ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ವಿಜಯ್ ದೆವ್ವದ ವೇಷ!

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
ಸಂಚಾರಿ ವಿಜಯ್ ಅಭಿನಯದ ‘ರಿಕ್ತ’ ಸಿನಿಮಾ ಗುರುವಾರ (ಜ. 19) ತೆರೆಕಂಡಿದೆ. ಸುಮಾರು 60 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಚಿತ್ರದ ನಿರ್ದೇಶನ ಅಮೃತ್ ಕುಮಾರ್ ಅವರದು. ಕಳೆದ ನವೆಂಬರ್‌ನಲ್ಲೇ ಚಿತ್ರವನ್ನು ತೆರೆಗೆ ತರುವ ಯೋಚನೆ ನಿರ್ಮಾಪಕರದ್ದಾಗಿತ್ತು. ಆದರೆ ನೋಟುಗಳ ರದ್ದತಿ ಕಾರಣ ಬಿಡುಗಡೆ ಮುಂದೂಡಲಾಗಿತ್ತು.
 
ಚಿತ್ರೀಕರಣಕ್ಕಾಗಿ ವಿಜಯ್ ಸತತ 22 ಗಂಟೆ ದೆವ್ವದ ಉಡುಗೆ ತೊಟ್ಟಿದ್ದಾರೆ. ಮೂರು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಹಾರರ್ ಚಿತ್ರದಲ್ಲಿ ಸಂಚಾರಿ ವಿಜಯ್ ನಾಲ್ಕು ಛಾಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೆವ್ವವಾಗಿ ಹೆದರಿಸುವ ಬದಲು ಪ್ರೀತಿಯಲ್ಲಿ ಬೀಳಲಿದ್ದಾರಂತೆ.
 
‘ಈ ಚಿತ್ರಕ್ಕೆ ಬಹುತೇಕ ಹೊಸಬರೇ ಕೆಲಸ ಮಾಡಿದ್ದಾರೆ. ಅವರಿಗೆಲ್ಲವೂ ಬ್ರೇಕ್ ಸಿಗಲಿ’ ಎಂದರು ವಿಜಯ್. ದೆವ್ವವೆಂದರೆ ಮನುಷ್ಯ ಹೆದರುತ್ತಾನೆ. ಆದರೆ ಮನುಷ್ಯನ ವರ್ತನೆಗೆ ದೆವ್ವವೇ ಬೆದರಿರುವುದು ಚಿತ್ರದ ವಿಶೇಷ.
 
ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ ಸಂಭ್ರಮ ನಾಯಕಿ ವಾಗ್ದೇವಿ ಅದ್ವಿಕಾ ಅವರ ಮಾತುಗಳಲ್ಲಿತ್ತು. ಸಂಗೀತಾ ವರದನ್ ದೆವ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೊದಲ ಬಾರಿ ನಟಿಸಿರುವ ಸುಷ್ಮಿತಾ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸಬರಾದ ಮಾದೇಶ್, ಅಭಿಷೇಕ್, ಜಗದೀಶ್ ತಾರಾಗಣದಲ್ಲಿದ್ದಾರೆ. ಅರುಣ್ ಕುಮಾರ್ ನಿರ್ಮಾಣದ ‘ರಿಕ್ತ’ಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಹಾಡುಗಳ ಸಂಯೋಜನೆಗೆ ತಬಲಾ, ಸಿತಾರ್, ಮೃದಂಗದಂತಹ ಶಾಸ್ತ್ರೀಯ ವಾದ್ಯಗಳನ್ನು ಬಳಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT