ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವರಾಜ್‌ ಸಿಂಗ್‌ ‘ವೀರ ನಾಯಕ’ನಿದ್ದಂತೆ: ಅಮಿತಾಬ್‌ ಬಚ್ಚನ್‌

Last Updated 20 ಜನವರಿ 2017, 11:19 IST
ಅಕ್ಷರ ಗಾತ್ರ

ಮುಂಬೈ: ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಯುವರಾಜ್‌ ಸಿಂಗ್‌ ಅವರ ಆಟದ ಬಗ್ಗೆ ಬಾಲಿವುಡ್‌ ಬಿಗ್‌– ಬಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



ಭಾರತ ಆಂಗ್ಲರನ್ನು ಸದೆಬಡಿದಿದೆ...! ಎಂಬುದನ್ನು ಅಲಗೆಳೆಯುವಂತಿಲ್ಲ ಇದಕ್ಕೆ ಯುವರಾಜ್‌ ಸಾಕ್ಷಿ. ನೀವು  ಶ್ರೇಷ್ಠವಾದ ‘ವೀರ ನಾಯಕ’ ಎಂದು 74 ವರ್ಷದ ನಟ ಅಮಿತಾಬ್‌ ಬಚ್ಚನ್‌ ಯುವರಾಜ್‌ ಸಿಂಗ್‌ ಅವರ ಆಟದ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ಅಮಿತಾಬ್‌ ಬಚ್ಚನ್‌ ಅವರು ಕ್ರಿಕೆಟ್‌ ಆಟದ ಅಭಿಮಾನಿಯಾಗಿದ್ದು, ಭಾರತದ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.



‘ಕಟಕ್‌ನಲ್ಲಿ ನಡೆದ ಭಾರತ– ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನದಲ್ಲಿ ಆಂಗ್ಲರ ಮೇಲೆ ನಂಬಲಾಗದ ದಾಳಿಯನ್ನು ನಡೆಸಿದ್ದು, ಇದು ಅಸಾಧಾರಣ ಸಾಧನೆ’ ಎಂದು ಅಮಿತಾಬ್‌ ಮತ್ತೊಂದು ಟ್ವೀಟ್‌ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT