ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರವಾನಗಿ ಪಡೆಯದಿದ್ದರೆ ಅಂಗಡಿ ಬಂದ್

ಅನಧಿಕೃತ ಅಂಗಡಿಗಳಿಗೆ 7 ದಿನ ಗಡುವು ನೀಡಿದ ಪುರಸಭೆ
Last Updated 19 ಜನವರಿ 2017, 5:19 IST
ಅಕ್ಷರ ಗಾತ್ರ

ಕಡೂರು: 7 ದಿನಗಳಲ್ಲಿ ಪರವಾನಗಿ ಪಡೆ ಯದೆ ಇರುವ ಅಂಗಡಿಗಳ ಮಾಲೀಕರು ಪುರಸಭೆಯಿಂದ ವಾಣಿಜ್ಯ ಪರವಾನಗಿ ಕಡ್ಡಾಯವಾಗಿ ಪಡೆಯಲೇ ಬೇಕು. ಇಲ್ಲದಿದ್ದರೆ ಅಂತಹ ಅಂಗಡಿ ಗಳನ್ನು ಬಂದ್ ಮಾಡಲು ಹಿಂಜರಿ ಯುವುದಿಲ್ಲ ಎಂದು ಕಡೂರು ಪುರ ಸಭಾಧ್ಯಕ್ಷ ಮಾದಪ್ಪ ಎಚ್ಚರಿಕೆ ನೀಡಿದರು.
ಬುಧವಾರ ಕಡೂರು ಪುರಸಭೆಯ ಕನಕ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಡೂರು ಪಟ್ಟಣದಲ್ಲಿ ಸುಮಾರು 3200ಕ್ಕೂ ಹೆಚ್ಚು  ಅಂಗಡಿಗಳು ವಾಣಿಜ್ಯ ಪರವಾನಗಿ ಪಡೆದಿಲ್ಲ. ಅಂತಹ ಪ್ರಕರಣಗಳನ್ನು ಗುರುತಿಸಿ ಪುರಸಭೆ ವತಿಯಿಂದ ನೋಟಿಸ್ ಜಾರಿ ಮಾಡ ಲಾಗಿದೆ. ಆದರೂ ಅನಧಿಕೃತ ಅಂಗಡಿ ಗಳ ಮಾಲೀಕರು ಇದರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಆದ್ದರಿಂದ ಕಡ್ಡಾಯವಾಗಿ ವಾಣಿಜ್ಯ ಪರವಾನಗಿ ಪಡೆಯದಿದ್ದರೆ ಅವರ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಬಂದ್ ಮಾಡಲಾ ಗುವುದು ಎಂದರು.

ಪಟ್ಟಣದ ಹಳೇ ಎಪಿಎಂಸಿ ಬಳಿ ಯಿರುವ ವಾಣಿಜ್ಯ ಮಳಿಗೆಗಳಿಗೂ ಸಹ ನೋಟಿಸ್‌ ಜಾರಿ ಮಾಡಲಾಗಿದ್ದು, ಈ ಮಳಿಗೆಗಳಿಗೆ ಅಧಿಕೃತವಾಗಿ ಖಾತೆಯನ್ನೇ ಮಾಡಿಲ್ಲ. ಆದರೆ ಅಧಿಕಾರಿಗಳು ಪುರ ಸಭಾಧ್ಯಕ್ಷರಿಗೆ ತಪ್ಪು ಮಾಹಿತಿ ನೀಡಿ ದಿಕ್ಕುತಪ್ಪಿಸುತ್ತಿದ್ದಾರೆ. ಖಾತೆಯೇ ಇಲ್ಲದ ವರಿಗೆ ನೋಟಿಸ್ ಜಾರಿ ಮಾಡಿ ಪ್ರಯೋಜನವೇನು? ಅವರ ಮೇಲೆ ಕ್ರಮ ಕೈಗೊಂಡರೆ ಅದು ಪುರಸಭೆಯ ತಪ್ಪು ನಡೆಯಲ್ಲವೆ? ಎಂದು ಪುರಸಭಾ ಸದಸ್ಯೆ ಪುಷ್ಪಲತಾ ಸೋಮೇಶ್  ದೂರಿದರು.

ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಮಂಜಪ್ಪ ಸ್ಪಷ್ಟನೆ ನೀಡಿದರು. ಇದಲ್ಲದೆ ಪಟ್ಟಣದ ಹಲವೆಡೆ ಮನೆ ನಿರ್ಮಿಸುವುದರ ಜೊತೆಗೆ ಆ ಮನೆಗೆ ಹೊಂದಿಕೊಂಡಂತೆ ವಾಣಿಜ್ಯ ಮಳಿಗೆಯ ನಿರ್ಮಾಣವೂ ನಡೆದಿದೆ. ಅವರಿಗೂ ಸಹ ವಾಣಿಜ್ಯ ಪರವಾನಗಿ ಪಡೆಯಲು ಸೂಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕಡೂರು ಪಟ್ಟಣದ ಕೆ.ಎಂ. ರಸ್ತೆಯ ಲ್ಲಿರುವ ಕಾಫಿ ಕ್ಯೂರಿಂಗ್ ಬಡಾವಣೆಗೆ ಟಿಪ್ಪುನಗರ ಎಂದು ಹೆಸರಿಡಲು ಸೆಪ್ಟೆಂಬರ್‌ 11, 1996 ರಲ್ಲಿಯೇ ನಿರ್ಧ ರಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳ ಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಬಷೀರ್ ಸಾಬ್ ಒತ್ತಾಯಿಸಿದರು. ಈ ಕುರಿತು ಸ್ಪಷ್ಟನೆ ನೀಡಿದ ಮುಖ್ಯಾ ಧಿಕಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ. ಅವರ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಉಪಾಧ್ಯಕ್ಷ ರಾಜೇಶ್, ಸದಸ್ಯರಾದ ಎಂ.ಸೋಮಶೇಖರ್, ಕೆ.ಎಂ.ಮೋಹನ್ ಕುಮಾರ್, ಈರಳ್ಳಿ ರಮೇಶ್, ಪದ್ಮಾ ಶಂಕರ್, ಹಾಜಿರಬಿಖಾದರ್, ಅನಿತಾ ರಾಜ್ ಕುಮಾರ್, ಜಯಮ್ಮ, ವೆಂಕಟೇ ಶಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT