ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿ ವಿರುದ್ಧ ಉಪವಿಭಾಗಾಧಿಕಾರಿ ಗರಂ

ಮರಳು ಕಳ್ಳತನ: ­ತಾಲ್ಲೂಕು ಮರಳು ಉಸ್ತುವಾರಿ ಸಮಿತಿ ಸದಸ್ಯರ ಸಭೆಯಲ್ಲಿ ಅಸಮಾಧಾನ
Last Updated 20 ಜನವರಿ 2017, 8:57 IST
ಅಕ್ಷರ ಗಾತ್ರ

ಸಿಂದಗಿ:  ಅಕ್ರಮವಾಗಿ ಸಂಗ್ರಹಿಸಿಟ್ಟ 150 ಲಾರಿಯಷ್ಟು ಮರಳು ಜಪ್ತ ಮಾಡಲಾಗಿತ್ತು, ಇದರಲ್ಲಿನ 40 ಲಾರಿಯಷ್ಟು ಮರಳು ಕಳ್ಳತನವಾಗಿದೆ. ಇದಕ್ಕೆ ಯಾರು ಹೊಣೆಗಾರರು.  ಜಪ್ತಿ ಮಾಡಿದ ಕೂಡಲೇ ಪೊಲೀಸರು ಎಫ್.ಐ.ಆರ್ ಮಾಡಲಿಲ್ಲವೇಕೆ? ಕ್ರಮಕ್ಕೆ ವಿಳಂಬ ಮಾಡುವುದು ಒಂದು ರೀತಿಯಲ್ಲಿ ಹಗಲು ದರೋಡೆ. ಇದ್ದವರು ಮೂವರಲ್ಲಿ ಕದ್ದವರಾರು...? ಉತ್ತರ ಕೊಡಿ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಇಂಡಿ ಉಪವಿಭಾಗಾಧಿಕಾರಿ ಡಾ.ಶಂಕರ ವಣಕಿಹಾಳ ಅಧಿಕಾರಿಗಳನ್ನು ಈ ರೀತಿ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಗುರುವಾರ ಕರೆಯಲಾಗಿದ್ದ ತಾಲ್ಲೂಕು ಮರಳು ಉಸ್ತುವಾರಿ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರದ ಸಂಪನ್ಮೂಲ ಮರಳನ್ನು ಸಂರಕ್ಷಣೆ ಮಾಡುವುದು ಮರಳು ಉಸ್ತುವಾರಿ ಸಮಿತಿ ಎಲ್ಲ ಸದಸ್ಯರ ಜಂಟಿ ಜವಾಬ್ದಾರಿಯಾಗಿದೆ. ಮರಳಿನ ರಾಯಲ್ಟಿ ಸಂಗ್ರಹಣೆ ಯಲ್ಲಿ ಅಧಿಕಾರಿ ವರ್ಗ ವಿಫಲವಾಗಿದೆ. ಮರಳು ಮಾಫಿಯಾದಲ್ಲಿ ದೊಡ್ಡ, ದೊಡ್ಡ ವ್ಯಕ್ತಿಗಳು, ಜನಪ್ರತಿನಿಧಿಗಳಿದ್ದರೂ ಅಧಿಕಾರಿಗಳು ಪಾರದರ್ಶಕವಾಗಿ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.

ಅಕ್ರಮ ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಸಮಿತಿ ಯಾವುದೇ ಸದಸ್ಯರು ಪ್ರಕರಣ ದಾಖಲಿಸಬಹುದು ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಪ್ರವೃತ್ತಿ ಅಧಿಕಾರಿಗಳಲ್ಲಿ ಬೇಡ ಎಂದರು.

ಕಳೆದ ಡಿಸೆಂಬರ್ ನಲ್ಲಿ ಬಗಲೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 150 ಲಾರಿಯಷ್ಟು ಮರಳನ್ನು ಜಪ್ತಿ ಮಾಡಿ ಕಾನೂನಿನನ್ವಯ ಪಂಚನಾಮೆ ಮಾಡಿ ಪೊಲೀಸ್ ಇಲಾಖೆಗೆ ಲಿಖಿತವಾಗಿ ವರದಿ ಕೊಡಲಾಗಿತ್ತು. ಆದರೆ ಅವರು ಎಫ್.ಐ.ಆರ್ ಮಾಡಿಲ್ಲ ಎಂದು ಲೋಕೊಫಯೋಗಿ ಇಲಾಖೆ ಎಇಇ ಎಸ್.ಎಂ.ವಾಲಿ ದೂರಿದರು.

ಆಗ ಸಿ.ಪಿ.ಐ ಶರಣಗೌಡ ಹಾಗೂ ಪಿ.ಎಸ್.ಐ ನಿಂಗಣ್ಣ ಶಿವೂರ ಪಂಚನಾಮೆ ವರದಿಯಿಂದ ಮಾತ್ರ ಎಫ್.ಐ.ಆರ್ ಮಾಡುವುದಿಲ್ಲ ತಾವು ಬಂದು ಆ ಕಾರ್ಯ ಮಾಡಬೇಕಿತ್ತು ಎಂದಾಗ ಪೊಲೀಸ್ ಇಲಾಖೆ ಅಧಿಕಾರಿಯೂ ಸಮಿತಿ ಸದಸ್ಯರಾಗಿತ್ತಾರೆ ತಮ್ಮಜವಾಬ್ದಾರಿಯೂ ಇದೆ  ಹೇಳಿದರು.

₹3.70 ಲಕ್ಷ ಮೌಲ್ಯದ 40 ಲಾರಿ ಮರಳು ಕಳ್ಳತನವಾಗಿರುವ ಹಿನ್ನಲೆೆಯಲ್ಲಿ ಲೋಕೋಪಯೋಗಿ ಇಲಾಖೆ ಜೆಇ ಪಾಟೀಲ ಶಾಮೀಲು ಇದ್ದಾರೆ. ಸರ್ಕಾರಕ್ಕಾದ ಈ ಹಾನಿಯನ್ನು ತುಂಬುವವರಾರು.

ಸಮಿತಿ ಸಭೆ ಬರೀ ಚಹಾ ಕುಡಿದು ಹೋಗಲು ಅಲ್ಲ. ಮರಳು ಮಾಫಿಯಾ ಅಧಿಕಾರಿಗಳಿಗಿಂತ ಶಕ್ತಿಶಾಲಿ ಇದೆ ಎಂದು ಉಪವಿಭಾಗಾಧಿಕಾರಿ ಡಾ.ವಣಕಿಹಾಳ ಹೇಳುತ್ತಿದ್ದಂತೆ, ಆಲಮೇಲ ಉಪತಹಶೀಲ್ದಾರ ಕೆ.ಎ.ಕುಲಕರ್ಣಿ ಅಕ್ರಮ ಮರಳು ಸಾಗಾಣಿಕೆ ತಡೆದಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ಮರಳನ್ನು ರಸ್ತೆಯಲ್ಲಿ ಚೆಲ್ಲಿ ಹೋಗಿದ್ದಾರೆ ಎಂದರು.

ಇನ್ನು ಮೇಲೆ ರಾತ್ರಿಯಿಡಿ ದಿನಂಪ್ರತಿ ಸಮಿತಿ ಸದಸ್ಯರು ಬಗಲೂರು, ದೇವಣಗಾಂವ, ಚಿಕ್ಕಸಿಂದಗಿ, ದೇವರಹಿಪ್ಪರಗಿ ಈ ನಾಲ್ಕು ಚೆಕ್ ಪೋಸ್ಟ್ ಗಳ ಮೂಲಕ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಮುಂದಾಗಬೇಕು ಎಂದು ಉಪವಿಭಾಗಾಧಿಕಾರಿ ಸೂಚನೆ ನೀಡಿದರು.

ತಹಶೀಲ್ದಾರ್‌, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ಸಮಾಜಕಲ್ಯಾಣಾಧಿಕಾರಿ, ಅರಣ್ಯಾಧಿಕಾರಿ ಇತರ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT