ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಿಕಾ ಬಗ್ಗೆ ಗೊತ್ತಿಲ್ಲ ಎಂದ ಸೋನಂ

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
ಬಾಲಿವುಡ್‌ ನಟಿಯರ ಪರಸ್ಪರ ದ್ವೇಷ, ಕಾಲೆಳೆದಾಟ ಸಾಮಾನ್ಯವೇ ಆದರೂ ಬಹಿರಂಗ ಕಾರ್ಯಕ್ರಮಗಳಲ್ಲಿ, ಟಿವಿ ಷೋಗಳಲ್ಲಿ ಪರಸ್ಪರರ ಬಗ್ಗೆ ಉತ್ತಮ ಮಾತುಗಳನ್ನೇ ಆಡುತ್ತಾರೆ.
 
ಆದರೆ ಸೋನಂ ಕಪೂರ್ ಇದಕ್ಕೆ ಅಪವಾದ. ತನ್ನ ನೇರ ನುಡಿ, ಬಿಂದಾಸ್ ಶೈಲಿಯಿಂದ ಡೇರಿಂಗ್ ನಾಯಕಿ ಹಣೆಪಟ್ಟಿ ತನ್ನದಾಗಿಸಿಕೊಂಡಿರುವ ಸೋನಂ ಇತ್ತೀಚೆಗೆ ಸುದ್ದಿಯಲ್ಲಿರುವುದು  ದೀಪಿಕಾ ಪಡುಕೋಣೆ ಬಗ್ಗೆ ನೀಡಿದ ಹೇಳಿಕೆಯಿಂದ.
 
‘ಕಾಫಿ ವಿತ್‌ ಕರಣ್’ ಕಾರ್ಯಕ್ರಮದಲ್ಲಿ ಕರೀನಾ ಕಪೂರ್‌ ಜತೆ ಭಾಗವಹಿಸಿದ್ದ ಸೋನಂಗೆ ಷೋ ನಿರೂಪಕ ಕರಣ್‌ ಜೋಹರ್, ದೀಪಿಕಾ– ಸೋನಂ ಗೆಳೆತನದ ಬಗ್ಗೆ ಕೇಳಿದಾಗ ‘ದೀಪಿಕಾ ಬಗೆಗೆ ನನಗೆ ಏನೂ ಗೊತ್ತಿಲ್ಲ’ ಎಂದು ಉತ್ತರಿಸಿದ್ದಾರೆ ಸೋನಂ.
 
ಈ ಹೇಳಿಕೆ ಬಾಲಿವುಡ್‌ ಅಂಗಳದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ದೀಪಿಕಾ ಅವರ ವೃತ್ತಿ ಅಭಿವೃದ್ಧಿಯನ್ನು ಸಹಿಸದ ಸೋನಂ ಈ ಮಾತುಗಳನ್ನಾಡಿ ತಮ್ಮ ದ್ವೇಷ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT