ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಬಸ್‌ ನಿಲ್ದಾಣಗಳ ತೆರವು ಅಗತ್ಯ

ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪದಲ್ಲಿ ಮೇಯರ್ ಹರಿನಾಥ್
Last Updated 19 ಜನವರಿ 2017, 5:47 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಲು ಕಾರಣವಾಗಿರುವ ಅನ ಧಿಕೃತ ಬಸ್‌ ನಿಲ್ದಾಣಗಳು ಮತ್ತು ಅಡ್ಡಾ ದಿಡ್ಡಿ ವಾಹನ ನಿಲುಗಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕೆ.ಹರಿನಾಥ್ ಹೇಳಿದರು.

ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಪೊಲೀಸ್ ಸಮುದಾಯ ಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾ ಹದ ಸಮಾರೋಪ ಸಮಾರಂಭದ ಅಧ್ಯ ಕ್ಷತೆ ವಹಿಸಿ ಮಾತನಾಡಿದ ಅವರು, ‘ನಗ ರದ ಬೆಳವಣಿಗೆಗೆ ಪೂರಕವಾಗಿ ಹಲವು ರಸ್ತೆಗಳ ವಿಸ್ತರಣೆ ಮಾಡಲಾಗಿದೆ. ಆದರೆ, ವಿಸ್ತರಣೆಯಾದ ರಸ್ತೆಗಳಲ್ಲಿ ಅರ್ಧದಷ್ಟು ಜಾಗವೂ ವಾಹನ ಸಂ ಚಾರಕ್ಕೆ ದೊರೆಯುತ್ತಿಲ್ಲ. ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವವರೇ ರಸ್ತೆ ಗಳ ಜಾಗವನ್ನು ಆಕ್ರಮಣ ಮಾಡಿ ಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತ ಪಡಿಸಿದರು.

ನಗರದಲ್ಲಿ 40 ಅಡಿ ಅಗಲದ ರಸ್ತೆಗಳಲ್ಲಿ 20 ಅಡಿ ಅಗಲವನ್ನು ವಾಹನ ನಿಲುಗಡೆಗೆ ಬಳಕೆ ಮಾಡಲಾಗುತ್ತಿದೆ. ವಾಣಿಜ್ಯ ಕಟ್ಟಡಗಳಲ್ಲಿ ವಾಹನ ನಿಲುಗ ಡೆಗೆ ಮೀಸಲಿಟ್ಟ ಸ್ಥಳವನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಬಿಜೈ– ಕೆಎಸ್‌ಆರ್‌ಟಿಸಿಯಂತಹ ರಸ್ತೆಗ ಳಲ್ಲಿ ಹೋಗಲು ವಾಹನ ಚಾಲಕರು, ಪಾದಚಾರಿಗಳು ಹರಸಾಹಸ ಪಡಬೇ ಕಾದ ಪರಿಸ್ಥಿತಿ ಇದೆ. ರಸ್ತೆಗಳು ಇರು ವುದು ವಾಹನ ನಿಲುಗಡೆಗೆ ಮಾತ್ರವಲ್ಲ. ಅನಧಿಕೃತವಾಗಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು ಎಂದರು.

ಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಗುರುತಿಸಿದ ಬಸ್‌ ನಿಲುಗಡೆ ಸ್ಥಳಗಳಲ್ಲಿ ಬಹುತೇಕ ಬಸ್‌ಗಳು ನಿಲ್ಲು ತ್ತಿಲ್ಲ. ಎಲ್ಲೆಂದರಲ್ಲಿ ಬಸ್‌ ನಿಲ್ಲಿಸಿ ಪ್ರಯಾ ಣಿಕರನ್ನು ಹತ್ತಿಸಿಕೊಳ್ಳುವ ಪ್ರವೃತ್ತಿ ಚಾಲ ಕರಲ್ಲಿದೆ. ಇದರಿಂದ ಮಂಗಳೂರು ನಗರ ದಾದ್ಯಂತ ತೀವ್ರ ಸಮಸ್ಯೆಯಾಗುತ್ತಿದೆ. ಈ ರೀತಿ ಸಂಚಾರ ನಿಯಮಗಳನ್ನು ಉಲ್ಲಂ ಘಿಸುವವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಬಸ್‌ ನಿಲ್ದಾಣ ಸ್ಥಳಾಂತರ: ನಗರ ದೊಳಗಿನ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿ ಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂ ತರಿಸುವ ಪ್ರಕ್ರಿಯೆಗಳು ಆರಂಭವಾಗಿದೆ. ಅದೇ ರೀತಿಯಲ್ಲಿ ಬಸ್‌ ನಿಲ್ದಾಣಗಳನ್ನೂ ಸ್ಥಳಾಂತರ ಮಾಡುವ ಅಗತ್ಯವಿದೆ. ಉಡುಪಿ– ಮಂಗಳೂರು ನಡುವೆ ಸಂಚ ರಿಸುವ ಬಸ್‌ಗಳ ನಿಲ್ದಾಣವನ್ನು ಕೊಟ್ಟಾ ರಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿಯೇ ಸ್ಥಳ ಪರಿಶೀಲಿಸಿ ನಿರ್ಧಾರಕ್ಕೆ ಬರುವು ದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದರು.

ನಗರ ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಮಾತನಾಡಿ, ಅವಸರ ಮತ್ತು ಸ್ವೇಚ್ಛಾಚಾರದ ಮನೋಭಾವ ನೆಯೇ ಬಹುತೇಕ ಅಪಘಾತ ಪ್ರಕರಣ ಗಳಿಗೆ ಕಾರಣ. ಬಸ್‌ ಪ್ರಯಾಣಿಕರು ಹತ್ತು ಅಡಿಗಳಷ್ಟು ಮುಂದಕ್ಕೆ ನಡೆದು ಹೋಗುವುದಕ್ಕೂ ಹಿಂದೇಟು ಹಾಕುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಇವೆಲ್ಲವೂ ಸಂಚಾರ ನಿಯಮಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ. ಮಕ್ಕ ಳಲ್ಲಿ ಅರಿವು ಮೂಡಿಸುವ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಎಸ್‌ಪಿ ಭೂಷಣ್ ಜಿ. ಬೊರಸೆ, ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್‌.ಎಂ.ವರ್ಣೇಕರ್, ಮುಖ್ಯ ಟ್ರಾಫಿಕ್ ವಾರ್ಡನ್ ಜೋ ಗೋನ್ಸಾಲ್ವೇಸ್, ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲೀಕರ ಸಂಘಟದ ಅಧ್ಯಕ್ಷ ಅಜೀಜ್‌ ಪರ್ತಿಪಾಡಿ, ರಾಜ್ಯ ಬಸ್‌ ಮಾಲೀಕರ ಒಕ್ಕೂಟದ ಉಪಾಧ್ಯಕ್ಷ ಜಯರಾಮ ಶೇಖ ಉಪಸ್ಥಿತರಿದ್ದರು.

ರಸ್ತೆ ಸುರಕ್ಷತಾ ಸಪ್ತಾಹದ ಅಂಗ ವಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳಿಗಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು.

ಮಕ್ಕಳಿಗೆ ಪ್ರಶ್ನೆ, ಚಾಕಲೇಟ್
ಭಾಷಣ ಆರಂಭಿಸುವಾಗ ಸಭೆಯಲ್ಲಿದ್ದ ಬದ್ರಿಯಾ ಶಾಲೆಯ ಮಕ್ಕಳಿಗೆ ಸಂಚಾರ ನಿಯಮಗಳ ಉಲ್ಲಂಘನೆ ಕುರಿತು ಪ್ರಶ್ನೆಗಳನ್ನು ಕೇಳಿದ ಕಮಿಷನರ್ ಎಂ.ಚಂದ್ರಶೇಖರ್, ಸರಿಯಾದ ಉತ್ತರ ನೀಡಿದವರಿಗೆ ಬಹುಮಾನವಾಗಿ ಚಾಕಲೇಟ್ ನೀಡುವುದಾಗಿ ತಿಳಿಸಿದರು.

ಅವರ ಪ್ರಶ್ನೆಗಳಿಗೆ ಮಕ್ಕಳು ಅತ್ಯುತ್ಸಾಹದಿಂದ ಉತ್ತರ ನೀಡಲಾರಂಭಿಸಿದರು. ಕೆಲವು ಪ್ರಶ್ನೆಗಳನ್ನು ಕೇಳಿದ ಕಮಿಷನರ್‌, ಎಲ್ಲಾ ಮಕ್ಕಳಿಗೂ ತಲಾ ಎರಡು ಚಾಕಲೇಟ್‌ ವಿತರಣೆಗೆ ಸೂಚಿಸಿ ದರು. ಅವರ ಸೂಚನೆಯಂತೆ ಅಧಿಕಾರಿಗಳು ಎಲ್ಲಾ ಮಕ್ಕಳಿಗೆ ಚಾಕಲೇಟ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT