ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳುಗಾರಿಕೆ: ಡಿ.ಸಿ.ಗೆ ದೂರು

ಪೆರ್ನೆ, ಬಿಳಿಯೂರು ಪಂಚಾಯಿತಿ ವ್ಯಾಪ್ತಿ
Last Updated 19 ಜನವರಿ 2017, 5:43 IST
ಅಕ್ಷರ ಗಾತ್ರ

ಪುತ್ತೂರು: ಉಪ್ಪಿನಂಗಡಿ ಠಾಣಾ ವ್ಯಾಪ್ತಿ ಯಲ್ಲಿ ಬರುವ ಬಂಟ್ವಾಳ ತಾಲ್ಲೂಕಿನ ಪೆರ್ನೆ ಮತ್ತು ಬಿಳಿಯೂರು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೆರ್ನೆ, ಬಿಳಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಹಿತರಕ್ಷಣಾ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಗ್ರಾಮ ಹಿತರಕ್ಷಣಾ ಸಮಿತಿಯ ಸದಸ್ಯರಾದ ನಿವೃತ್ತ ಉಪ ತಹಶೀಲ್ದಾರ್ ಶ್ರೀಧರ ಗೌಡ ಮುಂಡಾಜೆ, ಮನೋಜ್ ರೈ ಮುಂಡೂವಿನಕೋಡಿ, ಗಣರಾಜ ಭಟ್ ಕೆದಿಲ, ಗ್ರಾಮ ಪಂಚಾಯಿತಿ ಸದ ಸ್ಯರಾದ ನವೀನ್ ಪದಬರಿ ಅವರು ಅಕ್ರಮ ಮರಳುಗಾರಿಕೆಯ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪೆರ್ನೆ  ಮತ್ತು ಬಿಳಿಯೂರು ಗ್ರಾಮ ದಲ್ಲಿ ಕಳೆದ ಅನೇಕ ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.

ಗ್ರಾಮ ಹಿತರಕ್ಷಣಾ ಸಮಿತಿಯ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿರುವ ಮೇರೆಗೆ ಪೊಲೀಸರು ಆ ಮರಳು ಸಾಗಣೆ ವಾಹನಗಳನ್ನು ವಶಪಡಿಸಿಕೊಂ ಡಿದ್ದಾರೆ. ಬಂಟ್ವಾಳ ತಹಶೀಲ್ದಾರರಿಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಅವರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ, ಮರಳು ತೆಗೆಯುವವರ ವಸತಿಯನ್ನು ತೆರವುಗೊಳಿಸಿ, ಮರಳು ತೆಗೆಯಲು ಬಳಸುತ್ತಿದ್ದ ದೋಣಿಯನ್ನು ವಶಪಡಿಸಿ ಕೊಳ್ಳುವುದಾಗಿ ತಿಳಿಸಿದ್ದರೂ, ವಶಪಡಿ ಸಿಕೊಳ್ಳದೆ ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ಆ ಬಳಿಕವೂ ಪೆರ್ನೆ ಮತ್ತು ಬಿಳಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡೆಂಚಡ್ಕ ಹಾಗೂ ದೇಂ ತಡ್ಕ ಎಂಬಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಲೇ ಇದೆ. ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ ಗ್ರಾಮ ಹಿತರಕ್ಷಣಾ ಸದಸ್ಯರ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಗೂ ಕೊಲೆಯತ್ನದಂತಹ ಕೃತ್ಯಗಳು ನಡೆದಿವೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ದೂರಿ ನಲ್ಲಿ ತಿಳಿಸಿರುವ ಅವರು ಅಕ್ರಮ ಮರಳು ಗಾರಿಕೆ ತಡೆಗೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT