ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಮಟ್ಟದ ಯುವ ಸಪ್ತಾಹ

Last Updated 19 ಜನವರಿ 2017, 6:15 IST
ಅಕ್ಷರ ಗಾತ್ರ

ರಾಣೆಬೆನ್ನೂರು: ರಾಷ್ಟ್ರಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ,ಸಮಾಜ ಸುಧಾರಕ, ಆದರ್ಶ ಶಿಷ್ಯ..ಹೀಗೆ ಅನೇಕ ಸಾಧಕರ ವ್ಯಕ್ತಿತ್ವಗಳು ಸ್ವಾಮಿ ವಿವೇಕಾನಂದ ಅವರೊಬ್ಬರಲ್ಲಿಯೇ ಅಡಕವಾಗಿದ್ದವು ಎಂದು ಸ್ಥಳೀಯ ರಾಮಕೃಷ್ಣ ವಿವೇಕ ಆಶ್ರಮದ ಪ್ರಕಾಶಾನಂದ ಮಹಾರಾಜ್‌ ಹೇಳಿದರು.

ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಆಡಳಿತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮತ್ತು ಕರೂರಿನ ಜೈ ಮಾತೃಭೂಮಿ ಯುವ ಸಾಂಸ್ಕೃತಿಕ ಕ್ರೀಡಾ ಸಂಘದ ಆಶ್ರಯದಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ 154ನೇ ಜಯಂತಿ ಅಂಗವಾಗಿ ತಾಲ್ಲೂಕು ಮಟ್ಟದ ಯುವ ಸಪ್ತಾಹವನ್ನು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾರೀರಕ ಶಕ್ತಿ, ಬೌದ್ಧಿಕ ಶಕ್ತಿ, ನೈತಿಕಶಕ್ತಿ ಹಾಗೂ ಆಧ್ಯಾತ್ಮಿಕ ಶಕ್ತಿ ಇವೇ ನಾಲ್ಕು ಪ್ರಮುಖ ಅಂಶಗಳು ಪೂರ್ಣ ರೂಪದ ಶಕ್ತಿಶಾಲಿ ವ್ಯಕ್ತಿತ್ವದಲ್ಲಿ ಅಡಗಿವೆ. ಈ ನಾಲ್ಕು ಪ್ರಧಾನ ಅಂಶಗಳು ಸಮರಸವಾಗಿ ಸೇರಿಕೊಂಡು ಅಂತಹ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದರು.

ಯುವಕರು ಪರಿಪೂರ್ಣ ವ್ಯಕ್ತಿತ್ವ ವನ್ನು ಬೆಳೆಸಿಕೊಳ್ಳುವ ದೃಢ ಸಂಕಲ್ಪ ಮಾಡಬೇಕು. ಶರೀರದ ಸರ್ವತೋಮುಖ ಬೆಳವಣಿಗೆಗೆ ದೈಹಿಕ ಶಕ್ತಿ ವಿಕಾಸಕ್ಕೆ ಯುವ ಕಾಂಗ್ರೆಸ್‌ ಮುಖಂಡ ಪ್ರಕಾಶ ಕೋಳಿವಾಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ವೃತ್ತಾಂತ ಅಧ್ಯಯನ ಮಾಡಿದರೆ ಭಾರತದ ಚರಿತ್ರೆ ತಿಳಿಯುತ್ತದೆ. ಯುವಕರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಅವರ ಸಂದೇಶ ಪಾಲಿಸಿದಂತಾಗುತ್ತದೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಕವಿವಿ ಸಿಂಡಿಕೇಟ್‌ ಸದಸ್ಯ ಬಸನಗೌಡ ಮರದ, ಪ್ರಾಚಾರ್ಯ ಎಲ್.ವಿ.ಸಂಗಳದ ಮಾತನಾಡಿದರು.

ಪ್ರೊ.ಆರ್‌.ಎಫ್‌. ಅಯ್ಯನಗೌಡ್ರ, ಪ್ರೊ. ರವಿ, ಇರ್ಷಾದ್ ಬಳ್ಳಾರಿ, ಡಾ.ಕುರ್ಲಿ, ರಮೇಶ ರಾಠೋಡ, ತಾವರಗೊಂದಿ ಮತ್ತಿತರರು ಇದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೊ.ಅರುಣ ಚಂದನ್‌ ಸ್ವಾಗತಿಸಿದರು. ಡಾ.ಸಿದ್ದಲಿಂಗಮ್ಮ ಮತ್ತು ವಿ.ಎಫ್‌.ಕುಂಬಾರ ಕಾರ್ಯಕ್ರಮ ನಿರೂಪಿಸಿದರು.        

ಬೆಳಿಗ್ಗೆ ಮಿನಿ ವಿಧಾನಸೌಧದಿಂದ ಬಳ್ಳಾರಿ ಕಲ್ಯಾಣಮಂಟಪದ ವರೆಗೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಯುವ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT