ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತಾಹವೂ ಸ್ವಕಾರ್ಯವೂ

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚೆಗೆ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವು ವಿವೇಕಾನಂದರ ಆದರ್ಶ, ಧ್ಯೇಯಗಳನ್ನು ಪ್ರತಿಬಿಂಬಿಸದೆ, ಸರ್ಕಾರದ ಸಾಧನೆ ಬಿತ್ತರಿಸುವ ಕಾರ್ಯಕ್ರಮದಂತಿತ್ತು.

ಸಭೆಗೆ ಪ್ರತೀ ಕಾಲೇಜಿನಿಂದ ಎರಡು ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಕಳುಹಿಸುವಂತೆ ಪ್ರಾಂಶುಪಾಲರಿಗೆ ತಾಕೀತು ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಊಟ, ನೀರು, ತಿಂಡಿ ಹಾಗೂ ಟೀ ಶರ್ಟ್‌ಗಳನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಊಟ, ತಿಂಡಿಯ ಮಾತಿರಲಿ ಕುಡಿಯಲು ನೀರಿನ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿರಲಿಲ್ಲ.

ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ನೀಡುವ ಬದಲು ಅವರು ಮತ್ತೊಮ್ಮೆ ಇಂಥ ಕಾರ್ಯಕ್ರಮಗಳಿಗೆ ಬರದಂತಹ ಅನುಭವವನ್ನು ಅಧಿಕಾರಿಗಳು ದೊರಕಿಸಿಕೊಟ್ಟರು.ಮುಂದಾದರೂ ಇಂತಹ ನೆಪ ಮಾತ್ರದ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಸರ್ಕಾರ ಬಿಡಲಿ.
-ಕೌಡ್ಲೆರವಿ, ಕಿರಣ್ ಎಸ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT