ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗಿಳಿದ ವಿದ್ಯಾರ್ಥಿಗಳು, ಗ್ರಾಮಸ್ಥರು

ಹಂಗಾರಕಟ್ಟೆ ಮೀನು ಸಂಸ್ಕರಣಾ ಘಟಕಕ್ಕೆ ತೀವ್ರ ವಿರೋಧ– ಪ್ರತಿಭಟನೆ
Last Updated 19 ಜನವರಿ 2017, 5:39 IST
ಅಕ್ಷರ ಗಾತ್ರ

ಮಾಬುಕಳ (ಬ್ರಹ್ಮಾವರ): ಮಾಬುಕಳ ಹಂಗಾರಕಟ್ಟೆಯಲ್ಲಿ ಪ್ರಾರಂಭವಾಗುತ್ತಿ ರುವ ಯಶಸ್ವಿನಿ ಫಿಶ್ ಮಿಲ್ ಮತ್ತು ಸಂಸ್ಕರಣಾ ಘಟಕದಿಂದ ಆಸುಪಾಸಿನ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥ ರಿಗೆ ಆಗುವ ಸಮಸ್ಯೆಗಳು ಖಂಡಿಸಿ ಮತ್ತು ಘಟಕ ಸ್ಥಾಪಿಸಲು ಅನುಮತಿ ನೀಡಿರು ವುದನ್ನು ವಿರೋಧಿಸಿ ಬುಧವಾರ ಐರೋಡಿ ಪಂಚಾಯಿತಿ ಎದುರು ಬೃಹತ್‌ ಪ್ರತಿಭಟನೆ ನಡೆಯಿತು.

ಹಂಗಾರಕಟ್ಟೆ ಬಂದರಿನಿಂದ ಬೃಹತ್‌ ಸಂಖ್ಯೆಯಲ್ಲಿ ಜಮಾಯಿಸಿದ ಬಾಳ್ಕುದ್ರು ಶಾಲೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರು ಜಾಥಾ ನಡೆಸಿ ಉದ್ಯಮ ಸ್ಥಾಪನೆಗೆ ಅನುಮತಿ ನೀಡಿದ ಪಂಚಾಯಿತಿ ಅಧ್ಯಕ್ಷ ಮತ್ತು ಹಿಂದಿನ ಪಿಡಿಒ ವಿರುದ್ಧ ಘೋಷಣೆ ಕೂಗಿದರು.

ಊರಿನ ಹಿರಿಯ ಇಬ್ರಾಹಿಂ ಸಾಹೇಬ್ ಮಾತನಾಡಿ, ಹಂಗಾರಕಟ್ಟೆ ಪ್ರದೇಶದಲ್ಲಿ ಹಲವು ಕೈಗಾರಿಕೆಗಳು ಬಂದಿದೆ. ಈ ಹಿಂದೆ ಕೂಡ ಹಲವು ವಹಿವಾಟುಗಳು ಇದೇ ಬಂದರಿನ ಮೂ ಲಕ ನಡೆಯುತ್ತಿತ್ತು. ಈಗಾಗಲೇ ಇಲ್ಲಿ ಆರಂಭಗೊಂಡಿರುವ ಉದ್ಯಮಗಳಿಂದ ಕುಡಿಯುವ ನೀರು ಕಲುಷಿತಗೊಂಡು ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ.

ಈಗ ಆರಂಭಗೊಳ್ಳಲಿ ರುವ ಮೀನು ಸಂಸ್ಕರಣಾ ಘಟಕದಿಂದ ವಾಯುಮಾಲಿನ್ಯವುಂಟಾಗಿ ಉಸಿರಾ ಡಲು ಶುದ್ಧ ಗಾಳಿ ಇರದ ಪರಿಸ್ಥಿತಿ ಉಂಟಾಗಲಿದೆ. ಯಾರದ್ದೋ ಸ್ವಾರ್ಥ ಕ್ಕಾಗಿ ಕುಡಿಯುವ ನೀರನ್ನು ಕಳೆದು ಕೊಂಡಾಗಿದೆ. ಇನ್ನು ಶುದ್ಧ ಗಾಳಿಯನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ಈಗ ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅದಕ್ಕಾಗಿ ನಾವು ಹೋರಾಟ ಆರಂಭಿಸಿ ದ್ದೇವೆ. ಇನ್ನು ಅದನ್ನು ತೀವ್ರಗೊಳಿಸಿ ಈ ಉದ್ಯಮವನ್ನು ಇಲ್ಲಿಂದ ಓಡಿಸಲು ನಾವು ಶಕ್ತರಾಗಬೇಕಿದೆ ಎಂದರು.

ಈ ಉದ್ಯಮಕ್ಕೆ ಆರಂಭದಿಂದಲೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ದ್ದು, ತಾಲ್ಲೂಕು ಪಂಚಾಯಿತಿ ಇಒ ಕೋರ್ಟ್‌ನಿಂದ ಪರವಾನಗಿ ರದ್ದಿಗೆ ಆದೇಶವಾದ ಕಾರಣ ತಣ್ಣಗಾಗಿತ್ತು.

ಆದರೆ, ಉದ್ಯಮಿಗಳು ಇಒ ಕೋರ್ಟ್ ಆದೇಶಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ನೀಡಿ, ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಮೀನು ಕಟ್ಟಿಂಗ್ ಯುನಿಟ್ ಸ್ಥಳಾಂತರಿಸಲು ಅವಕಾಶ ನೀಡಿತ್ತು. ಆದರೂ ಹೊಸ ಕಟ್ಟಡದಲ್ಲಿ ಮೀನು ಫೌಡರ್ ಘಟಕವನ್ನು ಮಾಡಲು ಹೊರಟ ಉದ್ಯಮಿ ಕೇಶವ್ ಕುಂದರ್, ಭಾನುವಾರ ಪೂಜೆ ನಡೆಸಿ ಕೈಗಾರಿಕೆಗೆ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.

ಈ ಕುರಿತು ವಿಚಾರ ತಿಳಿದ ಗ್ರಾಮಸ್ಥರು, ಇದನ್ನು ವಿರೋಧಿಸಿ ಭಾನುವಾರ  ರಸ್ತೆ ತಡೆ ನಡೆಸಿದ್ದರು. ಆದರೆ, ಬ್ರಹ್ಮಾವರ ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ ಮಾತುಕತೆ ನಡೆಸಿ, ಹೈಕೋರ್ಟ್ ಆದೇಶವಿರುವುದು ಕೇವಲ ಫಿಶ್ ಕಟ್ಟಿಂಗ್ ಯುನಿಟ್ ಸ್ಥಳಾಂತರಕ್ಕೆ. ಫಿಶ್ ಪೌಡರ್ ಘಟಕಕ್ಕೆ ಅನುಮತಿ ಯನ್ನು ಹೈಕೋರ್ಟ್ ನೀಡಿಲ್ಲ. ನೀವು ಪ್ರಾರಂಭಿಸಲೇಬೇಕಾದಲ್ಲಿ ಹೈಕೋರ್ಟ್ ಆದೇಶದನ್ವಯ ಮಾಡಬಹುದು ಎಂದು ಸೂಚಿಸಿದ್ದರು. ಈ ಘಟನೆ ನಡೆದ ಮೇಲೂ ಸಂಸ್ಕರಣಾ ಘಟಕ ಆರಂಭಿ ಸಲು ಹುನ್ನಾರ ನಡೆದಿತ್ತು ಎಂಬುದು ಗ್ರಾಮಸ್ಥರ ಆರೋಪ.

ಮಾತಿನ ಚಕಮಕಿ: ಧ್ವನಿವರ್ಧಕ ಅಳವಡಿಕೆ ಬಗ್ಗೆ ಪೊಲೀಸರಿಂದ  ಅನು ಮತಿ ಪಡೆಯಲಿಲ್ಲ ಎನ್ನುವ ವಿಷಯದ ಬಗ್ಗೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸ್ವಲ್ಪಕಾಲ  ಮಾತಿನ ಚಕಮಕಿ ನಡೆಯಿತು. ಸಾರ್ವಜನಿಕರು ಪರವಾನಗಿ ಇಲ್ಲದೇ ಫಿಶ್ ಮಿಲ್ ಮಾಡಿದರೆ ನೀವು ಕೈಕಟ್ಟಿ ಕುಳಿತುಕೊಳ್ಳು ತ್ತೀರಿ. ಆದರೆ, ಇಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕೇಳುತ್ತಿದ್ದೀರಿ. ಇದ್ದವರಿಗೆ ಒಂದು ನ್ಯಾಯ. ಇಲ್ಲದವರಿಗೆ ಒಂದು ನ್ಯಾಯ ನಿಮ್ಮದು ಎಂದು ಗ್ರಾಮಸ್ಥರು ರೇಗಿದರು. 

ವಿದ್ಯಾಭ್ಯಾಸಕ್ಕೆ ತೊಂದರೆ: ಈ ಮೀನು ಸಂಸ್ಕರಣಾ ಘಟಕದಿಂದ ಸ್ಥಳೀಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದೆ. ಸದ್ಯ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಸೇರಿ ಸುಮಾರು 132ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದು, ಇವರಲ್ಲಿ ಸುಮಾರು 45 ದಲಿತ ವಿದ್ಯಾರ್ಥಿಗಳೂ ಇಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಫಿಶ್ ಮಿಲ್ ವಾಸನೆಯಿಂದಾಗಿ ವಿದ್ಯಾರ್ಥಿ ಗಳು ಶಾಲೆಗೆ ಬರಲು ನಿರಾಕರಿಸುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ನಗರದ ಇಂಗ್ಲಿಷ್ ಮಾಧ್ಯಮ ಶಾಲೆಗೆ ತೆರಳುತ್ತಿ ದ್ದಾರೆ. ಆದರೆ, ಅತ್ಯಂತ ಕಡು ಬಡತನ ವನ್ನು ಎದುರಿಸುತ್ತಿರುವ  ದಲಿತ ವಿದ್ಯಾರ್ಥಿಗಳು ಮಾತ್ರ ವಿದ್ಯಾಭ್ಯಾಸ ಮೊಟಕು ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಜಿಲ್ಲಾ ಪಂಚಾ ಯಿತಿ ಸದಸ್ಯ ರಾಘವೇಂದ್ರ ಕಾಂಚನ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಉದಯ ಕುಮಾರ್, ಹಿರಿಯರಾದ ಇಬ್ರಾಹಿಂ ಸಾಹೇಬ್, ಜಾನ್ ಬ್ಯಾಪಿಸ್ಟ್, ಪಂಚಾಯಿತಿಯ ಬೇಬಿ ಕೃಷ್ಣ ಸಾಲ್ಯಾನ್, ರಾಜೇಶ್ ಪೂಜಾರಿ, ದಿನೇಶ್ ಅಮೀನ್, ಇಂದಿರಾ, ಪ್ರೇಮಾ ಆರ್. ಆಚಾರ್, ವಸಂತಿ ಪೂಜಾರ್ತಿ, ಸ್ಥಳೀಯರಾದ ವಿಘ್ನೇಶ್ವರ ಅಡಿಗ, ಮಾಜಿ ಅಧ್ಯಕ್ಷ ವಿಠಲ ಪೂಜಾರಿ, ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸುರೇಶ್ ಅಡಿಗ, ಡೇನಿಸ್ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT