ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಾಚರಣೆ ಅಗತ್ಯ: ಶ್ರೀಶೈಲ ಶ್ರೀ

Last Updated 19 ಜನವರಿ 2017, 5:07 IST
ಅಕ್ಷರ ಗಾತ್ರ

ಯಾದಗಿರಿ : ಪ್ರಸಕ್ತ ದಿನಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ ಜನತೆ ಗುರು-ಹಿರಿಯರ ಆಧ್ಯಾತ್ಮಿಕ ಸಂಸ್ಕಾರವನ್ನು ಮರೆಯುತ್ತಿರುವುದು ವಿಷಾದ, ಪ್ರತಿಯೊಬ್ಬರ ತಮ್ಮ ಜೀವನದಲ್ಲಿ ಧರ್ಮಾಚರಣೆ ಪಾಲನೆ ಮಾಡಿದಲ್ಲಿ ಮಾತ್ರ ಅವರ ಬದುಕಿಗೂ ನೆಮ್ಮದಿ, ಸಾರ್ಥಕತೆ ಸಿಗುವುದರ ಜೊತೆಗೆ ಮನುಕುಲ ಸಮಾಜ ಸದೃಢವಾಗಿ ಬೆಳೆವಣಿಗೆಯಾಗುತ್ತದೆ ಎಂದು ಶ್ರಿಶೈಲದ ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸೋಮವಾರ ತಾಲ್ಲೂಕಿನ ಕೌಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗುರುಸಿದ್ಧರಾಮ ಶಿವಯೋಗಿ ಸಂಸ್ಥಾನ ಹಿರೇಮಠದ ನೂತನ ಕಟ್ಟಡ ಲೋಕಾರ್ಪಣೆ, ಮೂರ್ತಿ ಸ್ಥಾಪನೆ,ಮಠಕ್ಕೆ ನೂತನ ಉತ್ತರಾಧಿಕಾರಿಗಳ ನೇಮಕ ಹಾಗೂ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

‘ಯಾವುದೇ ಮಠಗಳಿಗಾಗಲಿ ಅಲ್ಲಿನ ಭಕ್ತರೇ ಆಸ್ತಿ. ಕಾರಣ ಮಠದ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು. ನಾಡಿನಲ್ಲಿ ಅನಾದಿ ಕಾಲದಿಂದಲೂ ವೀರಶೈವ ಪರಂಪರೆ ಮಠ ಮಾನ್ಯಗಳು ತ್ರಿವಿಧ ದಾಸೋಹಗಳ ಮೂಲಕ ನಾಡಿನ ಪ್ರಗತಿಗೆ ತಮ್ಮದೆಯಾದ ಕೊಡುಗೆ ನೀಡಿವೆ. ಇಲ್ಲಿನ ಸಿದ್ಧರಾಮೇಶ್ವರ ಮಠದ ಹಿಂದಿನ ಶ್ರೀಗಳು ಕೂಡ ಕೂಡಲಸಂಗಮದಲ್ಲಿರುವ ಸಂಗಮ ದೇವಸ್ಥಾನ ಕ್ಷೇತ್ರವನ್ನು ಉಳಿಸಿ, ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಅವರ ಕಾರ್ಯ, ಹೋರಾಟ ಯಾರು ಮರೆಯುವಂತಿಲ್ಲ’ ಎಂದರು.

‘ಶ್ರೀಶೈಲ ಕ್ಷೇತ್ರದ ಅಭಿವೃದ್ಧಿಗೆ ಕನ್ನಡಿಗರು ನೀಡಿರುವ ಕೊಡುಗೆ ಅಪಾರ. ಪೀಠವು ಕೂಡ ಯಾವತ್ತೂ ಮರೆಯದೆ ಭಕ್ತರೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡು ಹೋಗುತ್ತಿದೆ’ ಎಂದರು.

ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಮಾತನಾಡಿ,‘ಮಠಾಧೀಶರು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಮಾನತೆ, ಸಾಮರಸ್ಯ, ವಾತಾವರಣ ನಿರ್ಮಾಣ ಮಾಡುತ್ತಿರುವುದು ಕೆಲಸ ಅನನ್ಯ’ ಎಂದು ಬಣ್ಣಿಸಿದರು. ಶ್ರೀಮಠದ ನೂತನ ಉತ್ತರಾಧಿಕಾರಿಯಾಗಿ ಚಿ.ಸಿದ್ಧರಾಮೇಶ ಅವರನ್ನು ಎಲ್ಲಾ ಶ್ರೀಗಳು ಆಶೀರ್ವದಿಸಿದರು. ಜಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಿಕಾರ್ಜುನರೆಡ್ಡಿ ಮಾಲಿಪಾಟೀಲ್ ಕೌಳೂರು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಯಲ್ಹೇರಿ ವಾರಾಣಸಿ ಹಿರೇಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬಸವಯ್ಯ ಶರಣರು, ಚೆನ್ನವೀರಯ್ಯ ಸ್ವಾಮೀಜಿ ಕೌಳೂರ, ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ, ಲಿಂಗನಗೌಡ ಮಲ್ಹಾರ, ಶ್ರೀನಿವಾಸರೆಡ್ಡಿ ಪಾಟೀಲ್, ಚೆನ್ನೂರು, ಶರಣಪ್ಪಗೌಡ ಕೌಳೂರು, ಶ್ರೀನಿವಾಸರೆಡ್ಡಿ ಕಂದಕೂರು, ಶಾಂತರೆಡ್ಡಿ ದೇಸಾಯಿ, ಭೀಮರೆಡ್ಡಿ ಕೂಡ್ಲುರು, ಚೆನ್ನಾರೆಡ್ಡಿ ಬಿಳ್ಹಾರ, ಬಸವರಾಜಪ್ಪೊಗೌಡ ಗೊಂದಡಗಿ, ಉಮಾರೆಡ್ಡಿ ನಾಯ್ಕಲ್, ರಾಮರೆಡ್ಡಿ ತಂಗಡಗಿ, ಶಶಿಧರರೆಡ್ಡಿ ಹೊಸಳ್ಳಿ, ಶರಣಗೌಡ ಕಾಳೆಬೆಳಗುಂದಿ, ಬಸ್ಸುಗೌಡ ಬಿಳ್ಹಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಹಾಪುರದ ಬಸವರಾಜ ಶಾಸ್ತ್ರಿಗಳು ಮಠದಲ್ಲಿ ನಿರಂತರ ೫ ದಿನಗಳ ಕಾಲ ಶರಣರ ಜೀವನ ಚರಿತ್ರೆ ಕುರಿತು ಪ್ರವಚನ ನೀಡಿದರು.
ಶಹಾಪುರದ ಸುಗೂರೇಶ್ವರ ಶಿವಾಚಾರ್ಯ ಸ್ವಾಮಿಜಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT