ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 19–1–1967

50 ವರ್ಷಗಳ ಹಿಂದೆ
Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಕೇಂದ್ರ ಪ್ರದೇಶವಾಗಿ ಗೋವೆ ಬಹುಪಾಲು ಖಚಿತ
ಪಣಜಿ, ಜ. 18–
ಪವಾಡವೊಂದು ನಡೆದರೆ ಮಾತ್ರವೇ ಗೋವೆ ಮಹಾರಾಷ್ಟ್ರದಲ್ಲಿ ವಿಲೀನಗೊಳ್ಳುವುದು ಸಾಧ್ಯ. ಬುಧವಾರ ರಾತ್ರಿ 8–15 ಗಂಟೆಗೆ ಎರಡನೆಯ
ದಿನದಂದು ಮತಗಳ ಎಣಿಕೆ ಸ್ಥಗಿತಗೊಂಡಾಗ ವಿಲೀನ ವಾದಕ್ಕಿಂತ ಕೇಂದ್ರದ ಆಡಳಿತ ಪ್ರದೇಶವೇ ಆಗಿರಲು 8,888 ಮತಗಳು ಹೆಚ್ಚು ಬಿದ್ದಿದ್ದುವು.

ಒಟ್ಟು 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳ ಮತಗಳ ಎಣಿಕೆ ಮುಕ್ತಾಯವಾಗಿದ್ದು, ಕೇಂದ್ರ ಪ್ರದೇಶಕ್ಕೆ 1,33,954 ಮತಗಳೂ, ಮಹಾರಾಷ್ಟ್ರದಲ್ಲಿ ವಿಲೀನಕ್ಕೆ 1,25,066 ಮತಗಳೂ ದೊರೆತಿದ್ದುವು. ಕುಲಗೆಟ್ಟ ಮತಗಳು: 6495; ಎಣಿಕೆಯಾದ ಒಟ್ಟು ಮತಗಳು: 2,65,515.

***
ರಾಷ್ಟ್ರದಲ್ಲೇ ಅತ್ಯುಪಯುಕ್ತ ಯಂತ್ರೋಪಕರಣಗಳ ತಯಾರಿಕೆ ಪ್ರಗತಿ
ನವದೆಹಲಿ, ಜ. 18–
ಅಲ್ಪ ಪ್ರಮಾಣದ ಕೈಗಾರಿಕೆಗಳಲ್ಲಿ ಉಂಟಾಗಿರುವ ಯಾಂತ್ರಿಕ ಹಾಗೂ ತಾಂತ್ರಿಕ ಕೊರತೆಗಳನ್ನು ಬಹುಮಟ್ಟಿಗೆ ನಿವಾರಿಸಲು ಸಮರ್ಥವಾದ ಏಳು ಬಗೆಯ ಸಣ್ಣ ಪ್ರಮಾಣದ ನವೀನ ಯಂತ್ರೋಪಕರಣಗಳನ್ನು ಓಖ್ಲಾ ಯಂತ್ರ ಉತ್ಪಾದನೆ ಹಾಗೂ ತರಪೇತಿ ಕೇಂದ್ರಲ್ಲಿ ರೂಪಿಸಲಾಗಿದೆ.
16 ರಿಂದ 22ರ ವಯೋಮಿತಿಯಲ್ಲಿರುವ 800 ಜನ ಯುವಕರಿಗೆ ಈ ತರಬೇತಿ ಕೇಂದ್ರದಲ್ಲಿ ಅಗತ್ಯ ಶಿಕ್ಷಣ ನೀಡಲಾಗುತ್ತಿದೆ.

***
ದೆಹಲಿಯಲ್ಲಿ ಮೈಸೂರು ಅಧಿಕಾರಿ
ಬೆಂಗಳೂರು, ಜ. 18–
ಶ್ರೀ ಬಿ.ಆರ್‌. ವರ್ಮ ಅವರು ನವದೆಹಲಿಯಲ್ಲಿ ಮೈಸೂರಿನ ವಿಶೇಷ ಕಮಿಷನರ್‌ ಆಗಿ ಅಧಿಕಾರಿ ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT