ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳೊಳಗೆ ಪರಿಹಾರದ ಭರವಸೆ

ಎಂಜಿಎಂ ಆಸ್ಪತ್ರೆ: ಆರೋಗ್ಯ ರಕ್ಷಾ ಸಮಿತಿ ಸಭೆ
Last Updated 19 ಜನವರಿ 2017, 6:18 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಮುಂದಿನ ಆರು ತಿಂಗ ಳೊಳಗೆ ಹಂತಹಂತವಾಗಿ ಪರಿಹರಿಸ ಲಾಗುವುದು ಎಂದು ನೋಡೆಲ್‌ ಅಧಿ ಕಾರಿ ಡಾ.ಅಶೋಕ್‌ಬಾಬು ತಿಳಿಸಿದರು.

ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ನಡೆದ ಆರೋಗ್ಯ ರಕ್ಷಾಸಮಿತಿ ಸಭೆಯಲ್ಲಿ ಶಾಸಕರ ಪ್ರಶ್ನೆಗೆ ಅವರು ಉತ್ತರಿಸಿದರು.

ಶಾಸಕ ಬಿ.ಬಿ. ನಿಂಗಯ್ಯ ಮಾತ ನಾಡಿ, ಆಸ್ಪತ್ರೆಯಲ್ಲಿ ಹಿಂದಿನ ಆಡಳಿ ತಾಧಿಕಾರಿ ಡಾ. ವಿನಂತಿ ಕಾರ್ಯ ನಿರ್ವ ಹಿಸುತ್ತಿದ್ದ ವೇಳೆ ಎಲ್ಲಾ ಸಮಸ್ಯೆಗಳು ಬಗೆಹರಿದು ಒಂದು ಹಂತವನ್ನು ತಲು ಪಿತ್ತು. ಆದರೆ ಇದೀಗ ಮತ್ತೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರಿಗೆ ಉತ್ತರ ಹೇಳದ ಸ್ಥಿತಿ ಉಂಟಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನರ್ಸ್‌ಗಳು ರೋಗಿಗಳನ್ನು ಹಣಕ್ಕಾಗಿ ಪೀಡಿಸುತ್ತಾರೆ ಎಂಬುದು ನಾಚಿಕೆಗೇಡಿನ ವಿಚಾರವಾ ಗಿದ್ದು, ಬಡವರ ರಕ್ತ ಹೀರುವ ಕೆಲಸ ವನ್ನು ಬಿಡಬೇಕು. ಇನ್ನೊಮ್ಮೆ ದೂರು ಗಳು ಬಂದರೆ ಕ್ರಮ ಕೈಗೊಳ್ಳಲಾಗು ವುದು ಎಂದರು.

ಆರೋಗ್ಯ ರಕ್ಷಾಸಮಿತಿ ಸದಸ್ಯ ಪುಟ್ಟಸ್ವಾಮಿ ಮಾತನಾಡಿ, ಜವಾಬ್ದಾರಿ ಯುತ ಆಡಳಿತಾಧಿಕಾರಿಯ ಅವಶ್ಯಕತೆ ಇದ್ದು, ಆಡಳಿತಾಧಿಕಾರವನ್ನು ಸೇವಾ ಹಿರಿತನವನ್ನು ಗಣನೆಗೆ ತೆಗೆದುಕೊ ಳ್ಳದೇ, ಆಡಳಿತದ ಸಾಮರ್ಥ್ಯವಿರುವವ ರಿಗೆ ನೀಡಿದರೆ ಸಮಸ್ಯೆ ಪರಿಹಾರ ಸುಲಭವಾಗುತ್ತದೆ ಎಂದರು.

ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಜಗದೀಶ್‌ ಮಾತನಾಡಿ, ಇಲ್ಲಿನ ಆಸ್ಪತ್ರೆ ಹಾಗೂ ಪೊಲೀಸ್‌ ಇಲಾಖೆ ನಡುವೆ ಸಮನ್ವಯ ಕೊರತೆಯಿದ್ದು, ಅತ್ಯಾ ಚಾರ ಅಥವಾ ಅಸಹಜ ದೂರುಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಂದರೆ, ಮರಣೋತ್ತರ ಪರೀಕ್ಷೆ ನಡೆಸಲು ಹರಸಾಹಸ ಪಡಬೇಕಾಗುತ್ತದೆ. ಮಹಿಳೆ ಹಾಗೂ ಪುರುಷ ಅಪರಾಧಿಗಳ ಕೆಲವು ಪರೀಕ್ಷೆ ಮಾಡಿಸಲು ಇನ್ನಿಲ್ಲದ ಪಾಡು ಪಡಬೇಕಾಗುತ್ತದೆ.

ಮರಣೋತ್ತರ ಪರೀಕ್ಷೆ ಹಾಗೂ ಆರೋಗ್ಯ ತಪಾಸ ಣೆಯನ್ನು ವೈದ್ಯರು ಮಾಡಲು ನಿರಾಕರಿ ಸುತ್ತಾರೆ ಎಂದು ಆರೋಪಿಸಿದರು. ಪೊಲೀಸ್‌ ಕೇಸುಗಳನ್ನು ಆಸ್ಪತ್ರೆಯ ಲ್ಲಿರುವ ವೈದ್ಯಾಧಿಕಾರಿಗಳು ಕಡ್ಡಾಯ ವಾಗಿ ನಿರ್ವಹಿಸಲೇ ಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು. ಆಸ್ಪತ್ರೆಗೆ ಪೊಲೀಸ್‌ ಕಾವಲು ಹಾಕಲು ಸಭೆ ಸೂಚಿಸಿತು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್‌, ತಾಲ್ಲೂಕಿನ ಹಿರಿಯ ವೈದ್ಯರಾದ ಡಾ.ಪದ್ಮನಾಭ, ಡಾ.ರಾಮ ಚರಣ್‌ ಅಡ್ಯಂತಾಯ, ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಂದ್ರೇಶ್‌, ಡಾ. ಯೋಗೇಶ್‌,  ಎಂಜಿಎಂ ಟ್ರಸ್ಟ್‌ನ ಕೆ.ಎಚ್‌. ವೆಂಕಟೇಶ್‌ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT