ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಸಾಂಗತ್ಯ, ಸಂಗೀತ ಗೌರವ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
ಸಂಗೀತಗಾರರ ಮನೆತನದಲ್ಲಿ ಜನಿಸಿದ ಬಿ.ವಿ. ರಾಧಾಕೃಷ್ಣ ಅವರು ಬಾಲ್ಯದಲ್ಲಿಯೆ ಸಂಗೀತದ ಕಡೆಗೆ ಒಲವು ಬೆಳೆಸಿಕೊಂಡವರು.
 
ತಂದೆ ಬಿ.ವೆಂಕಟಸುಬ್ಬಯ್ಯ, ತಾಯಿ ಕಮಲಮ್ಮ ಗಾಯಕರು ಮತ್ತು ಹಾರ್ಮೋನಿಯಂ ವಾದಕರಾಗಿದ್ದವರು. ರಾಧಾಕೃಷ್ಣ ಅವರ ಅಜ್ಜ ಚಿತ್ರದುರ್ಗದ ವೀಣೆ ವೆಂಕಟೇಶಶಾಸ್ತ್ರಿ.
 
ವಿ.ನಾಗೇಶ ರಾವ್ ಮತ್ತು ಬಿ.ಎಂ. ಮುನಿವೆಂಕಟಪ್ಪ ಅವರಲ್ಲಿ ಸಂಗೀತದ ಆರಂಭಿಕ ಶಿಕ್ಷಣ ಪಡೆದ ರಾಧಾಕೃಷ್ಣ ಅವರು,  ನಂತರ ಪಂ. ಶೇಷಾದ್ರಿ ಗವಾಯಿ ಅವರ ಬಳಿ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದರು. ನಂತರ ಪಿ. ಕಾಳಿಂಗರಾವ್, ಬಾಳಪ್ಪ ಹುಕ್ಕೇರಿ, ಮೈಸೂರು ಅನಂತಸ್ವಾಮಿ ಅವರ ಗಾಯನದಿಂದ ಸ್ಫೂರ್ತಿಗೊಂಡು ಸುಗಮ ಸಂಗೀತದ ಕಡೆಗೆ ಒಲವು ಹರಿಸಿದರು.
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗಳ ಕಾರ್ಯಕ್ರಮಗಳಲ್ಲಿ ನಿರಂತರ ಸಂಗೀತ ಸುಧೆ ಹರಿಸಿರುವ ರಾಧಾಕೃಷ್ಣ ಅವರು ತಮ್ಮದೇ ಆದ ತರಂಗಿಣಿ ವಾದ್ಯವನ್ನೂ ಆವಿಷ್ಕರಿಸಿದ್ದಾರೆ.
 
ಹಾರ್ಮೋನಿಯಂ, ತಬಲಾ ವಾದನದಲ್ಲೂ ಪರಿಶ್ರಮ ಹೊಂದಿರುವ ರಾಧಾಕೃಷ್ಣ ಅವರು ಆಕಾಶವಾಣಿಯ ‘ಬಿ’ ಗ್ರೇಡ್‌ ಶ್ರೇಣಿಯ ಕಲಾವಿದರು ಕೂಡಾ.
 
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ, ಪಿ. ಕಾಳಿಂಗರಾವ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವ ರಾಧಾಕೃಷ್ಣ ಅವರನ್ನು ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಭಾನುವಾರ ‘ಸಂಗೀತ ಗೌರವ’ ನೀಡಿ ಸನ್ಮಾನಿಸುತ್ತಿದೆ.
 
**
ಯುವ ಹಿಂದೂಸ್ತಾನಿ ಸಂಗೀತ ಸಾಂಗತ್ಯ, ಸಂಗೀತ ಗೌರವ: ಭಾನುವಾರ ಬೆಳಿಗ್ಗೆ 10.30ಕ್ಕೆ ಗಾಯನ– ರೇವಂತ್ ಆರ್. ಮಾಳಿಗೆ,
ಬೆಳಿಗ್ಗೆ 11.30ಕ್ಕೆ ವೇದಿಕೆ ಕಾರ್ಯಕ್ರಮ: ಉದ್ಘಾಟನೆ–ರವೀಂದ್ರನಾಥ ಸಿರಿವರ, ಸಂಗೀತ ಗೌರವ– ಪಂ. ಬಿ.ವಿ.ರಾಧಾಕೃಷ್ಣ ಅವರಿಗೆ, ಅಭಿನಂದಿಸುವವರು–ಎನ್.ಆರ್.ವಿಶುಕುಮಾರ್, ಅಧ್ಯಕ್ಷತೆ–ಶ್ಯಾಮಲಾ ಜಿ. ಭಾವೆ, 
ಮಧ್ಯಾಹ್ನ 12.30ಕ್ಕೆ ಗಾಯನ– ಬಿ.ವಿ.ರಾಧಾಕೃಷ್ಣ,
ಮಧ್ಯಾಹ್ನ 2ಕ್ಕೆ ಗಾಯನ– ಶ್ರೀನಿವಾಸ ಭಾಗವತ್‌, ಮಧ್ಯಾಹ್ನ 3ಕ್ಕೆ ಗಾಯನ–ಸಹನಾ ಹೆಗಡೆ,
ಸಂಜೆ 4ಕ್ಕೆ ತಬಲಾ ವಾದನ–ಜಲೀಲ್‌ ಪಾಷಾ ಮುದ್ದಾಬಳ್ಳಿ, ರೂಪಕ್ ಕಲ್ಲೂರ್‌ಕರ್‌,
ಸಂಜೆ 5ಕ್ಕೆ ಗಾಯನ– ನಯನಾ ಯಾವಗಲ್,
ಸಂಜೆ 6ಕ್ಕೆ ಗಾಯನ– ಅಶೀಶ್‌ ಜಿ.ನಾಯಕ್‌,
ರಾತ್ರಿ 7ಕ್ಕೆ ಗಾಯನ–ಪಂ.ವೆಂಕಟೇಶ್‌ ಆಲ್ಕೋಡ್‌. ಆಯೋಜನೆ–ಭಾಗವತರು ಸಾಂಸ್ಕೃತಿಕ ಸಂಘಟನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಸ್ಥಳ: ನಯನ ರಂಗಮಂದಿರ,  ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ.ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT