ.

‘ಹಾಲಿವುಡ್‌ ಸಿನಿ ಜಗತ್ತಿನಿಂದಾಗಿ ಭಾರತೀಯ ಸಿನಿಮಾಗಳಿಗೆ ಯಾವುದೇ ಭಯವಿಲ್ಲ. ಆದರೆ ನಾವು ನಮ್ಮಗಳ ಬಗ್ಗೆಯೇ ಭಯ ಇಟ್ಟುಕೊಳ್ಳಬೇಕು. ಯಾಕೆಂದರೆ ನಾವೊಂದು ಕೆಟ್ಟ ಸಿನಿಮಾ ಮಾಡಿದೆವೆಂದರೆ ಅಷ್ಟು ಪ್ರೇಕ್ಷಕ ವರ್ಗವನ್ನು ಕಳೆದುಕೊಳ್ಳುತ್ತೇವೆ ಎಂದರ್ಥ. ಹೀಗಾಗಿ ಉತ್ತಮ ಸಿನಿಮಾಗಳನ್ನು ನೀಡುವ ಜವಾಬ್ದಾರಿ ಎಲ್ಲರಿಗೂ ಇದೆ’ ಎಂದಿದ್ದಾರೆ ಅಮೀರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT