ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರು: ಪ್ರಾಥಮಿಕ ಶಾಲೆಯಲ್ಲಿ 334 ಹುದ್ದೆ ಖಾಲಿ

Last Updated 19 ಜನವರಿ 2017, 6:53 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ 334 ಹಾಗೂ ಪ್ರೌಢ ಶಾಲೆ ಯಲ್ಲಿ 59 ಮಂಜೂರಾದ ಹುದ್ದೆಗಳು ಖಾಲಿ ಇವೆ. ಹಲವು ಅತಿಥಿ ಶಿಕ್ಷಕರನ್ನು ಅಗತ್ಯವಿರುವ ಕಡೆಗಳಲ್ಲಿ ನೇಮಿಸಲಾ ಗಿದೆ. ಹಿಂದಿನ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ತಾಲ್ಲೂಕು ದ್ವಿತಿಯ ಸ್ಥಾನವನ್ನು ಗಳಿಸಿದೆ ಎಂದು ಬಿಇಓ ಬಿ. ಮೌನೇಶ್ ತಿಳಿಸಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ತಾಲ್ಲೂಕು ನೋಡಲ್ ಅಧಿಕಾರಿ ಶ್ರೀನಿ ವಾಸ್ ಅವರ ನಡೆಸಿದ ವಿವಿಧ ಇಲಾಖೆ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ವಿವರಿಸಿದರು.

35ಸಾವಿರ ವಿದ್ಯಾರ್ಥಿಗಳಿಗೆ ಬಿಸಿಯೂಟ: ತಾಲ್ಲೂಕಿನಲ್ಲಿ ಸರ್ಕಾರಿ ಹಾಗೂ ಅನು ದಾನಿತ ಶಾಲೆಗಳ ಒಟ್ಟು 35 ಸಾವಿರ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ಪೂರೈಸಲಾಗುತ್ತಿದೆ. ಇದರಲ್ಲಿ ಶೇ 50 ರಷ್ಟು ಮಕ್ಕಳಿಗೆ ಇಸ್ಕಾನ್ ಸಂಸ್ಥೆ ಬಿಸಿ ಊಟ ಪೂರೈಸುತ್ತಿದೆ. 78 ಶಾಲೆ ಬಿಟ್ಟ ಮಕ್ಕಳು ಪತ್ತೆಯಾಗಿದ್ದು, ಅವರನ್ನು ತೋರಣಗಲ್ಲು ಹಾಗೂ ಯಶವಂತ ನಗರದಲ್ಲಿನ ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ ಎಂದರು. 84 ಹೊಸ ಕೊಠಡಿಗಳ ದುರಸ್ತಿ, 112 ಹೊಸ ಕೊಠಡಿ ಹಾಗೂ ಸುಮಾರು 60 ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ತಾಲ್ಲೂಕಿನಲ್ಲಿ ವೈದ್ಯರ ಕೊರತೆ: ಆರೋಗ್ಯ ಇಲಾಖೆಯ ಪ್ರಗತಿ ಕುರಿತು ವಿವರಿಸಿದ ಡಾ.ಚಂದ್ರಪ್ಪ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ವೈದ್ಯರು ಹುದ್ದೆಗಳು ಮಂಜೂರಾಗಿದ್ದು, 6 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ನಾಲ್ಕು ವೈದ್ಯರ ಹುದ್ದೆಗಳು ಖಾಲಿ ಇವೆ. ತಾಲ್ಲೂಕಿನ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ವೈದ್ಯರು ಸೇರಿ ಒಟ್ಟು 6 ವೈದ್ಯರು ಕರ್ತವ್ಯ ನಿರ್ವಹಿಸು ತ್ತಿದ್ದಾರೆ ಎಂದರು.

ನೋಡಲ್ ಅಧಿಕಾರಿಗಳು ತಾಲ್ಲೂಕಿ ನಲ್ಲಿ ತಾಯಿಯ ಮರಣ ಪ್ರಮಾಣ ಒಂದು ಲಕ್ಷಕ್ಕೆ 425 ಹಾಗೂ ಶಿಶು ಮರಣ ಒಂದು ಸಾವಿರಕ್ಕೆ 3.1 ಇದ್ದು, ಅವುಗಳ ತಡೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿಚಾರಿಸಿದಾಗ ಪ್ರತಿಕ್ರಿ ಯಿಸಿದ ಡಾ.ಚಂದ್ರಪ್ಪ, ಹಿಂದಿನ ವರ್ಷ 2416 ಹೆರಿಗೆಯಾಗಿದ್ದು, ಅವರಲ್ಲಿ ಮೂವರು ಮಹಿಳೆಯರು ಮೃತಪಟ್ಟಿ ದ್ದಾರೆ. ಈ ಕುರಿತಂತೆ ಜಾಗೃತಿ ಮೂಡಿ ಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗು ತ್ತಿದೆ. ತಾಲ್ಲೂಕಿಗೆ 4–5 ಅಂಬುಲೆನ್ಸ್‌ಗಳು ಅಗತ್ಯವಿದ್ದು, ಸದ್ಯ 2 ಇವೆ ಎಂದರು.

ತಾಲ್ಲೂಕಿನಲ್ಲಿ 82 ಶುದ್ಧ ಕುಡಿಯುವ ನೀರಿನ ಘಟಕಗಳು: ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ಆರ್. ಪ್ರಭು ಅವರು ಮಾತನಾಡಿ, ತಾಲ್ಲೂಕಿ ನಲ್ಲಿ ಒಟ್ಟು 82 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ ಇಲಾಖೆ 52 ಘಟಕಗಳು ಆರಂಭವಾ ಗಿವೆ. 30 ಲ್ಯಾಂಡ್ ಆರ್ಮಿಯವರು ನಡೆಸುತ್ತಿದ್ದಾರೆ. ಗಣಿ ಕಂಪೆನಿಗಳವರ 8 ಘಟಕಗಳಿವೆ ಎಂದರು.

2500 ಶೌಚಾಲಯಗಳ ನಿರ್ಮಾಣ ಮುಕ್ತಾಯ: ಬಯಲು ಶೌಚ ಮುಕ್ತ ಗ್ರಾಮಗಳ ಪ್ರಗತಿ ಕುರಿತು ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯ್ತಿ ಇಓ ಜೆ.ಎಂ. ಅನ್ನದಾನಸ್ವಾಮಿ, 6,500 ಶೌಚಾಲಯ ಗಳ ನಿರ್ಮಾಣದ ಗುರಿಯನ್ನು ನೀಡ ಲಾಗಿತ್ತು. ಅವುಗಳಲ್ಲಿ ಈವರೆಗೆ 2500 ಮುಕ್ತಾಯವಾಗಿದ್ದು, ಒಂದು ಸಾವಿರ ಶೌಚಾಲಯಗಳು ಇನ್ನೊಂದು ತಿಂಗಳಲ್ಲಿ ಮುಕ್ತಾಯವಾಗಲಿವೆ. ನಿಗದಿತ ಗುರಿ ತಲು ಪಲು ಕ್ರಮಕೈಗೊಳ್ಳಲಾಗಿದೆ ಎಂದರು.

231 ಅಪೌಷ್ಟಿಕ ಮಕ್ಕಳು: ಶಿಶು ಅಭಿ ವೃದ್ಧಿ ಇಲಾಖೆ ಅಧಿಕಾರಿ ಮಧುಸೂಧನ್ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 40,515 ಮಕ್ಕಳು ಅಂಗನವಾಡಿಗಳಲ್ಲಿ ದಾಖಲಾಗಿವೆ. 231 ಮಕ್ಕಳಲ್ಲಿ ಅಪೌಷ್ಟಿ ಕತೆ ಇತ್ತು. ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡುವ ಮೂಲಕ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

16 ದೌರ್ಜನ್ಯ ಪ್ರಕರಣ: ತಾಲ್ಲೂಕಿನಲ್ಲಿ ದಾಖಲಾದ ಪ.ಜಾತಿ/ಪ.ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ವಿವರಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್, ತಾಲ್ಲೂಕಿನಲ್ಲಿ ಒಟ್ಟು 16 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಅವು ಗಳಲ್ಲಿ 7 ಜನರಿಗೆ ಪರಿಹಾರ ಇಲಾಖೆ ಯಿಂದ ನೀಡಲಾಗಿದೆ.

ಉಳಿದವು ವಿಚಾರಣೆ ಹಂತದಲ್ಲಿವೆ ಎಂದರಲ್ಲದೆ ಇಲಾಖೆಯಿಂದ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿತರಣೆಯಾದ ವಿದ್ಯಾರ್ಥಿ ವೇತನ, ಅಂತರ್ಜಾತಿ ಮದುವೆಯಾದ 6 ಜೋಡಿ ಹಾಗೂ ಸಾಮೂಹಿಕ ವಿವಾಹ ಕಾರ್ಯ ಕ್ರಮಗಳಲ್ಲಿ ಮದುವೆಯಾದ 10 ಜೋಡಿ ಗಳಿಗೆ ಇಲಾಖೆಯಿಂದ ನೀಡಲಾದ ಪ್ರೋತ್ಸಾಹ ಧನ ಕುರಿತು ವಿವರಿಸಿದರು.

ಪ್ರಗತಿ ಪರಿಶೀಲನೆ ನಂತರ ಮಾತ ನಾಡಿದ ನೋಡಲ್ ಅಧಿಕಾರಿ ಶ್ರೀನಿ ವಾಸ್, ನಿಗದಿತ ಗುರಿ ಸಾಧನೆಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಯು. ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT