ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿಗಳ ವರ್ತನೆ ಗೌರವಿಸುವಂತೆ ಇರಲಿ’

ಆನವಟ್ಟಿ: ಕ್ರೀಡಾ ಚಟುವಟಿಕೆ ಸಮಾರೋಪ ಸಮಾರಂಭ
Last Updated 20 ಜನವರಿ 2017, 8:37 IST
ಅಕ್ಷರ ಗಾತ್ರ

ಆನವಟ್ಟಿ: ‘ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ಬರುತ್ತಿದ್ದಂತೆ, ವಿಚಾರ ಮಾಡುವ ಮನೋಭಾವಗಳು ಬದಲಾಗುತ್ತವೆ. ನಿಮ್ಮ ನಡವಳಿಕೆ, ಹಾವಭಾವ ಗೌರವ ತರುವಂತೆ ಇರಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸುರೇಶ ಹಾವಣ್ಣನವರ್ ಕಿವಿಮಾತು ಹೇಳಿದರು.

ಇಲ್ಲಿನ ಎಚ್.ಜಯಪ್ಪ ರಂಗಮಂದಿರದಲ್ಲಿ ಈಚೆಗೆ ಆಯೋಜಿಸಲಾಗಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡೆ ಮತ್ತು ಸಂಸ್ಕೃತಿ ಎನ್‌್ಎಸ್‌ಎಸ್ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಂಕಗಳಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕ  ಓದುವುದು ಮುಖ್ಯ. ಆದರೆ, ಭವಿಷ್ಯದ ದೃಷ್ಟಿಯಿಂದ ಪಠ್ಯ ವಿಷಯಗಳ ಜೊತೆಜೊತೆಯಲ್ಲಿ ಪ್ರಾಪಂಚಿಕ ಜ್ಞಾನ, ದೇಶದಲ್ಲಿ ಆಗುತ್ತಿರುವ ಬದಲಾಣೆಗಳು, ಆರ್ಥಿಕ ಸ್ಥಿತಿಗತಿಗಳನ್ನು ಅವಲೋಕನ ಮಾಡಬೇಕು. ಹೊಸ ವಿಚಾರಧಾರೆಗಳನ್ನು ಹೊತ್ತು ತರುವ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಹಲವಾರು ವಿಷಯಗಳು, ಮಾಹಿತಿ, ಘಟನೆಗಳು ನಿಮ್ಮ ಗಮನಕ್ಕೆ ಬರುವು
ದರಿಂದ ನಿಮ್ಮ ಚಿಂತನೆಗಳು ಉತ್ತಮ ವಾಗುತ್ತವೆ’ ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಶುಂಪಾಲ ಎಚ್.ಜಯಪ್ಪ ಮಾತನಾಡಿ, ‘ತಂದೆ–ತಾಯಿಯರು ನಿಮ್ಮ ಭವಿಷ್ಯ ಚನ್ನಾಗಿರಬೇಕೆಂದು ಆಶಾ ಗೋಪುರ ಕಟ್ಟಿಕೊಳ್ಳುತ್ತಾರೆ. ಅವರ ಕನಸು ನನಸು ಮಾಡುವ ಕಡೆ ಗಮನಇರಲಿ. ವಿದ್ಯಾರ್ಥಿ ಜೀವನದಲ್ಲಿ ಸಣ್ಣಪುಟ್ಟ ತಪ್ಪುಗಳು ಆಗುವುದು ಸಹಜ. ಅವುಗಳನ್ನು ಮೆಟ್ಟಿನಿಂತು ನಿಮ್ಮ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನವಿರಲಿ’ ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜಾನ್ಯಾನಾಯ್ಕ್ ಮಾತನಾಡಿ, ‘ಶಿಕ್ಷಕರ ಪರಿಶ್ರಮದ ಜೊತೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ
ಹಾಕಿ ವಿದ್ಯಾಭ್ಯಾಸ ಮಾಡಿದರೆ ಉನ್ನತ ಸಾಧನೆ ಮಾಡಲು ಸಾಧ್ಯ’ ಎಂದು ತಿಳಿಸಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರದ ಸಭಿಕರನ್ನು ಮನೋರಂಜಿಸಿದವು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃಧಿ ಕಾರ್ಯಾಧ್ಯಕ್ಷ ಜರ್ಮಲೆ ಚಂದ್ರಶೇಖರ್, ಸಂಜೀವ್ ಲಕ್ಕವಳ್ಳಿ, ಉಪನ್ಯಾಸಕರಾದ ಪರಮೇಶ್ವರ್ ಮೊಗವೀರ್, ಮಹ್ಮದ್ ಹುಸೇನ್, ಮಂಜುನಾಥ, ಸುಮನಾ, ಬಿಂದು ಮಾಧವಾಚಾರ್, ದಿಗಂಬರ್, ಕಾಲೇಜು ಸಿಬ್ಬಂದಿ, ಪೋಷಕರು ಹಾಜರಿದ್ದರು. ಸೌಮ್ಯಾ ಮತ್ತು ದಿವ್ಯಾ ಕಾರ್ಯಕ್ರಮ  ನಿರೂಪಣೆ ಮಾಡಿದರು. ಯಶೋದಾ ವಂದನಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT