ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ಕಟ್ಟಡ ತೆರವು ಕಾರ್ಯಾಚರಣೆ?

ಹಳೆಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ನೂತನ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣಕ್ಕೆ ಕಾರ್ಯ ಯೋಜನೆ
Last Updated 19 ಜನವರಿ 2017, 6:39 IST
ಅಕ್ಷರ ಗಾತ್ರ

ಬಾದಾಮಿ: ಪಟ್ಟಣದ ಹೃದಯ ಭಾಗ ದಲ್ಲಿರುವ ಪಾರಂಪರಿಕ ಹಳೆಯ ತಹ ಶೀಲ್ದಾರ್‌ ಕಾರ್ಯಾಲಯ, ಪೊಲೀಸ್‌ ಇಲಾಖೆ ಕಟ್ಟಡವು ಇನ್ನೇನು ಕೆಲವು ತಿಂಗಳಲ್ಲಿ ಕಟ್ಟಡವನ್ನು ತೆಗೆಯುವ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದಿದೆ.

ಬ್ರಿಟಿಷರ ಕಾಲದ 1904ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಇಲ್ಲಿ ಮೊದಲು ತಾಲ್ಲೂಕು ದಂಡಾಧಿಕಾರಿ ಮತ್ತು ಪೊಲೀಸ್‌ ಇಲಾಖೆ, ಖಜಾನೆ ಮತ್ತು ಜೈಲು ಕಾರ್ಯಾಲಯದ ಸಿಬ್ಬಂದಿ ಕಾರ್ಯವನ್ನು ನಿರ್ವಹಿಸುತ್ತಿದ್ದರು.

ಸ್ಥಳೀಯ ಬೆಟ್ಟದ ಗಟ್ಟಿಯಾದ ಶಿಲೆ, ಗಾರೆ ಮತ್ತು ಮೇಲ್ಛಾವಣಿ ಕಟ್ಟಿಗೆ ಮತ್ತು ಕೆಂಪು ಹೆಂಚನ್ನು ಬಳಸಿ ಗಾಳಿ ಬೆಳಕು ಬರುವಂತೆ ಗಟ್ಟಿಯಾದ ಬಾಗಿಲು, ಕಿಟಕಿಯನ್ನು  ಭದ್ರವಾಗಿ ನಿರ್ಮಿಸಿದ್ದರು.

ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಮತ್ತೊಂದು ಪಾರಂಪರಿಕ ಹಳೆ ಕಟ್ಟಡ ಮ್ಯುಜಿಯಂ ರಸ್ತೆಯ ಖಜಾನೆ, ತಹ ಶೀಲ್ದಾರ್, ಅಂಚೆ ಇಲಾಖೆಯ ಕಾರ್ಯಾ ಲಯ ಈಗ ಪ್ರಾಥಮಿಕ ಶಾಲೆಯ ತಗಡಿನ ಶೆಡ್‌ ಕಟ್ಟಡವಾಗಿದೆ. ಹಳೆ ಸರ್ಕಾರಿ ಆಸ್ಪತ್ರೆ, ತಾಲ್ಲೂಕು ಪಂಚಾಯ್ತಿ ಕಾರ್ಯಾಲಯಗಳ ಕಟ್ಟಡಗಳು ನೆಲಸಮ ವಾಗಿ ಸಿಮೆಂಟ್‌ ಕಟ್ಟಡಗಳಾಗಿ ಪರಿ ವರ್ತನೆಯಾಗಿವೆ. ಈಗ ಉಳಿದಿರೋ ಪಾರಂಪರಿಕ ಕಟ್ಟಡ ಇದೊಂದೇ ಎಂದು ಹೇಳಬಹುದು.

ರಾಮದುರ್ಗ ರಸ್ತೆಯಲ್ಲಿ ನೂತನ ಮಿನಿ ವಿಧಾನ ಸೌಧ ಆದ ಮೇಲೆ ಹಳೆಯ ಕಟ್ಟಡದಲ್ಲಿ ತಾಲ್ಲೂಕು ಪಂಚಾಯ್ತಿ ಮತ್ತು ನೆಮ್ಮದಿ ಕೇಂದ್ರ ಸಿಬ್ಬಂದಿ ಮತ್ತು ಜೈಲು ಸಿಬ್ಬಂದಿ ಮಾತ್ರ ಇತ್ತು. ಈಗ ಜೈಲು ಕಾರ್ಯಾಲಯವನ್ನು ತಾತ್ಕಾಲಿಕವಾಗಿ ಬಾಗಲಕೋಟೆಗೆ ವರ್ಗಾಯಿಸಲಾಗಿದೆ .

ಕೇಂದ್ರ ಸರ್ಕಾರ ಐತಿಹಾಸಿಕ ಬಾದಾಮಿ ಪಟ್ಟಣಕ್ಕೆ ಪಾರಂಪರಿಕ (ಹೃದಯ)  ಯೋಜನೆಯಲ್ಲಿ ಪ್ರಾಚೀನ ಪರಂಪರೆಯನ್ನು ಉಳಿಸಲು ಅನುದಾನ ಬಿಡುಗಡೆ ಮಾಡಿದೆ. ಆದರೆ ಈ ಪಾರಂಪರಿಕ ಕಟ್ಟಡವು ಅಭಿವೃದ್ಧಿ ನೆಪದಲ್ಲಿ ಭವಿಷ್ಯದ  ಕಾಲಗರ್ಭದಲ್ಲಿ ಅಡಗಿ ಹೋಗುತ್ತದೆ.

ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮಿನಿ ವಿಧಾನ ಸೌಧವನ್ನು ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಿ ಈಗಿರುವ ಮಿನಿ ವಿಧಾನ ಸೌಧದ ಕಟ್ಟಡವನ್ನು ಪದವಿ ಕಾಲೇಜಿಗೆ ವರ್ಗಾಯಿಸುವುದಾಗಿ ಹೇಳಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸಿದರೆ ಕೆಲವರು ಸೈ ಎನ್ನುತ್ತಿರುವರು.

ಆದರೆ ಭದ್ರವಾಗಿರುವ ಪಾರಂಪರಿಕ ಕಚೇರಿ ಕಟ್ಟಡ ಇನ್ನೇನು ಕೆಲವು ದಿನಗಳಲ್ಲಿ ಈ ಜಾಗದಿಂದ ಮಾಯ ವಾಗಲಿದೆ. ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದಿದೆ.  

ಈಗಿರುವ ಮಿನಿ ವಿಧಾನಸೌಧ ಚಿಕ್ಕ ದಾಗಿದೆ. ಕೆಲವು ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯವನ್ನು ನಿರ್ವಹಿ ಸುತ್ತವೆ. ಈ ಕಟ್ಟಡವನ್ನು ಸರ್ಕಾರಿ ಪದವಿ ಕಾಲೇಜಿಗೆ ಕೊಡಲಾಗುವುದು. ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಬರು ವಂತೆ ಹೊಸ ಮಿನಿ  ವಿಧಾನಸೌಧ ಕಟ್ಟಡ ವನ್ನು ನಿರ್ಮಿಸಲಾಗುವುದು ಎಂದು ಶಾಸಕ ಬಿ.ಬಿ.ಚಿಮ್ಮನಕಟ್ಟಿ ಹೇಳಿದರು.

ಪಾರಂಪರಿಕ ಕಟ್ಟಡಗಳ ನೆನಪು ಗಳನ್ನು ಜನಮಾನಸದಲ್ಲಿ ಚಿರಸ್ಥಾಯಿ ಗೊಳಿಸುವ ನಿಟ್ಟಿನಲ್ಲಿ ಹಳೆಯ ತಹ ಶೀಲ್ದಾರ್‌ ಕಚೇರಿಯ ಕಟ್ಟಡದ ಕಲ್ಲುಗಳನ್ನು ಪುನಃ ಬಳಕೆ ಮಾಡಿ ಕೊಂಡು ಚಾಲುಕ್ಯ ವಾಸ್ತುಶಿಲ್ಪ ಮಾದರಿ ಯಲ್ಲಿ ವಿನ್ಯಾಸಗೊಳಿಸಿ ಕಟ್ಟಡ ನಿರ್ಮಿಸ ಬೇಕು ಎಂದು ಸಾಮಾಜಿಕ      ಕಾರ್ಯಕರ್ತ ಇಷ್ಟಲಿಂಗ ಶಿರಸಿ ಹೇಳಿದರು.
–ಎಸ್‌.ಎಂ. ಹಿರೇಮಠ

*
ಹಳೆಯ ಕಟ್ಟಡಗಳ ಕಲ್ಲುಗಳನ್ನು ಬಳಸಿಕೊಂಡು ಹೊಸ ಕಟ್ಟಡವನ್ನು ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಿದರೆ ಐತಿಹಾಸಿಕ ಊರಿಗೆ ಇನ್ನಷ್ಟು ಸೊಬಗು ಬರುತ್ತದೆ.
–ಇಷ್ಟಲಿಂಗ ಶಿರಸಿ,
ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT