ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲರಿಗೆ ಲೇಸು ಬಯಸಿದ ಎರ್ರಿತಾತ

ಚೆಳ್ಳಗುರ್ಕಿಯಲ್ಲಿ ಯಾತ್ರಿನಿವಾಸ, ದಾಸೋಹ ಭವನ ಉದ್ಘಾಟನೆ: ಕೆ.ಸಿ. ಕೊಂಡಯ್ಯ ಅಭಿಮತ
Last Updated 19 ಜನವರಿ 2017, 6:55 IST
ಅಕ್ಷರ ಗಾತ್ರ

ಚೆಳ್ಳಗುರ್ಕಿ (ಬಳ್ಳಾರಿ ತಾಲ್ಲೂಕು): ಗ್ರಾಮದ ಎರ್ರಿತಾತ ದೇವಾಲಯದ ಕುಠೀರ ಆವರಣದಲ್ಲಿ ಉದ್ಯಾನ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣದ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸುವು ದಾಗಿ ವಿಧಾನ ಪರಿಷತ್ತಿನ ಸದಸ್ಯ ಕೆ.ಸಿ. ಕೊಂಡಯ್ಯ ಭರವಸೆ ನೀಡಿದರು.

ಬಳ್ಳಾರಿ ತಾಲ್ಲೂಕಿನ ಚೆಳ್ಳಗುರ್ಕಿ ಎರ್ರಿತಾತ ದೇವಾಲಯ ಆವರಣದಲ್ಲಿ ಬುಧವಾರ ಎರ್ರಿಸ್ವಾಮಿ ದಾಸೋಹ ಸೇವಾ ಸಂಘದ ಬೆಳ್ಳಿಹಬ್ಬದ ಮಹೋತ್ಸ ವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಿಸಲಾದ ಯಾತ್ರಿನಿವಾಸ ಕಟ್ಟಡ, ದಾಸೋಹ ಭವನ ಹಾಗೂ ರಂಗಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದ ಸಹಸ್ರಾರು ಭಕ್ತರು ಸುಸ ಜ್ಜಿತ ಉದ್ಯಾನ, ಎರ್ರಿತಾತ ಜೀವನ ಚರಿತ್ರೆ ಹಾಗೂ ಸಾಂಸ್ಕೃತಿಕ ವೈಭವವುಳ್ಳ ಭವನ ನಿರ್ಮಾಣದ ಕುರಿತು ಬೇಡಿಕೆ ಇಟ್ಟಿದ್ದಾರೆ. ಮುಖ್ಯಮಂತ್ರಿ ಅವರೊಂದಿಗೆ ಸುದೀಘ್ರ ವಾಗಿ ಚರ್ಚಿಸಿ, ಅವುಗಳ ನಿರ್ಮಾಣಕ್ಕೆ ಆದ್ಯತೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.

ಇದೊಂದು ತಪೋವನ. ಐತಿಹಾಸಿಕ ಪ್ರಸಿದ್ಧಿಯಾಗಿರುವ ಎರ್ರಿತಾತ ದೇವಾಲ ಯದ ಖ್ಯಾತಿ ಎಲ್ಲೆಲ್ಲೂ ಹಬ್ಬಿದೆ. ಇಂಥಹ ಕರ್ಮಭೂಮಿಗೆ ಪ್ರತಿಬಾರಿ ಭೇಟಿ ನೀಡಿ ಪ್ರಸಾದ ಸ್ವೀಕರಿಸುವ ನನಗೆ ಆ ತಾತನ ವರ ಇಷ್ಟಾರ್ಥ ಈಡೇರಿಸುವ ಜವಾಬ್ದಾರಿ ಯನ್ನು ವಹಿಸಿದ್ದೀರಿ. ಅದನ್ನು ಶಿರಸಾ ವಹಿಸಿ ನಿರ್ವಹಿಸುವೆ ಎಂದರು.

ವಿಧಾನ ಪರಿಷತ್ತಿನ ಸದಸ್ಯ ಅಲ್ಲಂ ವೀರಭದ್ರಪ್ಪ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿದಿನ ಸಾವಿರಾರು ಭಕ್ತರಿಗೆ ಅನ್ನದಾಸೋಹ ನೀಡುವ ಎರ್ರಿ ತಾತ ದೇವಾಲಯದ ಸನ್ನಿಧಿ ಪ್ರವಾಸಿ ತಾಣ ಆಗಬೇಕು. ಈ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ಸಕಲ ಜೀವಾತ್ಮರಿಗೂ ಲೇಸನು ಬಯಸುವ ಎರ್ರಿತಾತನವರ ವಿಚಾರಧಾರೆ ಯನ್ನು ಯುವಜನರು  ತಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳಬೇಕು. ಮಠ– ಮಂದಿರಗಳು ಜ್ಞಾನ ಮತ್ತು ಅನ್ನ ದಾಸೋಹ ನೀಡುವ ಕೇಂದ್ರಗಳು. ಅಂಥಹ ಕೇಂದ್ರಗಳ ಶ್ರೇಯೋಭಿವೃದ್ಧಿಗೆ ಸರ್ಕಾರಗಳು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ಜಿಲ್ಲೆಯ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮೇಶ್ವರ ಮಹಾ ಸ್ವಾಮಿ ಮಾತನಾಡಿ, ಶರಣರು, ಸಂತರು ಹಾಗೂ ಮಹಾತ್ಮರು ಅದ್ಭುತ ವ್ಯಕ್ತಿತ್ವ ಉಳ್ಳವರು. ಅವರ ವ್ಯಕ್ತಿತ್ವವನ್ನು ಬಣ್ಣಿ ಸಲು ಅಸಾಧ್ಯ ಎಂದರು.

ಜೀವನ ಸುಖ– ದುಃಖಗಳ ಸಮ್ಮಿ ಲನ. ಮನುಷ್ಯ ಕರ್ಮದ ಫಲ ಅನುಭ ವಿಸಲು ಪುನರ್ಜನ್ಮ ತಾಳುತ್ತಾನೆ. ನಿಷ್ಕಾಮಕರ್ಮ ಮಾಡುವವರಿಗೆ ಧರೆ ಯಿಂದ ಮುಕ್ತಿಯೇ ಇಲ್ಲ. ಎರ್ರಿತಾತ ಸಾಕ್ಷತ್‌ ಶಿವಸ್ವರೂಪಿಗಳು. ಅಂಥಹವರ ಸ್ಮರಣೆಯಿಂದ ಮೋಕ್ಷ ಪ್ರಾಪ್ತಿಯಾಗಲಿದೆ. ಶಿವನಾಮ ಸ್ಮರಣೆ ಮಾಡದಿದ್ದರೆ ಮನಷ್ಯ ಹಾಗೂ ಪ್ರಾಣಿಗಳಿಗೆ ವ್ಯತ್ಯಾಸ ಇರುವು ದಿಲ್ಲ ಎಂದು ತಿಳಿಸಿದರು.

ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ನಾಗೇಂದ್ರಯ್ಯ, ಸಿ.ಕೆ.ನಾಗನಗೌಡ ಅವ ರನ್ನು ಗಣ್ಯರು ಸನ್ಮಾನಿಸಿದರು.  ಕಮ್ಮರ ಚೇಡು ಮಠದ ಕಲ್ಯಾಣ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಡಬ್ಲ್ಯು ಸಮೂಹ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಟ್ಟಣ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಅಲ್ಲಂ ಪ್ರಶಾಂತ, ತಾಲ್ಲೂಕು ಪಂಚಾಯ್ತಿ ಸದಸ್ಯ ಗೋವಿಂದ, ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ, ಮುಖಂಡರಾದ ಪಿ.ಎಸ್‌. ಘನಮಲ್ಲನಗೌಡ, ಯಾಳ್ಪಿ ಪಂಪನಗೌಡ, ಆಂಧ್ರಪ್ರದೇಶದ ವಿಧಾನ ಪರಿಷತ್ತಿನ ಸದಸ್ಯ ಕೇಶವಲು,  ವಿಡಪನ ಕಲ್ಲು ಮಂಡಲ ಪರಿಷತ್ ಸದಸ್ಯ ಪ್ರತಾಪ ನಾಯ್ಡು, ಎರ್ರಿಸ್ವಾಮಿ ಟ್ರಸ್ಟ್‌ನ ಅಧ್ಯಕ್ಷ ಬಾಳನಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT