ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಪ್ಪಟ್ಟು ತೆರಿಗೆ ವಸೂಲಿ: ವಿರೋಧ

Last Updated 19 ಜನವರಿ 2017, 6:32 IST
ಅಕ್ಷರ ಗಾತ್ರ

ಬನಹಟ್ಟಿ: ರಬಕವಿ- ಬನಹಟ್ಟಿ ನಗರ ಸಭೆಗೆ ಸಂಬಂಧಿಸಿದ ಮಾರುಕಟ್ಟೆ ಹಾಗೂ ಬೀದಿ ಬದಿಯ ಮಾರಾಟಗಾ ರರಿಗೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಎರಡರಷ್ಟು ವಸೂಲಿ ಮಾಡುತ್ತಿದ್ದ ಗುತ್ತಿಗೆದಾರನ ವಿರುದ್ಧ ಅವಳಿ  ನಗರದ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಬುಧವಾರ ನಗರಸಭೆಗೆ ಬಂದ ಹಲವಾರು ಸಂಘಟನೆಗಳ ಪದಾಧಿಕಾರಿ ಗಳು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ಕಾಯಿಪಲ್ಲೆ ಮಾರಾಟ ಗಾರರಿಂದ ಭೂ ತೆರಿಗೆ ವಸೂಲಿಯನ್ನು ಅಧಿಕೃತ ದರ ಒಂದು ಬುಟ್ಟಿಗೆ ₹ 5ರ ಬದಲಾಗಿ ₹ 10 ವಸೂಲಿ ಮಾಡುತ್ತಿ ದ್ದಾರೆ. ಕೆಲವು ಡಬ್ಬಾ ಅಂಗಡಿಗಳಿಂದ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ವಸೂಲಿ ಮಾಡುತ್ತಿದ್ದಾರೆ ಮತ್ತು  ಸರ್ಕಾರದ ನಿಯಮಗಳನ್ನು ಉಲ್ಲಂಘಿಸು ತ್ತಿದ್ದಾರೆ ಎಂದು ದಾಖಲೆಗಳ ಮೂಲಕ ದೃಢಪಡಿಸಿದರು.

ಈ ಸಂದರ್ಭದಲ್ಲಿ ಪೌರಾಯುಕ್ತ ಆರ್.ಎಂ. ಕೊಡಗೆ ಗುತ್ತಿಗೆದಾರನನ್ನು ಕರೆಸಿ ತಾಕೀತು ಮಾಡುವದರ ಜೊತೆಗೆ ಒಂದು ವಾರದ ಗಡುವು ನೀಡಿದ್ದಾರೆ. ಎಲ್ಲವನ್ನೂ ಸರಿಪಡಿಸಿ ₹ 5  ರಶೀದಿ ಯನ್ನು ತಯಾರಿಸಿ ನಗರಸಭೆಯಿಂದ ಸೀಲು ಹಾಕಿ ಪಾವತಿಸಬೇಕೆಂದು ತಿಳಿಸಿ ದ್ದಾರೆ. ಅಲ್ಲದೆ ಮಾರಾಟಗಾರರು ಹೆಚ್ಚಿಗೆ ಹಣ  ನೀಡಬಾರದು ಎಂದು ತಿಳಿಸಿದರು. ತೆರಿಗೆ ವಸೂಲಿದಾರರು ದಬ್ಬಾಳಿಕೆ ಮಾಡಿದರೆ ನಗರಸಭೆ ಕಚೇರಿಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ನಗರಸಭೆಯಿಂದ ಪಡೆದ ಅಧಿಕೃತ ಪಾವತಿಯಿಂದ ದಿನದ 24 ಗಂಟೆಯ ವರೆಗೆ ಎಲ್ಲಿ ಬೇಕಾದರೂ ವ್ಯಾಪಾರ ಮಾಡಲು ಅನುಮತಿ ಇರುತ್ತದೆ ಎಂದು ತಿಳಿಸಿದರು. ನಗರ ಯೋಜನಾ ಪ್ರಾಧಿಕಾ ರದ ಮಾಜಿ ಅಧ್ಯಕ್ಷ ಯೂನಿಸ್ ಚೌಗಲಾ, ಧರೆಪ್ಪ ಉಳ್ಳಾಗಡ್ಡಿ, ರಾಮಣ್ಣ ಹುಲ ಕುಂದರ ಮಧ್ಯಸ್ಥಿಕೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘ, ಛತ್ರಪತಿ ಶಿವಾಜಿ ಯುವಕ ಸಂಘ, ಜನ ಜಾಗೃತಿ ವೇದಿಕೆ, ಭಗತ್‌ ಸಿಂಗ್ ಯುವಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ನಂದು ಗಾಯಕವಾಡ, ಹೊನ್ನಪ್ಪ ಬಿರಡಿ, ಸಂಜಯ ತೆಗ್ಗಿ, ಮಾಯಪ್ಪ ತುರಾದಿ, ಶಂಕರ ಅಂಗಡಿ, ಮಾರುತಿ ಗಾಡಿವಡ್ಡರ, ಪರಪ್ಪ ಪೂಜಾರಿ, ಸಿದ್ದು ಮುಶೆಪ್ಪಗೋಳ, ನಗರ ಸಭೆಯ ಅಧಿಕಾರಿಗಳಾದ ಎಸ್‌.ಎಸ್‌. ಹೇರಲಗಿ, ಶಶಿಧರ ಕಲಾದಗಿ ಮತ್ತು ಎಸ್‌.ಬಿ.ತೋಡಕರ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಮಿತಿ ಸಭೆ ನಾಳೆ
ಜಮಖಂಡಿ:
ರಾಜ್ಯ ಬ್ರಾಡ್‌ಗೇಜ್‌ ರೈಲ್ವೆ ಮಾರ್ಗ ಹೋರಾಟ ಸಮಿತಿಯ ಜಮಖಂಡಿ, ಮುಧೋಳ ತಾಲ್ಲೂಕು ಘಟಕಗಳ, ತೇರದಾಳ ಮತ್ತು ಲೋಕಾ ಪುರ ವಲಯ ಘಟಕಗಳ ಪದಾಧಿಕಾರಿ ಗಳ, ಪ್ರಗತಿಪರ ಚಿಂತಕರ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯನ್ನು ಇದೇ 20 ರಂದು ಮಧ್ಯಾಹ್ನ 12.30 ಕ್ಕೆ ನಗರದ ರಮಾ ನಿವಾಸದಲ್ಲಿ ಕರೆಯಲಾಗಿದೆ.

ಕುಡಚಿ–ಬಾಗಲಕೋಟೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಜಮೀನು ಸ್ವಾಧೀನ ಪಡಿಸುವ ಕಾರ್ಯ ನಡೆಯದ್ದರಿಂದ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಕುರಿತು ಚರ್ಚಿಸಿ ಮುಂದಿನ ಹೋರಾಟ ರೂಪಿಸಲು ಈ ಸಭೆಯನ್ನು ಕರೆಯಲಾಗಿದೆ ಎಂದು ರಾಜ್ಯ ಬ್ರಾಡ್‌ಗೇಜ್‌ ರೈಲ್ವೆ ಮಾರ್ಗ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ  ಕುತುಬುದ್ದಿನ್‌ ಖಾಜಿ, ಕಾರ್ಯದರ್ಶಿ ರಾಜು ಮೇಲಿನಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT