ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರ ನಿರ್ಮಾಣಕ್ಕೆ ಸೇವಾದಳ ಪೂರಕ’

ತಿಳವಳ್ಳಿಯ ಶಾಂತೇಶ್ವರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಮಕ್ಕಳ ಮೇಳ
Last Updated 20 ಜನವರಿ 2017, 9:22 IST
ಅಕ್ಷರ ಗಾತ್ರ

ತಿಳವಳ್ಳಿ: ‘ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಪೂರಕವಾಗಿ ಯುವ ಶಕ್ತಿಯನ್ನು ಸಿದ್ಧಪಡಿಸಲು ಭಾರತ ಸೇವಾದಳವನ್ನು ಡಾ. ಹರ್ಡೀಕರ ಆರಂಭಿಸಿದರು. ಸ್ವಾತಂತ್ರ್ಯದ ನಂತರ ಪಕ್ಷಾತೀತ ಸಂಘಟನೆಯಾಗಿ ಭಾರತೀಯ ಸೇವಾದಳ ಪರಿವರ್ತನೆಗೊಂಡಿದ್ದು,  ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಬಗ್ಗೆ ಅರಿವು ಮೂಡಿಸುವ ಶಿಸ್ತನ್ನು ಪ್ರೇರೇಪಿಸುವ ಕಾರ್ಯದಲ್ಲಿ ಅದು ನಿರತವಾಗಿದೆ’ ಎಂದರು ಬಿಜೆಪಿ ಮುಖಂಡ ಸಿ.ಎಂ. ಉದಾಸಿ ನುಡಿದರು.

ಇಲ್ಲಿನ ಶಾಂತೇಶ್ವರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಭಾರತ ಸೇವಾದಳದ ರಾಷ್ಟ್ರೀಯ ಭಾವೈಕ್ಯ ಮಕ್ಕಳ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ಸೇವಾದಳ ಹಾನಗಲ್‌ ಘಟಕದ ಅಧ್ಯಕ್ಷರಾದ ಸಿ.ಎಸ್ ಪಾಟೀಲ್ ಮಾತನಾಡಿ, ‘ದೇಶವನ್ನು ಅಭದ್ರತೆಯಿಂದ ಕಾಪಾಡುವ ನಿಟ್ಟಿನಲ್ಲಿ ಸೇವಾದಳ ಕೆಲಸ ಮಾಡುತ್ತಿದೆ. ಕಳೆದ 66 ವರ್ಷಗಳಿಂದ ದೇಶ ಕಟ್ಟುವ ನಿಟ್ಟಿನಲ್ಲಿ ಜನರಲ್ಲಿ ದೇಶಭಿಮಾನ ಮೂಡಿಸಲಾಗುತ್ತದೆ’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಲಕ್ಷ್ಮೀಬಾಯಿ ಪಾಟೀಲ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಾಜೇಶ್ವರಿ ಕಲ್ಲೇರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಾನಪ್ಪ ಗಂಟೇರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಭು ಸುಣಗಾರ, ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಎಚ್.ಎನ್ ಮಾಡಳ್ಳಿಕರ, ಗಣೇಶಪ್ಪ ಕೋಡಿಹಳ್ಳಿ, ಹನುಮಂತಪ್ಪ ಶಿರಶಳ ಕೊಪ್ಪ, ಶಿವಯೋಗಿ ವಡೆಯರ್, ಶಿವಲಿಂಗಪ್ಪ ತಲ್ಲೂರ, ಬಸವರಾಜ ನರೇಂದ್ರ, ಕೃಷ್ಣಮೂರ್ತಿ ಉಪ್ಪಾರ, ಸಿ.ಎಸ್ ಬಡಿಗೇರ, ಸರಸ್ವತಿ ಜಾಡರ, ಮಮತಾ ಲಮಾಣಿ, ಬಿ.ಎಂ ಬೇವಿನ ಮರದ, ಮಾಲತೇಶ ಹೆಗಡಿಕಟ್ಟಿ, ಅಪ್ಪು ಶೆಟ್ಟಿ, ಎಸ್.ಎಲ್.ಬಾಬರ್, ಆರ್.ಬಿ ಉಪಾಸೆ, ಬಿ.ವಿ ಬಿರಾದರ, ಕೋಟೆಪ್ಪ ಸಿದ್ದೋಜಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT