ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ದರ್ಶನ ಅವಕಾಶಕ್ಕೆ ಸರ್ಕಾರಕ್ಕೆ ಮನವಿ’

ಸುಳ್ಯ: ಸ್ಕೌಟ್ ಗೈಡ್ಸ್ ಮೇಳ, ರೋವರ್‍ಸ್- ರೇಂಜರ್‍ಸ್ ಸಮಾವೇಶ
Last Updated 19 ಜನವರಿ 2017, 5:42 IST
ಅಕ್ಷರ ಗಾತ್ರ

ಸುಳ್ಯ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯದ ಆಶ್ರಯದಲ್ಲಿ ಸ್ಕೌಟ್, ಗೈಡ್ಸ್ ಮೇಳ, ಕಬ್ ಬುಲ್‌ಬುಲ್ ಉತ್ಸವ ಹಾಗೂ ರೋವರ್‍ಸ್ ರೇಂಜರ್‍ಸ್ ಸಮಾವೇಶ ಸುಳ್ಯದ ಕೆವಿಜಿ ಪುರ ಭವನದಲ್ಲಿ ಬುಧವಾರ ನಡೆಯಿತು.

ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಜಿ.ಮೋಹನ್ ಕಾರ್ಯ ಕ್ರಮ ಉದ್ಘಾಟಿಸಿದರು. ವರ್ಷದಿಂದ ವರ್ಷಕ್ಕೆ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಸುಳ್ಯ ಘಟಕದ ಮುತುವರ್ಜಿಯನ್ನು ತೋರಿಸುತ್ತದೆ. ರಾಜ್ಯ ಜಂಬೂರಿ ಈ ವರ್ಷ ಜಿಲ್ಲೆಯಲ್ಲಿ ನಡೆಯಲಿದ್ದು, 10 ಸಾವಿರ ಮಂದಿ ಭಾಗ ವಹಿಸಲಿದ್ದಾರೆ. ಇದೊಂದು ಅಪೂರ್ವ ಅನುಭವ.

ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಗೈಡ್ಸ್ ಸೇರುವುದರಿಂದ ಹತ್ತು ಹಲವು ಪ್ರಯೋಜನಗಳಿದ್ದು, ವೃತ್ತಿಪರ ಶಿಕ್ಷಣ ದಲ್ಲಿ ಮೀಸಲಾತಿ, ಉದ್ಯೋಗದಲ್ಲೂ ಮೀಸಲಾತಿ ನೀಡಲಾಗುತ್ತದೆ. ರಾಜ್ಯದಲ್ಲಿ ಈ ವರ್ಷ ಪ್ರವಾಸೋದ್ಯಮ ಇಲಾಖೆ ಯಿಂದ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಯೋಜಿ ಸಲಾಗಿದ್ದು, ಮುಂದಿನ ದಿನಗಳಲ್ಲಿ ಭಾರತ ದರ್ಶನ ಪ್ರವಾಸ ಆಯೋಜಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾ ವತಿ ಮಾಧವ, ನಿವೃತ್ತ ಅಧಿಕಾರಿ ರಾಮ ಕೃಷ್ಣ ಶೆಟ್ಟಿ, ಕೆನಡಾದ ಪ್ರಜೆ ಮೊಥಾ ಯಿಸ್, ಬಿಇಒ ಬಿ.ಎಸ್.ಕೆಂಪಲಿಂಗಪ್ಪ ಮಾತನಾಡಿ ಶುಭ ಹಾರೈಸಿದರು.

ಸಹಾಯಕ ಜಿಲ್ಲಾ ಆಯುಕ್ತ ಲಕ್ಷ್ಮೀಶ ರೈ, ಶಿಬಿರ ನಿರ್ದೇಶಕಿ ಎ.ಎಚ್. ಪ್ರೇಮ ಲತಾ, ಜಿಲ್ಲಾ ಸಂಘಟಕ ಭರತ್‌ರಾಜ್, ಸತೀಶ್ ಕೊಯಿಂಗಾಜೆ, ಕಮಲಾಕ್ಷಿ ಟೀಚರ್, ಹಸೈನಾರ್ ಗೋರಡ್ಕ ವೇದಿಕೆ ಯಲ್ಲಿದ್ದರು. ಸಂಸ್ಥೆಯ ಅಧ್ಯಕ್ಷ ಎಸ್. ಎಂ.ಬಾಬೂ ಸಾಹೇಬ್ ಸ್ವಾಗತಿಸಿ, ಕಾರ್ಯದರ್ಶಿ ಜಾಜ್ ಡಿ ಸೋಜ ವಂದಿ ಸಿದರು. ಜೀವನ್ ಕಾರ್ಯಕ್ರಮ ನಿರೂಪಿಸಿದರು.

ಪಥ ಸಂಚಲನ
ಸ್ಕೌಟ್, ಗೈಡ್ಸ್ ಮೇಳ, ಕಬ್ ಬುಲ್‌ಬುಲ್ ಉತ್ಸವ ಹಾಗೂ ರೋವರ್‍ಸ್ ರೇಂಜರ್‍ಸ್ ಸಮಾವೇಶದ ಅಂಗವಾಗಿ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಪಥಸಂಚಲನ ನಡೆಯಿತು.

ಕೆವಿಜಿ ಪುರಭವನದಿಂದ ಆರಂಭಗೊಂಡ ಮೆರವಣಿಗೆ ಬಸ್ ನಿಲ್ದಾಣದ ಮೂಲಕ ಗಾಂಧಿನಗರಕ್ಕೆ ತೆರಳಿ ರಥಬೀದಿಯಾಗಿ ಮರಳಿ ಕೆವಿಜಿ ಪುರಭವನದಲ್ಲಿ ಸಮಾಪನ ಗೊಂಡಿತು. ವಿವಿಧ ಶಾಲೆಗಳಿಂದ ಆಗಮಿಸಿದ ಸ್ಕೌಟ್ಸ್-ಗೈಡ್ಸ್, ಕಬ್ ಬುಲ್‌ಬುಲ್, ರೋವರ್‍ಸ್-ರೇಂಜರ್‍ಸ್ ಸ್ವಯಂಸೇವಕರು ಪಥಸಂಚಲನದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT