ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಜಯರಾಮ್‌

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಸೈನಾ ಜಯದ ಓಟ
Last Updated 19 ಜನವರಿ 2017, 19:46 IST
ಅಕ್ಷರ ಗಾತ್ರ

ಸರವಾಕ್‌, ಮಲೇಷ್ಯಾ (ಪಿಟಿಐ):  ಗೆಲುವಿನ ಓಟ ಮುಂದುವರಿಸಿರುವ ಭಾರತದ ಸೈನಾ ನೆಹ್ವಾಲ್‌ ಮತ್ತು  ಅಜಯ್‌ ಜಯ ರಾಮ್ ಅವರು ಮಲೇಷ್ಯಾ ಮಾಸ್ಟರ್ಸ್‌ ಗ್ರ್ಯಾಂಡ್‌ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ ತಲುಪಿದ್ದಾರೆ.

ಮಹಿಳಾ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾ 21–17, 21–12 ರಲ್ಲಿ ಇಂಡೊನೇಷ್ಯಾದ ಹನ್ನಾ ರಾಮ ದಿನಿ ಎದುರು ಗೆಲುವು ಪಡೆದರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಭಾರತದ ಆಟಗಾರ್ತಿ ರಿಯೊ ಒಲಿಂಪಿಕ್ಸ್‌ನಲ್ಲಿ ಗುಂಪು ಹಂತದಲ್ಲಿ ಮುಗ್ಗರಿಸಿದ್ದರು. ಅವರು ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇತ್ತೀಚಿಗಷ್ಟೇ ಚೇತರಿಸಿಕೊಂಡಿದ್ದಾರೆ.

ಆರನೇ ಶ್ರೇಯಾಂಕ ಹೊಂದಿರುವ ಜಯರಾಮ್‌  ಪ್ರೀ ಕ್ವಾರ್ಟರ್‌ ಫೈನಲ್‌ ನಲ್ಲಿ 21–12, 15–21, 21–15ರಲ್ಲಿ ಚೀನಾ ತೈಪೆಯ ಸುಹ್‌ ಸುವಾನ್‌ ಯಿ ಎದುರು ಜಯಭೇರಿ ಮೊಳಗಿಸಿದರು. ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದ ಭಾರತದ ಎಲ್ಲಾ ಸ್ಪರ್ಧಿಗಳು ನಿರಾಸೆ ಅನುಭವಿಸಿದ್ದಾರೆ. ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಅಪರ್ಣಾ ಬಾಲನ್‌ ಮತ್ತು ಪ್ರಜಕ್ತಾ ಸಾವಂತ್‌ 18–21, 14–21ರಲ್ಲಿ  ಚೀನಾ ತೈಪೆಯ ಚಿಯಾಂಗ್‌ ಕೀ ಸಿನ್‌ ಹಾಗೂ ಹಂಗ್‌ ಶಿಹ್‌ ಹನ್‌ ಎದುರು ಸೋತರು.
ಪುರುಷರ ಡಬಲ್ಸ್‌ ವಿಭಾಗದಲ್ಲಿ ಮನು ಅತ್ರಿ ಮತ್ತು ಬಿ. ಸುಮಿತ್‌ ರೆಡ್ಡಿ  ಟೂರ್ನಿಯಿಂದ ಹೊರಬಿದ್ದರು ಈ ಜೋಡಿ 17–21, 21–18, 12– 21 ರಲ್ಲಿ  ಹ್ಯಾಂಡ್ರೆ ಅಪ್ರಿಡಾ–ಮಾರ್ಕಿಸ್‌ ಕಿಡೊ ಎದುರು ಸೋತಿತು.

ಇನ್ನೊಂದು ಪಂದ್ಯದಲ್ಲಿ ಎಂ.ಆರ್. ಅರ್ಜುನ್‌ ಮತ್ತು ಎಸ್‌. ರಾಮಚಂದ್ರನ್‌ 14–21, 17–21ರಲ್ಲಿ ಹಾಂಕಾಂಗ್‌ನ ಲಾ ಚೇಕ್‌ ಹಿಮ್‌ –ಲೀ ಚೌನ್‌ ಹೀ ವಿರುದ್ಧ ಪರಾಭವಗೊಂಡರು. ಮಲೇಷ್ಯಾದ ಯೋಗೀಂದ್ರನ್‌ ಕೃಷ್ಣನ್‌ ಜೊತೆ ಮಿಶ್ರ ಡಬಲ್ಸ್‌ ಆಡುತ್ತಿ ರುವ ಭಾರತದ ಆಟಗಾರ್ತಿ ಪ್ರಜಕ್ತಾ ಸಾವಂತ್ ಅವರಿಗೂ ಸೋಲು ತಪ್ಪಲಿಲ್ಲ. ಈ ಜೋಡಿ 17–21, 17–21ರಲ್ಲಿ ಎಂಟನೇ ಶ್ರೇಯಾಂಕ ಹೊಂದಿರುವ ಸಿಂಗಪುರದ ಯಂಗ್‌ ಕೀ ಟೆರ್ರಿ ಹೀ–ವೇಯಿ ಹನ್‌ ಟಾನ್‌ ಎದುರು ಸೋಲೊಪ್ಪಿಕೊಂಡಿತು.

ಜ್ವಾಲಾ ಗುಟ್ಟಾ ಹಾಗೂ ಮನು ಅತ್ರಿ 18–21, 10–21ರಲ್ಲಿ ಇಂಡೊನೇಷ್ಯಾದ ಟೊಂಟೊವಿ ಅಹ್ಮದ್–ಗ್ಲೋರಿಯಾ ಎಮಾನುಯುಲ್ಲೆ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT